
ಕೋಲಾರ,ಏ,೧೬- ಕಾಂಗ್ರೇಸ್ ಪಕ್ಷವು ಈ ಹಿಂದೆ ಪಕ್ಷ ವಿರೋಧ ಚಟುವಟಿಕೆಗಳನ್ನು ಬಹಿರಂಗವಾಗಿ ಮಾಡಿದರೂ ಸಹ ಯಾವೂದೇ ಕ್ರಮ ಕೈಗೊಳ್ಳದ ಹೈಕಮಾಂಡ್ ದಾವಣಗೆರೆ ಚುನಾವಣೆಯಲ್ಲಿ ಫಲಿತಾಂಶಕ್ಕೆ ಮುನ್ನವೇ ತನ್ನ ಸೋಲನ್ನು ಆಲ್ಪಸಂಖ್ಯಾತರ ತಲೆ ಮೇಲೆ ಹಾಕಿ ಕೈ ತೊಳೆದು ಕೊಳ್ಳಲು ಕೆಲವು ಷಡ್ಯಂತರ ನಡೆಸಲಾಗಿರುವ ಬಗ್ಗೆ ಅಹಿಂದ ವರ್ಗದಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಕಾಂಗ್ರೆಸ್ ಪಕ್ಷ ಜಾತ್ಯತೀತ ಮೌಲ್ಯಗಳಿಗೆ ತಿಲಾಂಜಲಿ ಇಟ್ಟು ಕುಟುಂಬ ಮತ್ತು ಜಾತಿ ರಾಜಕಾರಣಕ್ಕೆ ಮಣೆ ಹಾಕಿರುವುದು ಜಿಗುಪ್ಸೆಗೆ ಎಡೆ ಮಾಡಿ ಕೊಟ್ಟಿದೆ. ಆಲ್ಪಸಂಖ್ಯಾತರ ಮುಖಂಡರ ಮೇಲೆ ತೆಗೆದು ಕೊಳ್ಳುತ್ತಿರುವ ಸೇಡಿನ ಕ್ರಮವಾಗಿದೆ ಎಂದು ಅರೋಪಗಳು ವ್ಯಕ್ತವಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಅತ್ಯಂತ ಹೆಚ್ಚಿನ ಜನಸಂಖ್ಯಾ ಲಿಂಗಾಯಿತ ಸಮುದಾಯದ ಶಾಮನೂರು ಶಿವಶಂಕರಪ್ಪನವರಿಗೆ ಕಳೆದ ೩೦ ವರ್ಷಗಳಿಂದ ಬೆಂಬಲಿಸಿ ಶಾಸಕರನ್ನಾಗಿ ಮುಂದುವರೆಸುತ್ತಾ ಬಂದಿದ್ದರು. ನಂತರದಲ್ಲಿ ಈ ಕ್ಷೇತ್ರವನ್ನು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತದೆ ಎಂಬ ಭರವಸೆಯನ್ನು ಕಾಂಗ್ರೇಸ್ ನಾಯಕತ್ವ ನೀಡಿತ್ತು. ಕೇವಲ ಮುಸ್ಲಿಂ ಮಾತ್ರವಲ್ಲ ಕುಟುಂಬ ರಾಜಕರಣವನ್ನು ವಿರೋಧಿಸುವ ಎಲ್ಲಾ ಜಾತ್ಯಾತೀತ ಶಕ್ತಿಗಳ ಬಯಕೆಯೂ ಅಗಿತ್ತು. ಆದರೆ ಕುಟುಂಬ ಜಾತಿ ಮತ್ತು ಹಣ ಬಲದ ಮುಂದೆ ಕಾಂಗ್ರೇಸ್ಸಿನ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ಮಂಡಿಯೂರಿದ ಬಗ್ಗೆ ಎಲ್ಲರಲ್ಲೂ ಜಿಗುಪ್ಸೆ ಮೂಡಿಸಿದೆ
ಕೇವಲ ಮುಸ್ಲಿಂ ಸಮುದಾಯದ ಮುಖಂಡರು ಮಾತ್ರವಲ್ಲ ಯಾವ ಜಾತ್ಯಾತೀತ ಶಕ್ತಿಗಳು ಸಹ ದಾವಣಗೆರೆಯ ಚುನಾವಣೆಯ ಪ್ರಕ್ರಿಯೆಗಳಲ್ಲಿ ಪಾಲ್ಗುಳ್ಳಲಿಲ್ಲ. ಈ ಹಿಂದೆ ಇದೇ ಕುಟುಂಬ ಜಾತಿಯ ಕಾರಣಕ್ಕಾಗಿ ಬಿಜೆಪಿಯ ರಾಘವೇಂದ್ರ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದಾಗ ಹೈಕಮಾಂಡ್ಗೆ ಪಕ್ಷದ ತತ್ವ ಸಿದ್ದಾಂತ ಶಿಸ್ತು ಬದ್ದತೆಗಳು ಎಲ್ಲಿ ಹೋಗಿದ್ದವು.? ಎಂದು ಪ್ರಶ್ನಿಸಿದೆ.
