
ಆಳಂದ : ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ (ರಿ.), ಬೆಂಗಳೂರು, ತಾಲೂಕು ಘಟಕ ಆಳಂದದ ವತಿಯಿಂದ ತಾಲೂಕು ಮಟ್ಟದ ಶ್ರೀ ವಿಶ್ವಕರ್ಮ ಪೂಜಾಮಹೋತ್ಸವ ಹಾಗೂ ಸಮಾವೇಶವನ್ನು ಸೆಪ್ಟೆಂಬರ್ 27ರಂದು ಆಳಂದದಲ್ಲಿ ಆಯೋಜಿಸಲಾಗಿದೆ.
ಸಮಾರಂಭದಲ್ಲಿ ವಿಶ್ವಕರ್ಮ ಸಮಾಜದ ಪಂಚ ಕಸುಬುಗಳ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಗಂಗಾಧರ ವಿಶ್ವಕರ್ಮ, ಅಶೋಕ ಸುತಾರ, ಗಾಯತ್ರಿ ಶಿಲ್ಪಿ, ರಮೇಶ ಬಡಿಗೇರ ಹಾಗೂ ರವಿಕುಮಾರ ಬಡಿಗೇರ ಅವರಿಗೆ ‘ವಿಶ್ವಕರ್ಮ ಕಲಾ ಚೇತನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ಶ್ರೀ ವಿಶ್ವಕರ್ಮರ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಮಾಜದ ಸಂಘಟನೆ, ಶೈಕ್ಷಣಿಕ ಪ್ರಗತಿ, ಸಾಮಾಜಿಕ ಅಭಿವೃದ್ಧಿ ಮತ್ತು ಕಸುಬುದಾರರ ಸಮಸ್ಯೆಗಳ ಕುರಿತು ಸಮಾವೇಶ ನಡೆಯಲಿದೆ.
ವಿಶ್ವಕರ್ಮ ಸಮಾಜದ ಮುಖಂಡರು, ಪದಾಧಿಕಾರಿಗಳು, ಗಣ್ಯರು ಹಾಗೂ ಸಮಾಜದ ಬಾಂಧವರು ಭಾಗವಹಿಸಲಿದ್ದಾರೆ. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ಘಟಕದ ಅಧ್ಯಕ್ಷ ಬಸವರಾಜ ವಿಶ್ವಕರ್ಮ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.


























