
ಕೆಜಿಎಫ್:ಸೆ:೨: ಕೆರೆಕಟ್ಟೆ ಕಾಲು ದಾರಿ ಬಂಡಿ ದಾರಿ ನಕ್ಷೆಗಳಲ್ಲಿರುವ ದಾರಿಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಒತ್ತುವರಿಯನ್ನು ತೆರವುಗೊಳಿಸಲು ಆದೇಶ ನೀಡಲಾಗಿದ್ದು ಒಂದು ವೇಳೆ ಒತ್ತುವರಿ ತೆರವುಗೊಳಿಸದಿದ್ದಾರೆ ಅವರ ವಿರುದ್ಧ ಕಂದಾಯ ಇಲಾಖೆ ಕ್ರಿಮಿನಲ್ ಕೇಸ್ ದಾಖಲು ಮಾಡಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಕೋಲಾರ ಜಿಲ್ಲಾಧಿಕಾರಿ ರವಿಕುಮಾರ್ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಡೆಸಿದ ಜಿಲ್ಲಾಧಿಕಾರಿಗಳು ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಜಾ ಸೇವಾ ಅಂದೋಲನ ಸಭೆಗಳನ್ನು ತಾಲ್ಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಉಸ್ತುವರಿ ಸಚಿವರ ಅಧ್ಯಕ್ಷೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಸೆಪ್ಟಂಬರ್ ೫ ರಂದು ನಡೆಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಈ ಹಿನ್ನಲೆಯಲ್ಲಿ ಪ್ರತಿಯೊಂದು ತಾಲ್ಲೂಕಿನಲ್ಲಿ ಯಾವ ರೀತಿ ಸಿದ್ದತೆಗಳನ್ನು ಕೈಗೊಂಡಿದ್ದಾರೆ ಮತ್ತು ಯಾವ ಇಲಾಖೆಗಳಿಗೆ ಯಾವ ಜಾವಾದ್ಬರಿಯನ್ನು ನೀಡಲಾಗಿದೆ ಎಂಬುದನ್ನು ಪರಿಶೀಲನೆ ನಡೆಸಲು ಆಗಮಿಸಿದ್ದು ಪ್ರಜಾ ಸೇವಾ ಅಂದೋಲನವನ್ನು ಸಾರ್ವಜನಿಕರಿಗೆ ಹೇಗೆ ಪ್ರಚಾರವನ್ನು ಮುಟ್ಟಿಸಬೇಕು ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಯಾವ ರೀತಿ ಮಾಹಿತಿಯನ್ನು ಮುಟ್ಟಿಸಬೇಕು ಎಂಬುದರ ವಿಚಾರವನ್ನು ಸುರ್ಧೀಗವಾಗಿ ಚರ್ಚೆ ನಡೆಸಲಾಯಿತ್ತು ಎಂದು ಹೇಳಿದರು.
ಹಿಂದೆ ಆದಾಯ ಪ್ರಮಾಣದ ಮೀತಿಯನ್ನು ೩೨ ಸಾವಿರಕ್ಕೆ ನಿಗದಿಪಡಿಸಲಾಗಿತ್ತು ಆದ್ದರಿಂದ ಹಲವು ಪೆನ್ಷನ್ ದಾರರಿಗೆ ಪೆನ್ಷನ್ ಸ್ಥಗಿತಗೊಂಡಿತ್ತು ಆದರೆ ವಿಧಾನಸಭೆ ಕಲಾಪದಲ್ಲಿ ವಿಷಯ ಪ್ರಸ್ಥಾಪ ಮಾಡಿ ೩೨ ಸಾವಿರದಿಂದ ಇದೀಗ ೧.೨೦ ಲಕ್ಷಕ್ಕೆ ಏರಿಕೆ ಮಾಡಿರುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಅರ್ಹ ಫಲಾನುಭವಿಗಳಿಗೆ ಪೆನ್ಷನ್ ಲಭಿಸಲಿದೆ ಮತ್ತು ಆರೋಗ್ಯ ಸಂಭಂದಿಸದಂತೆ ಬಿಪಿಎಲ್ ಕಾರ್ಡ್ಗಾಗಿ ಆಗಮಿಸುವವರಿಗೆ ಅಂದೇ ಬಿಪಿಎಲ್ ಕಾರ್ಡ್ ವಿತರಿಸುವಂತೆ ಆದೇಶ ನೀಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಪೋಡಿ ದುರಸ್ಥಿ ಸರ್ವೆ ಸ್ಕೇಚ್ಗಳ ಬಗ್ಗೆ ಬಂದ ಅರ್ಜಿಗಳನ್ನು ಅಂದೇ ವಿಲೆವಾರಿ ಮಾಡಲು ಸಾಧ್ಯವಾಗದಿದ್ದರೆ ಪ್ರತಿ ವಾರದ ಬುದುವಾರಂದು ನಡೆಯಲಿರುವ ಜನಾಂದೋಲನ ಸಭೆಯಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಹಾಸ್ಟಲ್ಗಳಲ್ಲಿ ಮಕ್ಕಳಿಗೆ ಊಟ ಉಪಾಚಾರಗಳು ಸರ್ಮಪಕವಾಗಿ ನೀಡಲಾಗುತ್ತಿದೆಯೇ ಎಂಬುದನ್ನು ಮಕ್ಕಳಿಂದ ದೂರುಗಳನ್ನು ಪಡೆದು ಪರಿಶೀಲನೆ ನಡೆಸಿ ಪರಿಹಾರ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ತಹಶೀಲ್ದಾರ್ ಗಾಯಿತ್ರಿ , ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಮೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ರಾಜೇಶ್ ಹಾಗು ಇತರರು ಹಾಜರಿದ್ದರು.


























