
ಸಂಜೆವಾಣಿ ವಾರ್ತೆ,
ವಿಜಯಪುರ ಜೂ.೨: ಜನಸಂಖ್ಯೆ ಹೆಚ್ಚಳದಿಂದಾಗಿ, ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಅನೇಕ ಗಿಡ ಮರಗಳು ನಾಶವಾಗುತ್ತಿದ್ದು, ಇದನ್ನು ಸರಿದೂಗಿಸಲು ಪ್ರತಿಯೊಬ್ಬರು ಗಿಡಮರಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಬೇಕೆಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಭಾನುವಾರ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಪ್ರಕೃತಿ ಕಾಲೋನಿಯಲ್ಲಿ ಜರುಗಿದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ನಾಶದಿಂದಾಗಿ, ಸರಿಯಾಗಿ ಮಳೆಯಾಗುತ್ತಿಲ್ಲ, ಬೆಳೆಗಳು ಬರುತ್ತಿಲ್ಲ, ಬಂದರೂ ಸರಿಯಾಗಿ ಇಳುವರಿ ಕೊಡುತ್ತಿಲ್ಲ. ಹವಾಮಾನ ವೈಪರಿತ್ಯದಿಂದಾಗಿ, ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಹೀಗೆ ಮುಂದುವರೆದರೆ, ಮುಂದೊAದು ದಿನ ಮನುಷ್ಯರಿಗೆ ಅಪಾಯ ಕಟ್ಟಿಟ್ಟ ಬುತ್ತಿ, ಹೀಗಾಗಿ ಪ್ರತಿಯೊಬ್ಬರು ಗಿಡಗಳನ್ನು ಬೆಳೆಸಬೇಕು, ಪ್ರಕೃತಿ ಸಮತೋಲನ ಕಾಪಾಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಸಹ ವಿಸ್ತರಣ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಬೇಕು. ಅರಣ್ಯ ಕೃಷಿ ಮಾಡಬೇಕು, ಅರಣ್ಯ ಕೃಷಿ ಮಧ್ಯದಲ್ಲಿ ಅಂತರ ಬೇಸಾಯ ಮಾಡಬೇಕು. ಹಣ್ಣಿನ ಗಿಡ ಮರಗಳನ್ನು ಹೆಚ್ಚೆಚ್ಚು ಬೆಳಸಬೇಕು. ಸಾವಯವ, ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಚಂದ್ರಶೇಖರ ಜಮಖಂಡಿ, ಮಹಾನಗರ ಪಾಲಿಕೆ ಸದಸ್ಯ ಮುಳಗೌಡ ಬಿರಾದಾರ, ಮಾತನಾಡಿದರು.
ಬಿಕೆ ಶೋಭಾ ಸ್ವಾಗತಿಸಿದರು. ಗಿರೀಶ ಕುಲಕರ್ಣಿ ನಿರೂಪಿಸಿದರು. ಬಿಕೆ ಶೈಲಾ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿಕೆ ಸರೋಜಾ, ಸುವರ್ಣ, ಜಯಶ್ರೀ ಕನ್ನೂರ, ಶ್ರೀಪತಿರಾವ ಪಾಟೀಲ, ಕೆ.ಎಸ್. ದೊಡ್ಡಮನಿ, ಬಸವರಾಜ, ರವೀಂದ್ರ ಬದ್ನಿಮಠ ಸೇರಿದಂತೆ ಬಡಾವಣೆಯ ನಾಗರಿಕರು, ವಿವಿಧ ಕೇಂದ್ರಗಳಿAದ ಅಗಮಿಸಿದ ಈಶ್ವರಿಯ ವಿದ್ಯಾಲಯದ ಪದಾಧಿಕಾರಿಗಳು, ಆಮಂತ್ರಿತರು ಉಪಸ್ಥಿತರಿದ್ದರು.