Home ಮುಖಪುಟ ಸುದ್ದಿ ಸ್ಟಿಂಗ್ ವ್ಯಕ್ತಿಗೆ ಸರ್ಕಾರ ಶರಣು

ಸ್ಟಿಂಗ್ ವ್ಯಕ್ತಿಗೆ ಸರ್ಕಾರ ಶರಣು

ಬೆಂಗಳೂರು, ಅ. ೧೭- ಸ್ಟಿಂಗ್ ಆಪರೇಷನ್ ಹಿಂದೆ ಇರುವುದು ವೈಯಕ್ತಿಕ ದ್ವೇಷವಲ್ಲ, ಸರ್ಕಾರ ಸ್ಟಿಂಗ್ ನಡೆಸಿರುವ ವ್ಯಕ್ತಿಗೆ ಸರೆಂಡರ್ ಆಗಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ


ನೂತನ ರಾಜ್ಯಪಾಲರಾದ ಸುಧಾ ಯಾದವ್ ಲೋಕಭವನದಲ್ಲಿ ಭೇಟಿ ಮಾಡಿ ಶುಭಾಶಯ ಕೋರಿದ ನಂತರ ಲೋಕಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು


ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು ಸರ್ಕಾರ ಹೆದರಿದೆ, ಆ ವ್ಯಕ್ತಿಗೆ ಸರೆಂಡರ್ ಆಗಿದೆ
ಸಿಎಂ ಡಿಕೆ ಶಿವಕುಮಾರ್ ದು ಸ್ಟಿಂಗ್ ಆಗಿರಬಹುದು. ಸ್ಟಿಂಗ್ ಮಾಡಿ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರಬಹುದು” ಎಂದು ಮಾರ್ಮಿಕವಾಗಿ ಹೇಳಿದರು
ಆ ವ್ಯಕ್ತಿಗೆ ಸರ್ಕಾರ ಸರೆಂಡರ್ ಆಗಿದೆ. ಸರ್ಕಾರ ಆ ವ್ಯಕ್ತಿಗೆ ಹೆದರಿದೆ. ಆ ವ್ಯಕ್ತಿ ಕಾಲ್ ಮೇಲೆ ಕಾಲ್ ಹಾಕಿಕೊಂಡು ಕುಳಿತಿದ್ದಾರೆ. ಪೊಲೀಸರ ಮುಂದೆ ಕಾಲ್ ಮೇಲೆ ಕಾಲ್ ಹಾಕಿ ಕುಳಿತಿದ್ದಾರೆ. ಯಾಕೆ ಆ ವ್ಯಕ್ತಿಗೆ ಸರೆಂಡರ್ ಆಗಿದೆ ಸರ್ಕಾರ ಎಂದು ಪ್ರಶ್ನಿಸಿದರು
“ವೈಯಕ್ತಿಕ ದ್ವೇಷಕ್ಕೆ ನಾನು ಇದನ್ನು ಮಾಡುತ್ತಿಲ್ಲ.


ಮಾಧ್ಯಮದ ಹೆಸರಿನಲ್ಲಿ ಮಾಧ್ಯಮಕ್ಕೆ ಕಳಂಕ ತರುವ ಕೆಲಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, “ರಾಜ್ಯ ಈ ದೇಶಕ್ಕೆ ಪತ್ರಿಕೋದ್ಯಮಕ್ಕೆ ಮಾದರಿಯಾಗಿತ್ತು. ಈಗ ದುಡ್ಡು ಹೊಡೆಯುವ ದಂದೆಯನ್ನು ಮಾಧ್ಯಮದ ಹೆಸರಿನಲ್ಲಿ ಮಾಡಲಾಗುತ್ತಿದೆ. ಸಿಎಂ ಸೇರಿದಂತೆ ಅನೇಕರನ್ನು ಟ್ರ್ಯಾಪ್ ಮಾಡಿ ಕೈಗೊಂಬೆ ಮಾಡಿಟ್ಟುಕೊಂಡಿರಬಹುದು” ಎಂದು ಶಂಕೆ ವ್ಯಕ್ತಪಡಿಸಿದರು.


