
ಗದಗ, ಏ 16: ಗದಗ ಐಎಂಎ ಶತಮಾನೋತ್ಸವದ ಪ್ರಯುಕ್ತ ಮಕ್ಕಳಿಗೆ ಉಚಿತ ಖಗೋಳ ವೀಕ್ಷಣೆಗೆ ಏಪ್ರಿಲ್ 15 ರಿಂದ ಮೇ 3 ರವರೆಗೆ ಅವಕಾಶ ಕಲ್ಪಿಸಲಾಗಿದೆ. ತಾರಾಲಯ ವೀಕ್ಷಣೆಯು ಬ್ರಹ್ಮಾಂಡದ ವೈಜ್ಞಾನಿಕ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡಿ ತಿಳಿಸಿದರು.
ಗದಗ ಬೆಟಗೇರಿಯ ತಾರಾಲಯದಲ್ಲಿ ಗದಗ ಜಿಲ್ಲಾ ಪಂಚಾಯತ್ , ಶಾಲಾ ಶಿಕ್ಷಣ ಇಲಾಖೆ ಐಎಂಎ ಸಂಸ್ಥೆಯ ಶತಮಾನೋತ್ಸವ ಪ್ರಯುಕ್ತ ಮಕ್ಕಳಿಗೆ ಖಗೋಳ ವೀಕ್ಷಣೆ `ವಿಸ್ಮಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನವು ಮಾನವನ ಜೀವನವನ್ನು ಆರಾಮದಾಯಕವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನು ಜವಾಬ್ದಾರಿಯುತವಾಗಿ ಬಳಸಿದಾಗ ಮಾನವಕುಲದ ಪ್ರಗತಿಯಾಗುತ್ತದೆ. ಗದಗ ಜಿಲ್ಲೆಯ ಮಕ್ಕಳಿಗೆ ಹಾಗೂ ಸಾರ್ವಜನಿಕಿಗೆ ಉಪಯೋಗವಾಗಲೆಂದು ಗದಗ ಬೆಟಗೇರಿಯಲ್ಲಿ ತಾರಾಲಯವನ್ನು ನಿರ್ಮಿಸಲಾಗಿದ್ದು ಮಕ್ಕಳು ರಚನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ ಎಂದರು.
ಐಎಂಎ ಶಾಖೆಯು ಶತಮಾನೋತ್ಸವದ ಪ್ರಯುಕ್ತ ಉಚಿತವಾಗಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಸ್ಮಯ ಪ್ರದರ್ಶನವನ್ನು ಏಪ್ರಿಲ್ 15 ರಿಂದ ಮೇ 3 ರವರೆಗೆ ಏರ್ಪಡಿಸಲಾಗಿದೆ. ಸಾರ್ವಜನಿಕರಿಗೆ ರೂ.50/- ಪ್ರವೇಶ ದರ ನಿಗದಿಪಡಿಸಿದೆ. 60 ನಿಮಿಷಗಳ ಬಾಹ್ಯಾಕಾಶದ ವೀಕ್ಷಣೆಯು ವಾರದ ಪ್ರತಿ ಸೋಮವಾರ ಹಾಗೂ ಮೇ -1 ಕಾರ್ಮಿಕ ದಿನಾಚರಣೆ ಪ್ರಯುಕ್ತ ರಜೆ ಇದ್ದು ಉಳಿದ ದಿನಗಳಂದು ರವಿವಾರ ಸೇರಿದಂತೆ ಬೆಳಿಗ್ಗೆ 9.30 ರಿಂದ ಸಂಜೆ 4.30 ಗಂಟೆಯವರೆಗೆ ಐದು ಪ್ರದರ್ಶನಗಳು ಜರುಗಲಿವೆ. 1 ನೇ ಪ್ರದರ್ಶನ ಬೆಳಿಗ್ಗೆ 9.30 ರಿಂದ 10.45 ಗಂಟೆಗೆ; 2 ನೇ ಪ್ರದರ್ಶನ ಮಧ್ಯಾಹ್ನ 11 ರಿಂದ ಮಧ್ಯಾಹ್ನ 12 ಗಂಟೆಯವರೆಗೆ, 3 ನೇ ಪ್ರದರ್ಶನ ಮಧ್ಯಾಹ್ನ 12.15 ರಿಂದ 1.15 ರವರೆಗೆ, 4 ನೇ ಪ್ರದರ್ಶನ ಮಧ್ಯಾಹ್ನ 2.15 ರಿಂದ 3.15 ರವರೆಗೆ, 5 ನೇ ಪ್ರದರ್ಶನ ಮಧ್ಯಾಹ್ನ 3.30 ಗಂಟೆಯಿಂದ 4.30 ಗಂಟೆಯವರೆಗೆ ಜರುಗಲಿವೆ ಎಂದರು.
