
ಕಲಬುರಗಿ,ಜು.22-ಮನುಷ್ಯನ ಜೀವನದಲ್ಲಿ ಪ್ರತಿಯೊಂದು ರೀತಿ ಆರೋಗ್ಯ ಕಡೆ ಹೆಚ್ಚು ಗಮನ ಕೊಡಬೇಕು ಇವತ್ತಿನ ದಿನಮಾನಗಳಲ್ಲಿ ಒಳ್ಳೆ ರೀತಿಯ ಆಹಾರ ಪದಾರ್ಥಗಳನ್ನು ಸಿಗುತ್ತಿಲ್ಲ ಅದಕ್ಕಾಗಿ ನಾವು ಆರೋಗ್ಯದ ಕಡೆ ಹೆಚ್ಚು ಒಲವು ತೋರಿಸುದು ಬಹಳ ಮುಖ್ಯ. ಅದಕ್ಕಾಗಿ ನಾವೆಲ್ಲರೂ ಒಳ್ಳೆಯ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಮರೆಯಬಾರದು ಎಂದು ಡಾ.ನಿರಂಜನ್ ನಿಷ್ಠಿ ಕರೆ ನೀಡಿದರು.
ಅವರು ತಮ್ಮ ಆಸ್ಪತ್ರೆಯಲ್ಲಿ 67ನೇ ಜನ್ಮದಿನದ ಪ್ರಯುಕ್ತ ಹಲವಾರು ರೀತಿಯ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ನನ್ನ ಕೈಯಿಂದ ಎಷ್ಟು ಸಾಧ್ಯ ಅಷ್ಟು ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಬಂದ ರೋಗಿಗಳನ್ನು ಒಳ್ಳೆಯ ರೀತಿಯಿಂದ ಉಪಚಾರ ಮಾಡುತ್ತೇವೆ ಅದಕ್ಕಾಗಿ ತಾವೆಲ್ಲರೂ ತಮಗೇನಾದರೂ ಶರೀರದಲ್ಲಿ ದೋಷ ಕಂಡು ಬಂದರೆ ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ತಕ್ಷಣ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ ಎಂದು ಅವರು ತಿಳಿಸಿದರು. ವೇದಿಕೆಯ ಮೇಲೆ ನಂದಿನಿ ಎನ್ ನಿಷ್ಠಿ, ಶರಣಮ್ಮ ಡಾ.ನಿಧೀಶ್ ನಿಷ್ಠಿ, ವರ್ಷಿಣಿ, ಡಾ.ಶಿವಲಿಂಗ ನಿಷ್ಠಿ ಅಲ್ಲದೆ ಅನೇಕರು ಭಾಗವಹಿಸಿದ್ದರು.
ನಾಗಭೂಷಣ್ ನಂದ್ಯಾಳ್, ಪ್ರಸನ್ನ ದೇಶಪಾಂಡೆ, ಸಾಜಿದ್, ರಾಜಕುಮಾರ್, ಸಂತೋಷ್, ಇಸ್ಮಾಯಿಲ್, ಪ್ರಜ್ವಲ್, ವೀರೇಶ್, ಶ್ರೀಕಾಂತ್, ಸಂತೋಷ್, ಬಸಲಿಂಗ, ಮಹೇಶ್, ಗುರುರಾಜ್, ನವೀನ್, ಶ್ರೀ ಗುರು ಸ್ವಾಮಿ ಅಲ್ಲದೆ ಅನೇಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನಿರೂಪಣೆಯನ್ನು ವೇದಮೂರ್ತಿ ಶಿವಲಿಂಗಯ್ಯ ಶಾಸ್ತ್ರಿಗಳು ಗರೂರು ನಡೆಸಿಕೊಟ್ಟರು.































