
ಬೇಕಾಗುವ ಸಾಮಗ್ರಿಗಳು
*ಪ್ರಾನ್ಸ್ – ೧/೪ ಕೆ.ಜಿ
*ಕಡಲೆ ಹಿಟ್ಟು ಒಂದು ಚಿಕ್ಕ ಕಪ್ಪು
- ಚಮಚ ೨
*ಈರುಳ್ಳಿ – ೧
ದೊಡ್ಡದು (ಸಣ್ಣಗೆ ಹೆಚ್ಚಿದ್ದು)
*ಹಸಿರು ಮೆಣಸಿನಕಾಯಿ ೩ –
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ -೧ ಟೀ ಸ್ಪೂನ್
*ಜೀರಿಗೆ ಪುಡಿ – ೧/೪ ಟೀ ಸ್ಪೂನ್
*ಕೊತ್ತಂಬರಿ ಸೊಪ್ಪು
*ನಿಂಬೆರಸ – ೧/೨ ಚಮಚ
*ಅಚ್ಚಖಾರದ ಪುಡಿ -೧ ಚಮಚ
*ಅಡುಗೆ ಸೋಡಾ – ೧/೪ ಚಮಚ
*ಅರಿಶಿಣ ಪುಡಿ ೧/೪ ಚಮಚ
*ಕಾಳುಮೆಣಸಿನ ಪುಡಿ ೧/೪ ಚಮಚ
*ಮೊಟ್ಟೆ ೧
*ಎಣ್ಣೆ – ೫೦ ಗ್ರಾಂ
ಮಾಡುವ ವಿಧಾನ :
ಬೌಲ್‌ಗೆ ಪ್ರಾನ್ಸ್ ಹಾಕಿ ನಿಂಬೆರಸ ಬೆರೆಸಿ. ಇದಕ್ಕೆ ಕಾಳು ಮೆಣಸಿನ ಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ ೨೦ ನಿಮಿಷ ನೆನೆಯಲು ಬಿಡಿ. ಇನ್ನೊಂದು ಬೌಲ್‌ಗೆ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಚಿಕ್ಕದಾಗಿ ಕಟ್ ಮಾಡಿದ ಈರುಳ್ಳಿ, ಅಚ್ಚಖಾರದ ಪುಡಿ, ಒಂದು ಮೊಟ್ಟೆ, ಅಗತ್ಯವಿರುವಷ್ಟು ನೀರು ಹಾಕಿ ಗಂಟಾಗದಂತೆ ಚೆನ್ನಾಗಿ ಕಲಸಿಕೊಳ್ಳಿ. ಈ ಮಿಶ್ರಣಕ್ಕೆ ನೆನೆಸಿಟ್ಟ ಪ್ರಾನ್ಸ್ ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಇದನ್ನು ಕುದಿಯುವ ಎಣ್ಣೆಯಲ್ಲಿ ಹದವಾಗಿ ಕರಿದರೆ ಪ್ರಾನ್ಸ್ ಪಕೋಡ ರೆಡಿ.