
ಗಿಫ್ಟ್ ಕಾರ್ಡ್‌ಗಳು, ಅಥವಾ ನಿರ್ದಿಷ್ಟವಾಗಿ ಹೇಳಬೇಕಾದರೆ, ಇ-ಗಿಫ್ಟ್ ಕಾರ್ಡ್‌ಗಳು ಜನಪ್ರಿಯ ಉಡುಗೊರೆಯಾಗಿದ್ದು, ಹುಟ್ಟುಹಬ್ಬಗಳು, ಮದುವೆಗಳಿಗಷ್ಟೇ ಸೀಮಿತವಾಗಿರದೆ ಇತರ ಸಂದರ್ಭಗಳಲ್ಲಿಯೂ, ಗಡಿಬಿಡಿಯಲ್ಲಿ ಉಡುಗೊರೆ ತರಲು ಮರೆತಾಗ ಕೊನೆಯ ಕ್ಷಣದಲ್ಲಿ ಉಡುಗೊರೆಯಾಗಿ ನೀಡಲೂ ಹೇಳಿ ಮಾಡಿಸಿದಂತಾಗಿದೆ. ಆದರೆ, ಗಿಫ್ಟ್ ಕಾರ್ಡ್‌ಗಳು ಅನಾಮಧೇಯವಾಗಿದ್ದು, ಪತ್ತೆಹಚ್ಚಲಾಗದ ಕಾರಣ ಮತ್ತು ಒಬ್ಬ ವ್ಯಕ್ತಿಗೆ ಶಾಶ್ವತವಾಗಿ ಲಿಂಕ್ ಆಗಿಲ್ಲದ ಕಾರಣ, ದುರದೃಷ್ಟವಶಾತ್ ಇದು ಸ್ಕ್ಯಾಮರ್‌ಗಳಿಗೆ ವರವಾಗಿದೆ. ಇದು ಗಿಫ್ಟ್ ಕಾರ್ಡ್‌ಗಳನ್ನು ಆಮಿಷವಾಗಿ ಬಳಸಿಕೊಂಡು ಮುಗ್ಧರಿಂದ ಹಣ ವಂಚಿಸಲು ಸ್ಕ್ಯಾಮರ್‌ಗಳಿಗೆ ದಾರಿ ಮಾಡಿಕೊಟ್ಟಿದೆ.
ಗಿಫ್ಟ್ ಕಾರ್ಡ್ ವಂಚನೆಗಳು ದಿನೇ ದಿನೇ ಹೆಚ್ಚುಗುತ್ತಿದ್ದು ನಿಮ್ಮ ಹಣ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಡಲು ಗಿಫ್ಟ್ ಕಾರ್ಡ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಬಹುಮುಖ್ಯ.
ಗಿಫ್ಟ್ ಕಾರ್ಡ್ ಹಗರಣದಲ್ಲಿ, ಒಬ್ಬ ವಂಚಕನು ಸಂಭಾವ್ಯ ಬಲಿಪಶುವನ್ನು ಸಂಪರ್ಕಿಸಿ ಅವರನ್ನು ಮೋಸಗೊಳಿಸಿ ಗಿಫ್ಟ್ ಕಾರ್ಡ್ ಖರೀದಿಸುವಂತೆ ಮಾಡುತ್ತಾನೆ. ಖರೀದಿಯ ನಂತರ, ವಂಚನೆಗಾರರು ಉಡುಗೊರೆ ಕಾರ್ಡ್ ಸಂಖ್ಯೆ, ಕೋಡ್, ಪಿನ್‌ಗಳು ಇತ್ಯಾದಿಗಳನ್ನು ಪಡೆಯಲು ವಂಚನೆ ಮತ್ತು ಸುಳ್ಳು ನೆಪಗಳನ್ನು ಬಳಸುತ್ತಾರೆ. ಸ್ಕ್ಯಾಮರ್‌ಗಳು ಅಗತ್ಯ ಮಾಹಿತಿಯನ್ನು ಹೊಂದಿದ ನಂತರ, ಅವರು ತ್ವರಿತವಾಗಿ ಮೌಲ್ಯವನ್ನು ಪಡೆದುಕೊಳ್ಳುತ್ತಾರೆ, ಇದರಿಂದಾಗಿ ಬಲಿಪಶುಗಳಿಗೆ ತಮ್ಮ ಹಣವನ್ನು ಮರುಪಡೆಯಲು ಯಾವುದೇ ಅವಕಾಶವಿರುವುದಿಲ್ಲ.
