
ಔರಾದ್ :ಮೇ.12: ಪ್ರತಿಭಾವಂತರಿಗೆ ಹಲವು ಕ್ಷೇತ್ರಗಳಲ್ಲಿ ಅವಕಾಶಗಳಿವೆ, ತಮ್ಮ ಪ್ರತಿಭೆಗೆ ತಕ್ಕ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಉತ್ತಮ ಸಾಧನೆ ಸಾಧ್ಯ ಎಂದು ಉದ್ಯಮಿ ಅವರ ಎಡವೆ ಹೇಳಿದರು.
ಪಟ್ಟಣದ ಘೂಳೆ ಬಡಾವಣೆಯ ಅನುಭವ ಮಂಟಪದಲ್ಲಿ ವಚನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಡಾ.ಚನ್ನಬಸವ ಪಟ್ಟದೇವರ ವಿದ್ಯಾರ್ಥಿ ನಿಧಿ 2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಚನ ಚಾರಿಟೇಬಲ್ ಟ್ರಸ್ಟ್ ಔರಾದ ಶಾಖೆ ಅದ್ಬುತ ಕಾರ್ಯ ಮಾಡುತ್ತಿದ್ದೆ ವರ್ಷ ಪೂರ್ತಿ ಸಾಮಾಜಿಕ, ಸಾಂಸ್ಕøತಿಕ, ಶೈಕ್ಷಣಿಕ, ಧಾರ್ಮಿಕ, ವೈಜ್ಞಾನಿಕ, ವೈಚಾರಿಕ ಕಾರ್ಯಕ್ಕೆ ಕೈ ಜೊಡಿಸುತ್ತಿರುವದು ಶ್ಲಾಘನೀಯ ಕಾರ್ಯ ಎಂದರು.
ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಅವರು ಮಾತನಾಡಿ ತಾಲ್ಲೂಕಿನ ಪ್ರತಿಭಾವಂತ ಮಕ್ಕಳಿಗೆ ಗುರುತಿಸಿ ವಚನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪೆÇ್ರೀತ್ಸಾಹಿಸಿ ನಗದು ಬಹುಮಾನ ನೀಡುತ್ತಿರುವುದು ಶ್ಲಾಘನೀಯ ಎಂದರು.
ವಚನ ಚಾರಿಟೇಬಲ್ ಟ್ರಸ್ಟ್ ಜಿಲ್ಲಾ ಅಧ್ಯಕ್ಷ ಶಿವಶಂಕರ ಟೊಕರೆ ಮಾತನಾಡಿ ವಚನ ಸಂಸ್ಥೆ ಹೊಸ ಪರಿಕಲ್ಪನೆ ಇಟ್ಟುಕೊಂಡು ಜಿಲ್ಲೆಯಲ್ಲಿ ಸುಮಾರು 5 ಸಾವಿರ ಕುಟುಂಬಗಳಿಗೆ ಆರ್ಥಿಕ ಸದೃಢ ನೀಡುತ್ತ ಅನೇಕ ಸಮಾಜಿಕ, ದಾಸೋಹ, ಮಕ್ಕಳ ಶೈಕ್ಷಣಿಕ, ಸಮಾಜದಲ್ಲಿ ನೈತಿಕ ಹೊಣೆಗಾರಿಕೆಯ ಕಾರ್ಯ ಹೇಗೆ ನಿರ್ವಹಿಸಬೇಕು ಎಂಬುದನ್ನು ವಚನ ಸಂಸ್ಥೆ ಮಾಡುತ್ತಿದೆ, ಆಶ್ರಯ ಇಲ್ಲದ ಪ್ರತಿಭಾವಂತ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ನಮ್ಮ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಧನ ಸಹಾಯ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸುತ್ತಿದ್ದೆವೆ ಎಂದು ಹೇಳಿದರು.