೨೦೧೧ ಅಲ್ಲ, ೨೦೨೩ರಲ್ಲಿ ಪ್ರಕರಣ ನಡೆದಿದೆ


೨೦೧೧ರಲ್ಲಿ ಆ ಪ್ರಕರಣ ನಡೆದಿದೆ ಎಂದುಕೊಂಡಿದ್ದೆ. ಆದರೆ ೨೦೨೩ರಲ್ಲಿ ಇದು ಮಾಡಿರುವುದು ಈಗ ಗೊತ್ತಾಗುತ್ತಿದೆ. ಆ ವ್ಯಕ್ತಿಯ ಬಾಯಲ್ಲೇ ಬಂದಿದೆ. ಯಾವ ರೀತಿ ತನಿಖೆ ಮಾಡುತ್ತಾರೆ, ಈ ಸರ್ಕಾರ ಇದರಲ್ಲಿ ಹೇಗೆ ನಡೆಯುತ್ತದೆ ಎಂಬುದನ್ನು ನೋಡಬೇಕು ಎಂದು ಕುಮಾರಸ್ವಾಮಿ ಹೇಳಿದರು


ಸಿಜೆಪಿಗೆ ಫಂಡ್: ಗೃಹ ಸಚಿವರಿಗೆ ಪ್ರಶ್ನೆ


ಸಿಜೆಪಿಗೆ ಸರ್ಕಾರ ಫಂಡ್ ಕೊಡದೆಯೇ ನಡೆಯುತ್ತಾ? ಎಷ್ಟು ಫಂಡ್ ಕೊಡುತ್ತಿದ್ದಾರೆಂದು ಹೇಳಬೇಕು. ಗೃಹ ಸಚಿವರೇ ಹೇಳಿದ್ದಾರಲ್ಲ ಕಾಂಗ್ರೆಸ್ ಹಾಗೂ ಸಿಜೆಪಿ ಒಂದು ಎಂದು. ಅವರಿಗೆ ಕೇಳಬೇಕು ಎಷ್ಟು ಫಂಡ್ ಕೊಡುತ್ತಿದ್ದಾರೆಂದು ಎಂದು ಕುಮಾರಸ್ವಾಮಿ ಸವಾಲು ಹಾಕಿದರು


ರಾಜ್ಯಪಾಲರಿಗೆ ಶುಭಾಶಯ


ರಾಜ್ಯದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಅವರು ನಿನ್ನೆ ಅಧಿಕಾರ ಸ್ವೀಕಾರ ಮಾಡಿದರು
ಅವರಿಗೆ ಶುಭಕೋರಿದ್ದೇವೆ.


ರಾಜಕೀಯದ ಚರ್ಚೆಯನ್ನ ಮಾಡಿಲ್ಲ ಎಂದರು

ರಾಜ್ಯ ಕ್ಲೀಷ್ಟಕರ ಪರಿಸ್ಥಿತಿಯಲ್ಲಿರುವಾಗ.
ರಾಜ್ಯಪಾಲರಾಗಿ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ
ಈ ರಾಜ್ಯ ಆಡಳಿತದಲ್ಲಿ ದಾರಿ ತಪ್ಪುವ ಹಂತದಲ್ಲಿದೆ
ಹೀಗಾಗಿ ರಾಜ್ಯಪಾಲರು ಅನುಭವದಿಂದ
ರಾಜ್ಯದಲ್ಲಿನ ಕ್ಲಿಷ್ಟಕರ ಪರಿಸ್ಥಿತಿ ನಿವಾರಣೆ ಆಗಲಿ
ಭಗವಂತ ಅವರಿಗೆ ಶಕ್ತಿ ಕೊಡಲಿದಎಂದು ಕುಮಾರಸ್ವಾಮಿ ಹೇಳಿದರು