
ವಾಷಿಂಗ್ಟನ್,ಜು.೭- ಅಮೆರಿಕಾದ ಟೆಕ್ಸಾಸ್‌ನಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ೭೮ಕ್ಕೆ ಏರಿಕೆಯಾಗಿದ್ದು ೫೦ಕ್ಕೂ ಅಧಿಕ ಮಂದಿ ಕಾಣೆಯಗಿರುವ ಘಟನೆ ನಡೆದಿದೆ
ಟೆಕ್ಸಾಸ್ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ ಪ್ರವಾಹದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಕಾಣೆಯಾದ ಮಂದಿಯ ಹುಡುಕಾಟ ತೀವ್ರಗೊಂಡಿದೆ. ಪ್ರವಾಹದಿಂದ ಜಲಾವೃತವಾಗಿ ಸಮಸ್ಯೆಗೆ ಸಿಲುಕಿದವರ ಪತ್ತೆ ಮತ್ತು ಸಂಕಷ್ಠದಲ್ಲಿರುವ ಮಂದಿಯ ರಕ್ಷಣಾಕಾರ್ಯ ಭರದಿಂದ ಸಾಗಿದೆ
ಭಾರಿ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆಯನ್ನು ೭೮ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಆಡಳಿತ ಧೃಡಪಡಿಸಿದ್ದು , ಕಾಣೆಯಾದವರ ಪೈಕಿ ೨೮ ಮಕ್ಕಳೂ ಸೇರಿದ್ದಾರೆ. ನದಿ ತೀರದ ಕ್ರಿಶ್ಚಿಯನ್ ಬಾಲಕಿಯರ ಬೇಸಿಗೆ ಶಿಬಿರದಲ್ಲಿದ್ದವರು ಕಾಣೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆದಿದೆ
ಕಾಣೆಯಾದವರ ಸಂಖ್ಯೆ ೫೦ಕ್ಕೂ ಅಧಿಕವಾಗಿದ್ದು ಸಾವು ನೋವು ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾದ್ಯತೆ ಇದೆ ಎಂದು ಅಧಿಕಾರಿಗಳು ಹೇಳೀದ್ದಾರೆ. ಮುಂದಿನ ೨೪ ರಿಂದ ೪೮ ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಹೆಚ್ಚಿನ ಬಿರುಗಾಳಿಗಳು ಬೀಸುವ ನಿರೀಕ್ಷೆಯಿದೆ,
ಪ್ರವಾಹ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿಷಪೂರಿತ ಹಾವುಗಳ ಸಮಸ್ಯೆ ಎದುರುಸಿತ್ತಿದ್ದು ರಕ್ಷಣಾ ತಂಡಗಳಿಗೆ ಮಣ್ಣು ಮತ್ತು ಭಗ್ನಾವಶೇಷಗಳನ್ನು ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಪ್ರವಾಹದ ಮೂರು ದಿನಗಳ ನಂತರ, ಇತ್ತೀಚಿನ ಟೆಕ್ಸಾಸ್ ಇತಿಹಾಸದಲ್ಲಿ ಅತಿದೊಡ್ಡ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳಲ್ಲಿ ಒಂದಾದ ಚೇತರಿಕೆ ಕಾರ್ಯಾಚರಣೆಯತ್ತ ಸಾಗುತ್ತಿದೆ.
ಕೆರ್ ಕೌಂಟಿಯಲ್ಲಿ ಚೇತರಿಸಿಕೊಂಡವರಲ್ಲಿ, ೧೮ ವಯಸ್ಕರು ಮತ್ತು ೧೦ ಮಕ್ಕಳ ಗುರುತು ಮಾಡುವ ಕೆಲಸ ಮಾಡು ಕೆಲಸ ಪ್ರಗತಿಯಲ್ಲಿದೆ. ಕಾಣೆಯಾದ ಪ್ರತಿಯೊಬ್ಬ ವ್ಯಕ್ತಿಯೂ ಪತ್ತೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು “ಏನೂ ನಿಲ್ಲುವುದಿಲ್ಲ” ಎಂದು ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಹೇಳಿದ್ಧಾರೆ
ಹುಡುಕಾಟದ ಪ್ರಮುಖ ಕೇಂದ ಬಿಂದುವೆಂದರೆ ಗ್ವಾಡಾಲುಪೆ ನದಿಯ ದಡದಲ್ಲಿ ಕಾಣೆಯಾದ ಮಂದಿಯ ಹುಡುಕಾಟ ನಡೆದಿದೆ. ರಕ್ಷಣಾ ತಂಡಗಳು ತೀವ್ರ ಶೋಧ ಆರಂಭಿಸಿದ್ಧಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