Home ಜಿಲ್ಲೆ ತುಮಕೂರು ಆಸ್ಪತ್ರೆಯಲ್ಲಿ ಡಯಗ್ನೋಸ್ಟಿಕ್ಸ್ ರಿಯಾಯ್ತಿ ಪ್ಯಾಕೇಜ್ ದರ ಲಭ್ಯ

ಆಸ್ಪತ್ರೆಯಲ್ಲಿ ಡಯಗ್ನೋಸ್ಟಿಕ್ಸ್ ರಿಯಾಯ್ತಿ ಪ್ಯಾಕೇಜ್ ದರ ಲಭ್ಯ

ತುಮಕೂರು, ನ. ೨- ನಗರದ ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ರಾಘವೇಂದ್ರ ನಗರ ಕೈಲಾಸ ಆಶ್ರಮದ ಪಕ್ಕದಲ್ಲಿ ಸಿ.ಜಿ. ಕಿಡ್ನಿಕೇರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆರೋಗ್ಯವೇ ಭಾಗ್ಯ ಎಂಬ ಉದ್ದೇಶದಿಂದ ಡಯಗ್ನೋಸ್ಟಿಕ್ಸ್ ವತಿಯಿಂದ ಸಾರ್ವಜನಿಕರಿಗೆ ಸಮಗ್ರ ಆರೋಗ್ಯ ತಪಾಸಣಾ ರಿಯಾಯಿತಿ ದರದಲ್ಲಿ ಲಭ್ಯವಿದೆ. ಈ ಪ್ಯಾಕೇಜ್‌ನಲ್ಲಿ ನವೆಂಬರ್ ೧ ರಿಂದ ’ಕನ್ನಡ ರಾಜ್ಯೋತ್ಸವ ಪ್ರಯುಕ್ತ ಡಿಸೆಂಬರ್ ೩೧ ರವರೆಗೆ ರಿಯಾಯಿತಿ ಪ್ಯಾಕೇಜ್ ಲಭ್ಯವಾಗಿದೆ. ಎಲ್ಲ ಸಾರ್ವಜನಿಕರು ತುಮಕೂರು ಸುತ್ತಮುತ್ತಲಿನ ಉಪಯೋಗಿಸಿಕೊಳ್ಳಬೇಕೆಂದು ಸಿ.ಜಿ. ಕಿಡ್ನಿಕೇರ್ ಮಲ್ಟಿ ಸ್ಟೆ?ಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ಯಶವಂತ್ ಗಂಗಯ್ಯ ತಿಳಿಸಿದ್ದಾರೆ.


ಒಟ್ಟು ೧೦ ಪ್ರಮುಖ ಆರೋಗ್ಯ ಪರೀಕ್ಷೆಗಳು ಲಭ್ಯವಿದ್ದು, ರಕ್ತದ ಪರೀಕ್ಷೆ, ಮಧುಮೇಹ, ಕೊಲೆಸ್ಟ್ರಾಲ್, ಲಿವರ್, ಕಿಡ್ನಿ, ಥೈರಾಯ್ಡ್ ಹಾಗೂ ವಿಟಮಿನ್‌ಗಳ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು. ಸಿ.ಬಿ.ಸಿ. ಸಂಪೂರ್ಣ ರಕ್ತ ಪರೀಕ್ಷೆ, ಎಫ್.ಬಿ.ಎಸ್. ರಕ್ತದಲ್ಲಿನ ಸಕ್ಕರೆ ಕಾಯಿಲೆ ಪರೀಕ್ಷೆ, ಕೊಲೆಸ್ಟ್ರಾಲ್ ಪರೀಕ್ಷೆ, ಎಲ್.ಎಫ್.ಟಿ.- ಲಿವರ್ ಪರೀಕ್ಷೆ, ಆರ್.ಎಫ್.ಟಿ. – ಕಿಡ್ನಿ ಪರೀಕ್ಷೆ, ಹೆಚ್.ಬಿ.ಎ.೧ ಸಿ, ಮೂರು ತಿಂಗಳ ರಕ್ತದ ಪರೀಕ್ಷೆಯ ಮಟ್ಟ, ಟಿ.ಎಫ್.ಟಿ. ಥೈರಾಯ್ಡ್ ಪರೀಕ್ಷೆ, ವಿಟಮಿನ್ ಬಿ೧೨ ಪರೀಕ್ಷೆ, ವಿಟಮಿನ್-ಡಿ ಪರೀಕ್ಷೆಗಳು ರಿಯಾಯಿತಿ ದರದಲ್ಲಿ ಲಭ್ಯವಾಗಿದೆ. ವಿಶೇಷ ಕೊಡುಗೆಯೆಂದರೆ ಆರೋಗ್ಯ ತಪಾಸಣಾ ಪ್ಯಾಕೇಜ್ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಮನೆಯಿಂದಲೇ ಸ್ಯಾಂಪಲ್ ಸಂಗ್ರಹಿಸುವ (ಮನೆಯಿಂದ ಸಂಗ್ರಹಣೆ) ಸೌಲಭ್ಯವಿದೆ, ಮನೆಯಲ್ಲೇ ಉಚಿತವಾಗಿ ರಕ್ತದೊತ್ತಡ (ಬಿ.ಪಿ) ತಪಾಸಣೆ ಮಾಡಲಾಗುತ್ತದೆ, ವೃದ್ಧರಿಗೆ ಮತ್ತು ಹಾಸಿಗೆ ಹಿಡಿರುವ ರೋಗಿಗಳಿಗೆ ಇದು ಅತ್ಯಂತ ಉಪಯುಕ್ತವಾಗಿದೆ, ವರದಿಗಳನ್ನು (ರಿಪೋಟ್) ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ. ಬೇಸಿಕ್ ಆರೋಗ್ಯ ಪ್ಯಾಕೇಜ್ ಹೊಂದಿರುತ್ತದೆ.


ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ೯೮೮೬೬೨೮೫೭೫ ರವರನ್ನು ಸಂಪರ್ಕಿಸಬಹುದು ಎಂದು ಡಾ.ನಳಿನಿ ಯಶವಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.