ವಚನ ಸಮೂಹ ಸಂಸ್ಥೆಯ ಮುಖ್ಯಸ್ಥ ಅಲ್ಲಮಪ್ರಭು ನಾವದಗೀರೆ, ತಾಲೂಕು ಅಧ್ಯಕ್ಷ ಡಿಡಿ ಬೊಳೆಗಾವೆ ಮಾತನಾಡಿದರು. ಈ ಸಂದರ್ಭದಲ್ಲಿ ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಪ್ರೇಮಾ ಹೂಗಾರ, ವಚನ ಸಂಸ್ಥೆಯ ಪ್ರಮುಖರಾದ ಪ್ರಕಾಶ ಗಂದಿಗುಡೆ, ಮಲ್ಲಿಕಾರ್ಜುನ ಟಂಕಸಾಲೆ, ಜಗನಾಥ ಮೂಲಗೆ, ಸೂರ್ಯಕಾಂತ ವಲ್ಲೆಪೂರೆ, ಶಿವರಾಜ ಶೆಟಕಾರ, ಮಲ್ಲಿಕಾರ್ಜುನ ಹಿಪ್ಪಳಗಾವೆ, ಗಜಾನನ ಮಳ್ಳಾ, ಧನರಾಜ ಪೀಟ್ರೆ, ಸತೀಷ ಮಜಗೆ, ಮಹಾನಂದ ಎಂಡೆ, ಗುರುರಾಜ ಯಾದವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿದ್ಯಾರ್ಥಿ ನಿಧಿ ಆಯ್ಕೆಗೊಂಡವರು
- ಸಿದ್ದಮ್ಮಾ ಬಸಪ್ಪಾ, ಸಿದ್ಧರಾಮೇಶ್ವರ ಕಾಲೇಜು ಔರಾದ
- ವಚನಶ್ರೀ ವಿಜಯಕುಮಾರ ಆದರ್ಶ ಶಾಲೆ ಔರಾದ
- ಸಂಜನಾ ಸಂತೋಷ ಬಿರಾದಾರ ಪತ್ರಿಸ್ವಾಮಿ ಕಾಲೇಜು ಔರಾದ
- ಗುರುಬಸವ ಚಂದ್ರಕಾಂತ ನವಚೇತನ ಗುರುಕುಲ ಔರಾದ
- ಶೇಖರ ಹಣಮಂತ ಸರ್.ಎಂ.ವಿಶ್ವೇಶ್ವರಯ್ಯ ಶಾಲೆ ಔರಾದ
- ಅಂಬಿಕಾ ರಾಜಕುಮಾರ ಸ.ಪ್ರೌ.ಶಾಲೆ ಧೂಪತಮಾಹಾಗಾಂವ
- ಅಸ್ಮಿತಾ ಶಾಮಸುಂದರ ಆದರ್ಶ ಶಾಲೆ ಔರಾದ
- ಅಪೂರ್ವ ಮಾರುತಿ ಸ.ಪ್ರೌ.ಶಾ ಯನಗುಂದಾ
- ಭಾಗ್ಯವತಿ ಅಶೋಕ ಸ.ಪ್ರೌ. ಶಾಲೆ ಏಕಲಾರ
- ಅನುಷ್ಕಾ ರಾಮಣ್ಣ ಸುಭಾಷ್ ಚಂದ್ರಭೋಸ ಶಾಲೆ
ಡಾ. ಚನ್ನಬಸವಪಟ್ಟದೇವರ ವಿದ್ಯಾರ್ಥಿ ನಿಧಿ ಸ್ಥಾಪನೆ
ತಾಲ್ಲೂಕಿನ ಸಮಾನ ಮನಸ್ಕರು ಸೇರಿ ಸಾಮಾಜಿಕ, ಶೈಕ್ಷಣಿಕ, ಹಾಗೇ ವೈಜ್ಞಾನಿಕ, ವೈಚಾರಿಕ ವಿಚಾರಧಾರೆ ಬಿತ್ತುವ ಉದ್ದೇಶದಿಂದ ಪ್ರತಿಯೊಬ್ಬರು ತಿಂಗಳಿಗೆ ಐದು ನೂರು ಜಮಾ ಮಾಡಿ, ಈ ಹಣದಿಂದಲೇ ಇಂತಹ ಸಮಾಜಮುಖಿ ಕಾರ್ಯ ಮಾಡುತ್ತಿದ್ದೇವೆ. ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಲಿ ಎನ್ನುವ ಉದ್ದೇಶದಿಂದ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿರುವ ಭಾಲ್ಕಿಯ ಪೂಜ್ಯ ಡಾ. ಚನ್ನಬಸವ ಪಟ್ಟದ್ದೆವರ ವಿದ್ಯಾರ್ಥಿ ನಿಧಿ ಎಂದು ಹೆಸರಿಡಲಾಗಿದೆ. ಇನ್ನೂ ಮುಂದೆ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ಧನ ನೀಡಲಾಗುವುದು.
ಡಿ.ಡಿ.ಬೋಳೆಗಾವೆ
ತಾಲೂಕ ಅಧ್ಯಕ್ಷರು ಔರಾದ