ಗಿಫ್ಟ್ ಕಾರ್ಡ್ ಹಗರಣಗಳು ಸಾಮಾನ್ಯವಾಗಿ ನಿಮ್ಮನ್ನು ಮೋಸಗೊಳಿಸಲು ಊಹಿಸಬಹುದಾದ ಒಂದು ಮಾದರಿಯನ್ನು ಅನುಸರಿಸುತ್ತವೆ. ವಂಚಕರು ಸಾಮಾನ್ಯವಾಗಿ ನಿಮ್ಮ ಸಹೋದ್ಯೋಗಿ, ತೊಂದರೆಗೀಡಾದ ಕುಟುಂಬ ಸದಸ್ಯರು, ಸರ್ಕಾರಿ ಅಧಿಕಾರಿ, ತಾಂತ್ರಿಕ ಬೆಂಬಲ ಅಥವಾ ಉದ್ಯೋಗದ ಆಫರ್ ಹೊಂದಿರುವ ನೇಮಕಾತಿದಾರರಂತಹ ನೀವು ನಂಬುವ ವ್ಯಕ್ತಿಯಂತೆ ನಟಿಸುತ್ತಾರೆ. ಸಭೆಗೆ ತಕ್ಷಣವೇ ನಿಮಗೆ ಗಿಫ್ಟ್ ಕಾರ್ಡ್‌ಗಳು ಬೇಕು ಎಂದು ಹೇಳಿಯೋ ಅಥವಾ ಖಾತೆ ಅಮಾನತು ತಪ್ಪಿಸಲೋ, ಕಾನೂನು ಸಮಸ್ಯೆಯನ್ನು ಪರಿಹರಿಸಲೋ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಕಿಟ್ ಅನ್ನು ಪೂರ್ಣಗೊಳಿಸುವಂತಹ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿ ಒತ್ತಡ ಹೇರುತ್ತಾರೆ.
ಅವರು ನಿಮ್ಮ ಮನವೊಲಿಸಿದ ನಂತರ, ಜನಪ್ರಿಯ ಬ್ರ್ಯಾಂಡ್‌ಗಳಿಂದ ನಿರ್ದಿಷ್ಟ, ಹೆಚ್ಚಿನ ಮೌಲ್ಯದ ಗಿಫ್ಟ್ ಕಾರ್ಡ್‌ಗಳನ್ನು ಖರೀದಿಸಲು ನಿಮಗೆ ಸೂಚಿಸುತ್ತಾರೆ. ನೀವು ಗಿಫ್ಟ್ ಕಾರ್ಡ್‌ಗಳನ್ನು ಖರೀದಿಸಿದ ನಂತರ, ವಂಚಕರು ತಕ್ಷಣವೇ 16-ಅಂಕಿಯ ಗಿಫ್ಟ್ ಕಾರ್ಡ್ ಸಂಖ್ಯೆ, ಪಿನ್ ಅಥವಾ ಕಾರ್ಡ್ ಅಥವಾ ರಶೀದಿಯಿಂದ ವಿವರಗಳನ್ನು ಕೇಳುತ್ತಾರೆ. ಅವರು ಈ ಮಾಹಿತಿಯನ್ನು ಹೊಂದಿದ ತಕ್ಷಣ, ಅವರು ತಕ್ಷಣವೇ ಕಾರ್ಡ್‌ನ ಮೌಲ್ಯವನ್ನು ತಮ್ಮ ವೈಯಕ್ತಿಕ ಬಳಕೆಗಾಗಿ ರಿಡೀಮ್ ಮಾಡುತ್ತಾರೆ ಅಥವಾ ರಿಯಾಯಿತಿಯಲ್ಲಿ ಅವುಗಳನ್ನು ಮರುಮಾರಾಟ ಮಾಡುತ್ತಾರೆ, ಇದರಿಂದಾಗಿ ನಿಮ್ಮ ಹಣವನ್ನು ಮರುಪಡೆಯಲು ನಿಮಗೆ ಯಾವುದೇ ಅವಕಾಶವಿರುವುದಿಲ್ಲ.
ಈ ವಂಚನೆಗಳ ಸಾಮಾನ್ಯ ಎಚ್ಚರಿಕೆಯ ಕರೆಗಂಟೆಗಳೆಂದರೆ ಗಿಫ್ಟ್ ಕಾರ್ಡ್ ಮೂಲಕ ಅನುಮಾನಾಸ್ಪದ ಪಾವತಿಯ ವಿನಂತಿ, ತುರ್ತು, ಭಾವನಾತ್ಮಕ ಅಥವಾ ರಹಸ್ಯವಾದ ಸಂದೇಶಗಳು, ವಿಷಯವನ್ನು ಗೌಪ್ಯವಾಗಿಡುವ ವಿನಂತಿ. ಅಲ್ಲದೇ, ಅಧಿಕೃತ ಚಾನಲ್‌ಗಳ ಹೊರತಾಗಿ ವೈಯಕ್ತಿಕ ಚಾನಲ್ ಮೂಲಕ ಸಂವಹನವಾಗಿರಬಹುದು ಅಥವಾ ಅದರಲ್ಲಿ ವ್ಯಾಕರಣ, ಕಾಗುಣಿತ ಅಥವಾ ಧಾಟಿ ಸರಿ ಇಲ್ಲದಿರಬಹುದು.
