Home ಕ್ರೈಂ ಸುದ್ದಿಗಳು ಜಿಲ್ಲಾಧಿಕಾರಿ ಕಚೇರಿ ಎಸ್. ಡಿ. ಎ., ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆ

ಜಿಲ್ಲಾಧಿಕಾರಿ ಕಚೇರಿ ಎಸ್. ಡಿ. ಎ., ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆ

ವಿಜಯಪುರ, ಏ. 18:ಜಿಲ್ಲಾಧಿಕಾರಿ ಕಚೇರಿ ಎಸ್. ಡಿ. ಎ. ಹಾಗೂ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಇಬ್ಬರನ್ನು ಲೋಕಾಯುಕ್ತ ಪೆÇಲೀಸರು ಬಂಧಿಸಿದ್ದಾರೆ.
ಜಿಲ್ಲಾಡಳಿತ ಕಚೇರಿಯ ಎಸ್ ಡಿ ಎ ಅರವಿಂದ ಪವಾರ
ಗುತ್ತಿಗೆ ಆಧಾರದಲ್ಲಿ ಸೇವೆ ಮಾಡುವ ಕಂಪ್ಯೂಟರ್ ಆಪರೇಟರ್ ಅಯ್ಯಬ್ ತೊನಶ್ಯಾಳ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪೆಟ್ರೋಲ್ ಬಂಕ್ ಜಾಗದ ನಕಾಶೆ ಆನ್ ಲೈನ್ ನಲ್ಲಿ ಅಪೆÇ್ಲೀಡ್ ಮಾಡಲು ಲಂಚ ಡಿಮಾಂಡ್ ಮಾಡಿ
15,000 ನಗದು ಸ್ವೀಕಾರ ಮಾಡುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಎಸ್ ಡಿ ಎ ಅರವಿಂದ ಹಾಗೂ ಕಂಪ್ಯೂಟರ್ ಆಪರೇಟರ್ ಅಯ್ಯೂಬ್ ಇಬ್ಬರನ್ನೂ
ಲೋಕಾಯುಕ್ತ ಪೆÇಲೀಸರು ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಇನ್ಸಪೆಕ್ಟರ್ ಆನಂದ ಟಕ್ಕಣ್ಣನವರ ಹಾಗೂ ಇತರೆ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದರು.