Home ಜಿಲ್ಲೆ ಹಡಲಗೇರಿಯಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ; ಗುರುವಂದನೆ

ಹಡಲಗೇರಿಯಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ; ಗುರುವಂದನೆ

ಮುದ್ದೇಬಿಹಾಳ,ಮಾ.21: ತಾಲೂಕಿನ ಹಡಲಗೇರಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಗುರು ಬಿ ವೈ ನಾಟಿಕರ್ ಅವರು ಈ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಈಗ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುತ್ತಾರೆ . ಅದು ನಮ್ಮ ಹೆಮ್ಮೆ ಕೂಡ ಈಗ ಎಂಟನೆಯ ತರಗತಿಯ ವಿದ್ಯಾರ್ಥಿಗಳನ್ನು ಬಿಳ್ಕೊಡುವ ಕಾರ್ಯಕ್ರಮ ಮತ್ತು ಗುರುವಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮ್ಮ ಶಾಲೆಯಲ್ಲಿ ಹಲವಾರು ರೀತಿಯ ಸಂಸ್ಕøತಿಕ ಕಾರ್ಯಕ್ರಮಗಳನ್ನು ಆಗಾಗ್ಗೆ ಮಾಡುತ್ತಲೇ ಬರುತ್ತಿದ್ದೇವೆ. ಎಂದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಹಳೆಯ ವಿದ್ಯರ್ಥಿಗಳೆಲ್ಲ ಸೇರಿಕೊಂಡು ಗುರುಗಳಿಗೆ ಗುರುವಂದನಾ ಸಲ್ಲಿಸಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಡಲಗೇರಿ ಗ್ರಾಮ ಲೆಕ್ಕಾಧಿಕಾರಿ ಹರ್ಷಿತಗೌಡ,ಮತ್ತು ಶಿಕ್ಷಕ ವೃಂದ, ಎಸ್,ಡಿ,ಎಂ,ಸಿ ಅಧ್ಯಕ್ಷ ವಿಠ್ಠಲ್ ಮುದ್ನಾಳ, ಉಪಾಧ್ಯಕ್ಷೆ ನೇತ್ರಾವತಿ ನಾಡಗೌಡ, ಸದಸ್ಯರಾದ ಪರಶುರಾಮ್ ತಳವಾರ, ಅಲ್ಲಾಬಕ್ಷ ಮುಲ್ಲಾ, ಕೃಷ್ಣಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು