
ಎಡ್ಜ್‌ಬಾಸ್ಟನ್,ಜು.೭:ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ೩ನೇ ಟೆಸ್ಟ್ ಪಂದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್‌ಪ್ರೀತ್‌ಬುಮ್ರಾ ಕಣಕ್ಕಿಳಿಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ಶುಭ್‌ಮನ್‌ಗಿಲ್ ತಿಳಿಸಿದ್ದಾರೆ.
೨ನೇ ಟೆಸ್ಟ್ ಪಂದ್ಯದಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಚಾರಿತ್ರಿಕ ಗೆಲುವು ಸಾಧಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಗಿಲ್ ೩ನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಸಿದ್ಧರಾಗಿದ್ದಾರೆಂದು ಖಚಿತಪಡಿಸಿದರು.
ಬುಮ್ರಾ ೩ನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸುತ್ತ ಖಂಡಿತ ಎಂದು ಹೇಳಿದರು. ಮೊದಲ ಪಂದ್ಯದ ನಂತರ ನಾವು ಚರ್ಚಿಸಿದ ವಿಷಯಗಳು ಸಂಪೂರ್ಣವಾಗಿ ಸರಿಯಾಗಿದ್ದವು. ತಂಡದ ಬೌಲಿಂಗ್ ಮತ್ತು ಫೀಲ್ಡಿಂಗ್ ನೋಡಲು ತಂಬಾ ಸಂತೋಷವಾಯಿತು ಎಂದರು.
ಎಡ್ಜ್‌ಬಾಸ್ಟನ್‌ನಂತಹ ಪಿಚ್‌ನಲ್ಲಿ ೪೦೦ ರಿಂದ ೫೦೦ ರನ್ ಗಳಿಸಿದರೆ ನಾವು ಆಟದಲ್ಲಿ ಉಳಿಯುತ್ತೇವೆ ಎಂಬುದು ನಮಗೆ ತಿಳಿದಿತ್ತು ಎಂದಿದ್ದಾರೆ.
ಆಕಾಶ್‌ದೀಪ್ ಅವರ ಮಾರಕ ಬೌಲಿಂಗ್‌ನ್ನು ಶ್ಲಾಘಿಸಿದ ಅವರು, ಪೂರ್ಣ ಹೃದಯದಿಂದ ಬೌಲಿಂಗ್ ಮಾಡಿ ಅವರು ಬೋಲ್ ಮಾಡಿದ ಪ್ಲೇಸ್ ಮತ್ತು ಚೆಂಡನ್ನು ಎರಡೂ ಕಡೆಗೆ ತಿರುಗಿಸುತ್ತಿದ್ದರು. ಅಂತಹ ವಿಕೆಟ್‌ಗಳಲ್ಲಿ ಈ ರೀತಿ ಬೌಲಿಂಗ್ ಮಾಡುವುದು ಕಷ್ಟ ಎಂದರು.
ತಮ್ಮ ಬ್ಯಾಟಿಂಗ್ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ನನ್ನ ಆಟದಲ್ಲಿ ನಾನು ಆರಾಮದಾಯಕನಾಗಿದ್ದೇನೆ. ನನ್ನ ಕೊಡುಗೆಯೊಂದಿಗೆ
ಸರಣಿಯನ್ನು ಗೆದ್ದರೆ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದರು.
ನಿನ್ನೆನಡೆದ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ ವಿರುದ್ಧ ೩೩೬ ರನ್‌ಗಳಿಂದ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿತ್ತು. ೫ ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸುವಲ್ಲಿ ಗಿಲ್ ಪಡೆ ಯಶಸ್ವಿಯಾಗಿದೆ.