
ಕಲಬುರಗಿ: ಹೃದಯ-ಶ್ವಾಸಕೋಶ ಪುನಶ್ಚೇತನ ದಿನದ ಅಂಗವಾಗಿ ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸಿಪಿಆರ್ ಜಾಗೃತಿ ದಿನಾಚರಣೆಯನ್ನು ಕೆಬಿಎನ್ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗ ಹಾಗೂ ಇಂಡಿಯನ್ ಅಕಾಡೆಮಿ ಒಫ್ ಪೇಡಿಯಾಟ್ರಿಕ್ಸ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಆಸ್ಪತ್ರೆಯ ಮೆಡಿಕಲ್ ಸೂಪೇರಿಟೆಂಡೆಂಟ್ ಡಾ. ಸಿದ್ಧಲಿಂಗ ಚೆಂಗಟಿ ಅವರು, ಮಾತನಾಡಿ ಸಿಪಿಆರ್ ಕುರಿತಾದ ಮಾಹಿತಿ ನೀಡಿದರು, ಯಾವಾಗ ಸಿಪಿಆರ್ ಬಳಸಬೇಕು, ಅದರ ಅವಶ್ಯಕ ಮತ್ತು ಭಾರತದಲ್ಲಿ ಸಿಪಿಆರ್ ಜಾಗ್ರತೆಯ ಬಗ್ಗೆ ಹೇಳುತ್ತಾ ಸಿಪಿಆರ್ ನ ತಂತ್ರಾಶಗಳನ್ನು ಸವಿಸ್ತಾರವಾಗಿ ವಿವರಿಸಿದರು.
ವಿಭಾಗದ ಪ್ರಾಧ್ಯಾಪಕರಾದ ಡಾ. ಚರಣರಾಜ ಚೈಲ್ಡ್ ಸಿಪಿಆರ್ ಬಗ್ಗೆ ಉಪನ್ಯಾ ನೀಡಿದರು, ಮಗುವಿಗೆ ಸಿಪಿಆರ್ ಮಾಡಲು ಕನಿಷ್ಠ ಒಂದು ವರ್ಷ ವಯಸ್ಸು ಇರಬೇಕು ಎಂದರು. ವಿಭಾಗದ ಡಾ. ವಿಜಯ ಸಿಪಿಆರ್ ಚೋಕ್ಸಕುರಿತಾದ ಬಗ್ಗೆ ತಿಳಿ ಹೇಳಿದರು.
ಮೆಡಿಕಲ್ ಡೀನ ಡಾ. ಗುರುಪ್ರಸಾದ ವಿಭಾಗಕ್ಕೆ ಅಭಿನಂದಿಸಿದರು. ಅಣುಕು ಪ್ರದರ್ಶನ ನೋಡಿ ಪಿಜಿ ಹಾಗೂ ಸಿಬ್ಬಂದಿಗಳ ಸಮಯ ಪ್ರಜ್ಞೆಯನ್ನು ಶ್ಲಾಘಸಿದರು. ವಿದ್ಯಾರ್ಥಿಗಳಿಗೆ ಡೆಮೋ ನೀಡಲಾಯಿತು. ಅಲ್ಲದೇ ಅವರಿಗೆ ಪ್ರಾಕ್ಟಿಸ್ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ, ಮೆಡಿಸಿನ್ ವಿಭಾಗದ ಹೊರ ರೋಗಿಯ ತುರ್ತು ಪರಿಸ್ಥಿತಿಯಲ್ಲಿ ಸೀನಿಯರ ಪಿಜಿ ಸ್ಟ್ರೇಚೆರ್ ನಲ್ಲಿಯೇ ಸಿಪಿಆರ್ ಮಾಡುತ್ತ ಆಸ್ಪತ್ರೆಯ ಸಿಬ್ಬಂದಿ ಅವರನ್ನು ಚಿಕಿತ್ಸೆಗೆ ಕರೆದುಕೊಂಡ ಹೋದ ಸಿಸಿಟಿವಿ ವಿಡಿಯೋ ತುಣುಕನ್ನು ತೋರಿಸಿ ವಿದ್ಯಾರ್ಥಿಗಳಿಗೆ ಸಿಪಿಆರ್ ಮಹತ್ವ ವಿವರಿಸಿದರು.
ವಿಭಾಗದ ಮುಖ್ಯಸ್ಥ ಡಾ. ವಿನೋದ ಉಪಳಾoವ್ಕರ ಕಾರ್ಯಕ್ರಮವನ್ನು ನಿರೂಪಿಸಿದರು. ಆಡಳಿತ ಅಧಿಕಾರಿ ಡಾ. ರಾಧಿಕಾ, ಡಾ. ರಾಜು ಮಾಲಿ ಹಾಗೂ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು.































