
ಕಲಬುರಗಿ: ನಗರದ ಸುಪ್ರಸಿದ್ಧ ಕೆಬಿಎನ್ ಆಸ್ಪತ್ರೆಯ ಇಎನ್ ಟಿ ದಂತ ವಿಭಾಗದಲ್ಲಿ ಡಿಮಿಸ್ಟಿಫೈಯಿಂಗ್ ಅಲರ್ಜಿಕ್ ರೈಟಿಸ್ ಕಾರ್ಯಾಗಾರವನ್ನು ರವಿವಾರ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮೆಡಿಕಲ್ ಡೀನ್ ಡಾ. ಗುರುಪ್ರಸಾದ ಅವರು, ಕಾರ್ಯಕ್ರಮಕ್ಕೆ ಚಾಲನೆ ನೀಡ ಮಾತನಾಡುತ್ತ, ಕೆಬಿಎನ್ ಆಸ್ಪತ್ರೆ ನೂತನ ನವನವೀನ ಕೌಶಲ್ಯ ಅಳವಡಿಸಿಕೊಳ್ಳುತ್ತದೆ. ಕೆಬಿಎನ್ ಆಸ್ಪತ್ರೆ ಯಾವಾಗಲೂ ಬಡವರ ಸೇವೆಗೆ ಸಿದ್ದವಾಗಿದ್ದು ಅದರಲ್ಲೂ ಇಎನ್ ಟಿ ವಿಭಾಗ ಸದಾ ಒಂದು ಹೆಜ್ಜೆ ಮುಂದಿದೆ ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಿದ್ದಲಿಂಗ ಚೆಂಗಟಿ ಮಾತನಾಡಿ, ಇಎನ್ ಟಿ ವಿಭಾಗ ಸದಾ ಕ್ರಿಯಾಶೀಲವಾಗಿರುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಮಾಡಲಿ ಎಂದು ಹಾರೈಸಿದರು.
ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಡಾ. ಗಾಯತ್ರಿ ಎಸ್ ಪಂಡಿತ್, ಬೆಂಗಳೂರು ಮೆಡಿಕೇರಿ ಇಎನ್‍ಟಿ ಸೂಪರ್ ಸ್ಪೆಷಾಲಿಟಿ ಕೇಂದ್ರದ ಡಾ.ಶ್ರುತಿ ಮಂಜುನಾಥ್, ಡಾ.ಶ್ರದ್ಧಾ ಪವಾರ್( ವೆಲ್ಲೂರು) ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಸುಮಾರು 180 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಕಾರ್ಯಕ್ರಮದಲ್ಲಿ ಆಸ್ಪತ್ರೆ ಆಡಳಿತ ಅಧಿಕಾರಿ ಡಾ ರಾಧಿಕಾ, ಬಸವೇಶ್ವರ ಆಸ್ಪತ್ರೆಯ ಮೆಡಿಕಲ್ ಸೂಪೇರಿಟೆಂಡೆಂಟ್ ಡಾ ಮಲ್ಲಿಕಾರ್ಜುನ, ಈ ಎಸ್ ಐ ಆಸ್ಪತ್ರೆಯ ಈ ಎನ್ ಟಿ ಮುಖಸ್ತ ಡಾ ಅನಿಲ್ ದೊಡಮನಿ, ಜಿಮ್ಸ್ ಆಸ್ಪತ್ರೆಯ ಡಾ ರೇಣುಕಾ, ವಿಭಾಗದ ಮುಖ್ಯಸ್ತ ಡಾ ರಾಜೀವ್ ರೆಡ್ಡಿ,ಡಾ.ಸೈಯದ್ ಮುಷ್ತಾಕ, ಡಾ.ರಜನೀಶ್ ಕೆ, ಡಾ.ದೀಪಿಕಾ ಡಾ.ಶಾಫಿ ಮಝರ, ಡಾ.ಭಾವನಾ ಡಾ.ಶೋಯಬ್ ಅಮೀರ, ಡಾ.ಆಯೇಷಾ ಸಿದ್ದಿಕಿ, ಡಾ.ವೈಷ್ಣವಿ ಡಾ.ಸಮೀರಾ, ಡಾ.ಪದ್ಮ, ಡಾ ಸಚಿನ್ ಶಾಹ, ಡಾ ಚಂದ್ರಕಲಾ, ಡಾ ಸಂಗೀತಾ, ಡಾ ಅಸ್ಮಾ, ಮುಂತಾದವರು ಹಾಜರಿದ್ದರು. ಡಾ. ಫೈಜಾ ರಹಮತ್ ನಿರೂಪಿಸಿದರು. ಶ್ರುತಿ ಮತ್ತು ಮೆಹಮೂದ ಪ್ರಾರ್ಥಿಸಿದರು. ಡಾ.ಸಮೀರ ಸ್ವಾಗತಿಸಿದರು. ಡಾ ಆಯಿಷಾ ವಂದಿಸಿದರು.































