
ಕಲಬುರಗಿ,ನ.11-ನಗರದ ವಿಶ್ವವಿದ್ಯಾಲಯ ಮತ್ತು ಆರ್.ಜಿ.ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟವಾಡುತ್ತಿದ್ದ 31 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀನಿವಾಸ ಸರಡಗಿ ಕ್ರಾಸ್ ಹತ್ತಿರದ ಕಂಕರ ಮಷೀನ್ ಹತ್ತಿರದ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಪಿಐ ಚಂದ್ರಶೇಖರ್, ಸಿಬ್ಬಂದಿಗಳಾದ ಸಂಜಯಕುಮಾರ, ಪ್ರಕಾಶ, ಸಿದ್ದಣ್ಣ, ಫಿರೋಜ್ ಅವರು ದಾಳಿ ನಡೆಸಿ ಅಂಬರೀಷ್ ಬಿರಾದಾರ, ಜಗದೀಶ, ಸುಭಾಷ ತಳವಾರ, ಮಹ್ಮದ್ ಜಮಾದಾರ, ದೇವಪ್ಪಾ ನಾಟಿಕಾರ, ಶಿವಕುಮಾರ ಶ್ರೀಮನಿ ಎಂಬುವವರನ್ನು ಬಂಧಿಸಿ 10020 ರೂ.ನಗದು ಜಪ್ತಿ ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಕ್ರಾಸ್ ಹತ್ತಿರದ ದಾಬಾ ಪಕ್ಕದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಎಎಸ್ಐ ಅಣ್ಣಪ್ಪ, ಸಿಬ್ಬಂದಿಗಳಾದ ಈರಣ್ಣ, ಪ್ರಕಾಶ, ವಿಠೋಬಾ, ಬೋಗೇಶ ಅವರು ದಾಳಿ ನಡೆಸಿ ಸರದಾರ ಖಾನ್, ಲಾಲ್ಡೆಸಾಬ್ ಶೇಖ್, ಮೊಹ್ಮದ್ ಖಾಜಾಪಾಶಾ, ಸಂಜೀವಕುಮಾರ ಪಾಟೀಲ, ನಾಗರಾಜ ಕುರುಬರ, ಮೊಹಮದ, ಕಾಶಿರಾಯ ಬಿರಾದಾರ ಎಂಬುವವರನ್ನು ಬಂಧಿಸಿ 9 ಸಾವಿರ ರೂ.ನಗದು ಜಪ್ತಿ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಸರಹದ್ದಿನ ಹಾಗರಗಾ ಸೀಮಾಂತರದಲ್ಲಿರುವ ಗೋಂಧಿಕೇರಿ ತಾಂಡಾಕ್ಕೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್ ಅರ್ಬನ್ ಪೊಲೀಸ್ ಠಾಣೆಯ ಎಸಿಪಿ ಬಸವೇಶ್ವರ, ಸಿಬ್ಬಂದಿಗಳಾದ ಸಂಜಕುಮಾರ, ಪ್ರಕಾಶ, ಫಿರೋಜ್ ಖಾನ್, ಮಂಜುನಾಥ ಅವರು ದಾಳಿ ನಡೆಸಿ ಸೂರ್ಯಕಾಂತ ರಾಠೋಡ್, ಗಂಗಾರಾಮ ರಾಠೋಡ್, ಸುನಿಲ ಚವ್ಹಾಣ್, ಸುಶೀಲ ಚವ್ಹಾಣ್, ಮಾರುತಿ ರಾಠೋಡ್, ರವಿ ಚವ್ಹಾಣ್, ವೆಂಕಟೇಶ ರಾಠೋಡ್, ಸೀತಾರಾಮ ಚವ್ಹಾಣ್, ಸಂತೋಷ ರಾಠೋಡ್, ಬಿಕುಚಂದ ರಾಠೋಡ್ ಎಂಬುವವರನ್ನು ಬಂಧಿಸಿ 24,00 ರೂ.ನಗದು ಜಪ್ತಿ ಮಾಡಿದ್ದಾರೆ.
ಆರ್.ಜಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಂಡೆದ ಗಲ್ಲಿಯ ಖಣಿ ಏರಿಯಾ ಹನುಮಾನ ಮಂದಿರದ ಹಿಂದುಗಡೆಯ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಎಎಸ್ಐ ಮಲ್ಲಿಕಾರ್ಜುನ, ಸಿಬ್ಬಂದಿಗಳಾದ ಚಂದ್ರಕಾಂತ, ಉಮೇಶ, ಆರೇಶ್ ಅವರು ದಾಳಿ ನಡೆಸಿ ವಿಶಾಲ ಮಿಟೆಗಾರ, ಮಲ್ಲಿಕಾರ್ಜುನ ಮಿಟೆಗಾರ, ಪ್ರವೀಣ ಪಡಶೆಟ್ಟಿ, ನಾಗರಾಜ ಮೈಸಲಗಿ, ಶ್ರೀಶೈಲ ಮಿಟೆಗಾರ, ಕಲ್ಯಾಣಕುಮಾರ ಮಠಪತಿ, ಅಭಿಷೇಕ ಮಿಟೆಗಾರ ಎಂಬುವವರನ್ನು ಬಂಧಿಸಿ 3,150 ರೂ.ನಗದು ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಮತ್ತು ಆರ್.ಜಿ.ನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.





















