Home ಜಿಲ್ಲೆ ಬೆಂಗಳೂರು ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಂಜೂರು ತನಿಖೆಗೆ ಆಗ್ರಹ

ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಂಜೂರು ತನಿಖೆಗೆ ಆಗ್ರಹ

ಕೋಲಾರ,ಮೇ,೧೩- ಮಾಲೂರು ತಾಲ್ಲೂಕಿನ ಬೈರ್‍ನಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ ೫ರ ಗೋಮಾಳ ಜಮೀನು ಅಕ್ರಮವಾಗಿ ತೊರ್‍ನಹಳ್ಳಿ ಗ್ರಾಮದ ನಿವಾಸಿ ಆಲ್ಲಾ ಬಕಾಶ್ ಬಿನ್ ಸಾಬು ಸಾಬ್ ಹಾಗೂ ಗೇರುಪುರ ಗ್ರಾಮದ ಭಾಗ್ಯಮ್ಮ ಬಿನ್ ಚಿಕ್ಕ ಬಸಪ್ಪ ಎಂಬುವರಿಗೆ ಕ್ರಮವಾಗಿ ೪.೨೦ ಎಕರೆ ಮತ್ತು ೩ ಎಕರೆಯನ್ನು ನಕಲಿ ದಾಖಲೆಗಳ ಮೂಲಕ ಮಂಜೂರು ಮಾಡಲಾಗಿದೆ ಎಂದು ಆರ್.ಟಿ.ಐ. ಕಾರ್ಯಕರ್ತ ಕೆ.ಸಿ.ರಾಜಣ್ಣ ಆರೋಪಿಸಿದರು.


ಮಗರದ ಪತ್ರಕರ್ತರ ಭವನದಲ್ಲಿನ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿ ಕಳೆದ ೧೯೯೯ನೇ ಸಾಲಿನಲ್ಲಿ ನಕಲಿ ದಾಖಲೆಗಳ ಮಂಜೂರಾತಿ ಮಾಡಲಾಗಿದೆ ಇದರು ಮೌಲ್ಯ ಸುಮಾರು ೧೫ ಕೋಟಿ ರೂಗಳೆಂದು ಅಂದಾಜಿಸಲಾಗಿದೆ, ಅಕ್ರಮವಾದ ಮಾರ್ಗದಲ್ಲಿ ಯಾವೂದೇ ನೈಜಿಕತೆ ಇಲ್ಲದಿದ್ದರರೂ ಖಾತೆ ಮಾಡಲು ನೆರವು ನೀಡಲಾಗಿದೆ. ಒಂದೇ ದಿನದಲ್ಲಿ ಪೋಡಿ ವಗೈರೇಗಳು ಮಾಡಿ ಕೊಟ್ಟು ಸರ್ಕಾರಕ್ಕೆ ಭಾರಿ ನಷ್ಟವುಂಟು ಮಾಡಲಾಗಿದೆ ಎಂದು ದೂರಿದರು.


ಈ ಪ್ರಕರಣದಲ್ಲಿ ತಹಸೀಲ್ದಾರ್ ಶ್ರೀಮತಿ ರೂಪ, ಕಸಬಾ ಆರ್.ಐ. ಎಂ.ಬಿ.ಅರುಣ್ ಕುಮಾರ್, ಗ್ರಾಮಾಡಳಿತಾಧಿಕಾರಿ ದೀಪಕ್ ಚಂಗಣ್ಣ, ಶ್ರೀಮತಿ ಸವಿತಾ, ಡಿ.ಎ.ಆರ್.ಕೃಷ್ಣಪ್ಪ. ಸರ್ವೆಯರ್ ಕಿರಣ್ ಕುಮಾರ್, ರವಿಕುಮಾರ್ ಇವರುಗಳ ಭಾಗಿಯಾಗಿದ್ದಾರೆ. ಇವರ ವಿರುದ್ದ ಭ್ರಷ್ಟಚಾರ ನಿರೋಧಕ ಕಾಯ್ದೆ ಪ್ರಕರಣ ದಾಖಲು ಮಾಡಲು ಲೋಕಾಯುಕ್ತ ಅಧೀಕ್ಷಕರಿಗೂ ದೂರು ನೀಡಿರುವುದಾಗಿ ಹೇಳಿದರು.