ಇದೇ ನಸ್ಸೀರ್ ಆಹಮದ್ ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ಭಾರಿ ವಿಧಾನ ಸಭಾ ಚುನಾವಣೆಯಲ್ಲಿ ಸ್ವರ್ಧಿಸಿದಾಗಲೂ ಜಿಲ್ಲಾ ಪ್ರಭಾವಿತ ಕಾಂಗ್ರೇಸ್ ಮುಖಂಡರ ಗುಂಪು ಪಕ್ಷದ ವಿರೋಧ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡು ಸೋಲಿಸಿದರು. ಆಗ ಪಕ್ಷದ ಹೈಕಮಾಂಡ್ ಯಾವೂದೇ ಕ್ರಮ ಕೈಗೊಂಡಿರಲಿಲ್ಲ. ಅದರೆ ಈಗಾ ಪಕ್ಷದ ವಿರುದ್ದವಾಗಿ ಕಾರ್ಯನಿರ್ವಹಿಸಿರುವುದಾಗಿ ಅಧಾರ ರಹಿತವಾದ ಆರೋಪಗಳ ಮೇರೆಗೆ ಅಲ್ಪಸಂಖ್ಯಾತ ರಾಜ್ಯ ಮಟ್ಟದ ಮುಖಂಡರನ್ನು ಒಬ್ಬೊಬ್ಬರನ್ನಾಗಿ ದಮನ ಮಾಡಿ ಕೊಂಡು ಬರುತ್ತಿರುವುದು ಕಾಂಗ್ರೇಸ್ ಪಕ್ಷಕ್ಕೆ ಮುಂದೆ ಭಾರಿ ಹೊಡೆತ ಬೀಳುವುದು ಖಚಿತವಾಗಿದೆ.
೨೦೨೮ರ ಚುನಾವಣೆಗೆ ಬಿಜೆಪಿ ಮತ್ತು ಜೆ.ಡಿ.ಎಸ್.ಪಕ್ಷವು ಮೈತ್ರಿಯಾಗಿರುವ ಬೆನ್ನ ಹಿಂದೆಯೇ ಕಾಂಗ್ರೇಸ್ ಪಕ್ಷಕ್ಕೆ ಬೆನ್ನಲುಬು ಅಗಿದ್ದ ಆಲ್ಪಸಂಖ್ಯಾತರ ಮುಖಂಡರನ್ನು ಉಚ್ಚಾಟನೆ, ವಜಾ ಗೊಳಿಸುವ ಮೂಲಕ ಭಿನ್ನಮತ ಉಂಟಾಗಲು ಎಡೆಮಾಡಿ ಕೊಟ್ಟಿದೆ. ಇದರಿಂದ ಕಾಂಗ್ರೇಸ್ ಪಕ್ಷದ ಭವಿಷ್ಯಕ್ಕೆ ಮಾರಕವಾಗುವುದು ಖಚಿತವಾಗಿದೆ. ಇದರ ಲಾಭ ಮುಂದಿನ ಚುನಾವಣೆಯಲ್ಲಿ ಮೈತ್ರಿ ಪಕ್ಷವು ಪಡೆಯುವುದು ಸೂರ್ಯ ಚಂದ್ರರಷ್ಟೆ ಖಚಿತವಾಗಿದೆ ಎಂಬ ಮಾತುಗಳು ಆಲ್ಪಸಂಖ್ಯಾತರ ವಲಯದಲ್ಲಿ ಕೇಳಿ ಬರುತ್ತಿದೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಆಲ್ಪಸಂಖ್ಯಾತ ಸಮುದಾಯದಲ್ಲಿ ಎಡ-ಬಲ ರಂತೆ ಇದ್ದು ಮುಸ್ಲಿಂ ಸಮುದಾಯವನ್ನು ಸಂಘಟಿಸಿ ಬೆಂಬಲ ಸಿಗುವಂತೆ ಮಾಡುತ್ತಿದ್ದ ಸೇನಾನಿಗಳನ್ನು ತೆಗೆದು ಹಾಕಿರುವುದರಿಂದ ಸಿದ್ದರಾಮಯ್ಯನವರಿಗೂ ಸಹ ನಷ್ಟವುಂಟಾಗಲಿದೆ ಸಿದ್ದರಾಮಯ್ಯನವರ ಶಕ್ತಿ ಕುಂದಲಿದ್ದು ಅವರ ಮುಖ್ಯ ಮಂತ್ರಿ ಸ್ಥಾನದ ಅಳಿವು ಉಳಿವು ಸಂದರ್ಭದಲ್ಲಿ ಅಲ್ಪಸಂಖ್ಯಾತರ ಬೆಂಬಲ ಕಳೆದು ಕೊಳ್ಳುವ ಸಾಧ್ಯತೆಯನ್ನು ಆಲ್ಲಗೆಳೆಯುವಂತಿಲ್ಲ.
ಇದೇ ರೀತಿ ನಾಳೆ ನಡೆಯಲಿರುವ ಸಚಿವ ಸಂಪುಟ ಪುನಾರಚನೆಯಲ್ಲೂ ಭಿನ್ನ ಮತ ಭುಗಿಲು ಉಂಟಾಗಿ ಕಾಂಗ್ರೇಸ್ ಪಕ್ಷವು ಮುಂದೆ ಎದುರಲಿಸಲಿರುವ ಚುನಾವಣೆಗಳಿಗೆ ಭಾರಿ ಹೊಡೆತ ಉಂಟಾಗುವ ಸಾಧ್ಯತೆಗಳಿದ್ದರೆ ಮೈತ್ರಿ ಪಕ್ಷಕ್ಕೆ ಲಾಭವಾಗುವುದು ಕಟ್ಟಿಟ್ಟ ಬುತ್ತಿಯಾಗಿದೆ.
ಈಗಾಗಲೇ ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಆಲ್ಪಸಂಖ್ಯಾತ ಮುಖಂಡರು ಹಾಗೂ ನಸ್ಸೀರ್ ಆಹಮದ್ ಅಭಿಮಾನಿಗಳು ಕಾಂಗ್ರೇಸ್ ಪಕ್ಷದಲ್ಲಿ ಪಡೆದಿದ್ದ ವಿವಿಧ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಕೇಳಿ ಬರುತ್ತಿದೆ.




















