Home ಜಿಲ್ಲೆ ಒಳ ಮೀಸಲಾತಿ ಜಾರಿಗೆ ಸಂತಸ

ಒಳ ಮೀಸಲಾತಿ ಜಾರಿಗೆ ಸಂತಸ

ತಾಳಿಕೋಟೆ:ಏ.೨೮: ಮಾದಿಗರ ಸಮಾಜದ ಬಹಳ ವರ್ಷಗಳ ಬೇಡಿಕೆಯಾದ ಒಳ ಮೀಸಲಾತಿಯನ್ನು ನೀಡುವ ನಿರ್ಣಯ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ನಿರ್ಧಾರವನ್ನು ಸಮಾಜದ ಪರವಾಗಿ ಸಮಾಜದ ಯುವ ಮುಖಂಡ ಗೋಪಾಲ ಕಟ್ಟಿಮನಿ ಸ್ವಾಗತಿಸಿ ಅಭಿನಂದಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಒಳ ಮೀಸಲಾತಿ ಕೊಡುವ ಬಗ್ಗೆ ೨೦೨೩ ರ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಸಮಾಜ ಬಾಂಧವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕಾಂಗ್ರೆಸ್ಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ಕೊಡುವ ನಿರ್ಣಯ ತೆಗೆದುಕೊಳ್ಳುವದಾಗಿ ಭರವಸೆ ನೀಡಿದ್ದರು ಅದರಂತೆ ಇದೀಗ ವಿಳಂಬವಾದರೂ ಕೊಟ್ಟ ಮಾತಿನಂತೆ ನಡೆದುಕೊಂಡು ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಅವರಿಗೆ ಅವರ ಸಂಪುಟದ ಎಲ್ಲ ಸಚಿವರಿಗೆ ಹಾಗೂ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್. ನಾಡಗೌಡ(ಅಪ್ಪಾಜಿ)ಅವರಿಗೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ.