
ಧಾರವಾಡ,ಜೂ೩: ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಇವರು ಧಾರವಾಡ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆವರಣದಲ್ಲಿರುವ ಜಿಲ್ಲಾ ಪಶು ಆಸ್ಪತ್ರೆ (ಪಾಲಿಕ್ಲಿನಿಕ್)ಗೆ ಭೇಟಿ ನೀಡಿ ಜಾನುವಾರುಗಳಿಗೆ ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸಾ ಸೌಲಭ್ಯಗಳನ್ನು ವೀಕ್ಷಿಸಿದರು. ಆಸ್ಪತ್ರೆಗೆ ಮಂಜೂರಾಗಿರುವ ನಾಲ್ಕೂ ಡಿ-ದರ್ಜೆ ಹುದ್ದೆಗಳು ಖಾಲಿ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿರುವ ಎಲ್ಲ ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರಗಳಲ್ಲಿ ಖಾಲಿಯಿರುವ ಡಿ-ದರ್ಜೆ ನೌಕರರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಡಾ.ಎಸ್.ವ್ಹಿ.ಸಂತಿ, ಉಪನಿರ್ದೇಶಕರು (ಆಡಳಿತ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಧಾರವಾಡ ಇವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರಗಳ ಕಟ್ಟಡಗಳ ನಿರ್ಮಾಣ, ರಿಪೇರಿ ಮತ್ತು ನಿರ್ವಹಣೆಗೆ ಸಂಬAಧಿಸಿದAತೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಜಿಲ್ಲೆಯ ಉಪನಿರ್ದೇಶಕರು(ಆಡಳಿತ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಧಾರವಾಡ ಕಛೇರಿಯಲ್ಲಿ ಶೀಘ್ರವಾಗಿ ಇ-ಆಫೀಸ್ ತಂತ್ರಾAಶ ಅಳವಡಿಸಿಕೊಳ್ಳಲು ಕ್ರಮವಹಿಸಲು ತಿಳಿಸಿದರು.
ಜಿಲ್ಲಾ ಪಶು ಆಸ್ಪತ್ರೆ (ಪಾಲಿಕ್ಲಿನಿಕ್)ಗೆ ಅವಶ್ಯವಿರುವ ದೊಡ್ಡ ಪ್ರಾಣಿಗಳ ಹೈಡ್ರಾಲಿಕ್ ಶಸ್ತç ಚಿಕಿತ್ಸಾ ಟೇಬಲ್ ಹಾಗೂ ಇತರೆ ಅವಶ್ಯ ಉಪಕರಣಗಳ ಸರಬರಾಜಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಡಾ.ಆರ್.ಡಿ.ಪಾಟೀಲ, ಉಪನಿರ್ದೇಶಕರು (ಪಾಲಿಕ್ಲಿನಿಕ್) ಇವರಿಗೆ ಸೂಚಿಸಿದರು.ಗರಗ ಗ್ರಾಮದ ಪಶುಚಿಕಿತ್ಸಾಲಯಕ್ಕೆ ಭೇಟಿ ನೀಡಿದರು. ಸದರಿ ಪಶು ಚಿಕಿತ್ಸಾಲಯದಲ್ಲಿ ಕೃತಕ ಗರ್ಭಧಾರಣೆಯ ಉತ್ತಮ ಫಲಿತಾಂಶಕ್ಕಾಗಿ ಅಳವಡಿಸಿರುವ, ಜಾನುವಾರುಗಳನ್ನು ತಂಪಾಗಿಸುವ ಫಾಗರ್
ಸೌಲಭ್ಯವನ್ನು ಪರಿಶೀಲಿಸಿ, ಜಿಲ್ಲೆಯ ಉಳಿದ ಪಶುಚಿಕಿತ್ಸಾಲಯಗಳಲ್ಲಿ ಇದೇ ಮಾದರಿಯ ಸೌಲಭ್ಯ ಒದಗಿಸಲು ಸೂಚಿಸಿದರು. ಉತ್ಕೃಷ್ಟ ತಳಿಯ ಹೋರಿಗಳ ವೀರ್ಯನಳಿಕೆಯಿಂದ ಜನಿಸಿರುವ ಕರುಗಳನ್ನು ಕಂಡು ಸಂತೋಷ ವ್ಯಕ್ತಪಡಿಸಿದರು ಹಾಗೂ ಅವುಗಳಿಗೆ ಆರೋಗ್ಯ ವರ್ಧಕ ಪೂರಕ ಆಹಾರಗಳನ್ನು ವಿತರಿಸಿದರು.
ಮನೋಹರ ದೇಸಾಯಿ ಇವರ ಖಾಸಗಿ ಡೈರಿ ಫಾರಂಗೆ ಭೇಟಿ ನೀಡಿ, ಅಲ್ಲಿ ಪಾಲನೆ ಮಾಡುತ್ತಿರುವ ಸಾಹಿವಾಲ್ ತಳಿಯ ಹಸುಗಳನ್ನು ಹಾಗೂ ಬೀಜೋತ್ಪಾದನಾ ಘಟಕವನ್ನು ವೀಕ್ಷಿಸಿದರು.
ಮಾನ್ಯರ ಪ್ರವಾಸ ಸಂದರ್ಭದಲ್ಲಿ ಡಾ.ನಾಗರಾಜ ಜಂಟಿ ನಿರ್ದೇಶಕರು (ರಾಜ್ಯ ವಲಯ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಧಾರವಾಡ, ಡಾ.ಪ್ರಮೋದ ಮೂಡಲಗಿ, ಉಪನಿರ್ದೇಶಕರು, ಘನೀಕೃತ ವೀರ್ಯನಳಿಕೆ ಉತ್ಪಾದನಾ ಕೇಂದ್ರ ಹಾಗೂ ಇತರೆ ಪಶುವೈದ್ಯಾಧಿಕಾರಿಗಳು ಹಾಜರಿದ್ದರು.