ಗ್ರಾಹಕರು ಇಂತಹ ವಂಚನೆಗಳಿಗೆ ಬಲಿಯಾಗದಂತೆ ರಕ್ಷಿಸಲು PhonePe ಯ ಸೈಬರ್ ಸುರಕ್ಷತಾ ತಜ್ಞರು ಕೆಲವು ಸಲಹೆಗಳು ಇಂತಿವೆ. ಉಡುಗೊರೆ ಕಾರ್ಡ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ನಿಮಗೆ ಪರಿಚಯವಿಲ್ಲದ ಅಥವಾ ನಂಬದ ಯಾರೊಂದಿಗೂ ಗಿಫ್ಟ್ ಕಾರ್ಡ್ ಕೋಡ್‌ಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ಗಿಫ್ಟ್ ಕಾರ್ಡ್‌ಗಳಿಗಾಗಿ ವಿನಂತಿಗಳನ್ನು, ವಿಶೇಷವಾಗಿ ಅವು ಅಸಾಮಾನ್ಯವೆಂದು ತೋರಿದರೆ, ಪರಿಶೀಲಿಸಿ. ಸಹೋದ್ಯೋಗಿಗಳು ಅಥವಾ ಕುಟುಂಬದಿಂದ ಬರುವ ತುರ್ತು ಅಥವಾ ಅಸಾಮಾನ್ಯ ವಿನಂತಿಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ. ಅಧಿಕೃತ ಮೂಲಗಳಿಂದ, ವೈಯಕ್ತಿಕ ಬಳಕೆಗಾಗಿ ಮಾತ್ರ ಗಿಫ್ಟ್ ಕಾರ್ಡ್‌ಗಳನ್ನು ಖರೀದಿಸಿ. ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳಿಗೆ ಈ ಬಗ್ಗೆ ತಿಳುವಳಿಕೆ ನೀಡಿ – ಸ್ಕ್ಯಾಮರ್‌ಗಳು ಹೆಚ್ಚಾಗಿ ವಯಸ್ಸಾದ ಅಥವಾ ತಂತ್ರಜ್ಞಾನದ ಕುರಿತು ಕಡಿಮೆ ಮಾಹಿತಿ ಇರುವ ವ್ಯಕ್ತಿಗಳನ್ನು ಗುರಿಯಾಗಿಸುತ್ತಾರೆ.
PhonePe ನಲ್ಲಿ ನೀವು ಇಂತಹ ವಂಚನೆಗೆ ಗುರಿಯಾಗಿದ್ದರೆ, ನೀವು ಅಂತಹ ವಂಚನೆಗಳನ್ನು PhonePe ಆ್ಯಪ್‌ನಲ್ಲಿ ಅಥವಾ ಗ್ರಾಹಕ ಸೇವಾ ಸಂಖ್ಯೆ 080–68727374 / 022–68727374 ಗೆ ಕರೆ ಮಾಡುವ ಮೂಲಕ ಅಥವಾ PhonePe ಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ತಕ್ಷಣ ವರದಿ ಮಾಡಬಹುದು. ಇದಲ್ಲದೆ, ನೀವು ವಂಚನೆ ದೂರುಗಳನ್ನು ಹತ್ತಿರದ ಸೈಬರ್ ಕ್ರೈಮ್ ಸೆಲ್‌ಗೆ ವರದಿ ಮಾಡಬಹುದು ಅಥವಾ https://www.cybercrime.gov.in/ ನಲ್ಲಿ ಆನ್‌ಲೈನ್‌ನಲ್ಲಿ ದೂರು ನೋಂದಾಯಿಸಬಹುದು ಅಥವಾ 1930 ರಲ್ಲಿ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ WhatsApp ವಂಚನೆಯನ್ನು ವರದಿ ಮಾಡುವ ಮೂಲಕ ನೀವು ದೂರಸಂಪರ್ಕ ಇಲಾಖೆಯನ್ನು (DOT) ಸಹ ಸಂಪರ್ಕಿಸಬಹುದು. ನೀವು PhonePe ದೂರು ಪೋರ್ಟಲ್‌ನಲ್ಲಿಯೂ ದೂರು