ಮಕ್ಕಳಿಗೆ ಉಚಿತ ಮೃಗಾಲಯ ವೀಕ್ಷಣೆ : ಲಾಯನ್ಸ್ ಕ್ಲಬ್ ದವರು ಮಕ್ಕಳಿಗಾಗಿ 2 ಬಸ್‍ಗಳ ವ್ಯವಸ್ಥೆ ಕಲ್ಪಿಸಿದ್ದು ಮಕ್ಕಳು ತಾರಾಲಯದಿಂದ ಮೃಗಾಲಯಕ್ಕೆ ಬಂದು ಉಚಿತವಾಗಿ ಮೃಗಾಲಯದ ವೀಕ್ಷಣೆ ಮಾಡಬಹುದು. ಮೃಗಾಲಯದಲ್ಲಿ ವನ್ಯಮೃಗಗಳು, ಪಕ್ಷಿ ನಿಸರ್ಗದ ಸೊಬಗು ಸವಿದು ತದನಂತರ ಪುನ: ತಾರಾಲಯಕ್ಕೆ ಮಕ್ಕಳು ಬಂದು ತಲುಪಲು ವ್ಯವಸ್ಥೆ ಕಲ್ಪಿಸಲಾಗಿದೆ.
ಎಸ್‍ಎಸ್‍ಎಲ್‍ಸಿ ಸಾಧಕ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಧನ : ಐಎಂಎದವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ತಾಲೂಕಾವಾರು ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 10,000/-, ದ್ವಿತೀಯ ಸ್ಥಾನ ಪಡೆದವರಿಗೆ 5 ಸಾವಿರ; ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 3 ಸಾವಿರ ರೂ.ಗಳ ಪೆÇ್ರೀತ್ಸಾಹಧನ ನೀಡಲಿದ್ದಾರೆ ಎಂದು ಡಿಡಿಪಿಐ ಆರ್.ಎಸ್.ಬುರುಡಿ ತಿಳಿಸಿದರು.
ಐಎಂಎ ಅಧ್ಯಕ್ಷ ಶ್ರೀಧರ್ ಕುರಡಗಿ ಮಾತನಾಡಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ತಾರಾಲಯವನ್ನು ಭೇಟಿ ಮಾಡಿ ವೈಜ್ಞಾನಿಕ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ವಿಸ್ಮಯ ಕಾರ್ಯಕ್ರಮದಡಿ ತಾರಾಲಯ ವೀಕ್ಷಣೆಯಿಂದ ಮಕ್ಕಳಲ್ಲಿ ನಕ್ಷತ್ರಗಳು, ಗ್ರಹಗಳು, ಉಪಗ್ರಹಗಳು ಹಾಗೂ ಬ್ರಹ್ಮಾಂಡದ ರಹಸ್ಯಗಳ ಬಗ್ಗೆ ಕುತೂಹಲ ಹೆಚ್ಚುತ್ತದೆ. ಈ ಕುತೂಹಲವೇ ಅವರನ್ನು ಪ್ರಶ್ನಿಸಲು, ವಿಚಾರಿಸಲು ಮತ್ತು ತರ್ಕಬದ್ಧವಾಗಿ ಯೋಚಿಸಲು ಪ್ರೇರೇಪಿಸುತ್ತದೆ. ಮೂಡನಂಬಿಕೆಗಳನ್ನು ದೂರಮಾಡಿ ನೈಸರ್ಗಿಕ ಕ್ರಿಯೆಗಳಾದ ಗ್ರಹಣ, ನಕ್ಷತ್ರಗಳ ಚಲನೆ ಇತ್ಯಾದಿಗಳನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಾ. ಎಸ್.ಆರ್.ನಾಗನೂರ, ಶಿವಕುಮಾರ್ ಕುರಿ, ಎಂ.ಎಚ್.ಕಾಂಬಳೆ, ಆನಂದ ಪೆÇೀತ್ನೀಸ್, ವೆರ್ಣೆಕರ್ , ಡಾ. ರಶ್ಮಿ, ಎಂ.ಎ. ಯರಗುಡಿ ಮತ್ತಿತರರಿದ್ದರು.






