ನಕಲಿ ಫಲಾನುಭವಿ ಆಲ್ಲಾಬಕಾಶ್ ಎಂಬುವರು ಕಳೆದ ೧೯೯೧-೯೨ನೇ ಸಾಲಿನಲ್ಲಿ ನಮೂನೆ-೫೦ರಲ್ಲಿ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಕೆಯಲ್ಲಿ ೧೯ ವರ್ಷದವನೆಂದು ಕಳೆದ ೮ ವರ್ಷಗಳಿಂದ ಅನಧಿಕೃತ ಸಾಗುವಳಿ ಮಾಡುತ್ತಿರುವುದಾಗಿ ಉಲ್ಲೇಖೆಸಿರುವುದು ಸ್ವಷ್ಟವಾಗಿದೆ. ಅರ್ಜಿದಾರ ೧೧ ವರ್ಷದ ಅಪ್ರಾಪ್ತ ಬಾಲಕನಾಗಿರುವಾಗಲೇ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡಿ ಕೊಂಡು ತನ್ನ ಸ್ವಾಧೀನದಲ್ಲಿತ್ತು ಎಂದು ತಿಳಿಸಿರುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂಬುವುದನ್ನು ಅವರೇ ಬಹಿರಂಗ ಪಡೆಸಿದ್ದಾರೆಂದು ದಾಖಲೆಗಳನ್ನು ಪ್ರದರ್ಶಿಸಿದರು.


ಸಾಗುವಳಿ ಚೀಟಿ ಪಡೆಯಲು ಅರ್ಜಿದಾರ ಬ್ಯಾಂಕಿನಲ್ಲಿ ಪಾವತಿಸಿರುವ ಹಣದ ಚಲನ್‌ಗೆ ಸಹಿ ಹಾಕದೆ ಪಾವತಿಸಲಾಗಿದೆ. ಈ ಜಮೀನನ್ನು ೧೯೯೧, ೧೯೯೪ ಹಾಗೂ ೧೯೯೭ ಸೇರಿದಂತೆ ಮೂರು ಭಾರಿ ಮಂಜೂರಾತಿ ಮಾಡಿಸಿ ಕೊಳ್ಳುವಂತ ಔಚಿತ್ಯವೆನಿತ್ತ ? ಎಂದು ಪ್ರಶ್ನೆಸಿರುವ ಅವರು ಕಳೆದ ೧೯೯೦ರಲ್ಲಿ ಸಾಗುವಳಿ ಚೀಟಿ ಪಡೆದಿದ್ದರೂ ಸಹ ಖಾತೆ ಮಾಡಿ ಕೊಂಡಿರಲಿಲ್ಲ. ಪೋಡಿ ಮಾಡಿಸಿ ಕೊಂಡಿರಲಿಲ್ಲ ಏಕೆ ? ಎಂದು ಪ್ರಶ್ನಿಸಿದರು.


ಈ ಅಕ್ರಮ ಮಂಜೂರಾತಿಯಲ್ಲಿ ತಹಸೀಲ್ದಾರ್ ಮತ್ತು ಅವರ ಸಿಬ್ಬಂದಿಗಳು ಕಿಕ್ ಬ್ಯಾಕ್ ಪಡೆದು ನಕಲಿ ಖಾತೆ ಮಾಡಿದ್ದಾರೆ ಇದರಲ್ಲಿ ೧೦ ಮಂದಿ ಭಾಗಿಯಾಗಿದ್ದಾರೆ. ಈ ಪೈಕಿ ೮ ಮಂದಿ ಸರ್ಕಾರಿ ನೌಕರರಾಗಿದ್ದಾರೆ ಎಂದು ದೂರಿದರು.


ಎ.ಡಿ.ಎಲ್.ಆರ್. ಕೃಷ್ಣಪ್ಪ ಅವರು ಈಗಾಗಲೇ ಕೆಲವು ದಾಖಲೆಗಳಲ್ಲಿ ನನ್ನ ನಕಲಿ ಸಹಿ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಜಮೀನುಗಳ ಜಂಟಿ ಸರ್ವೆಗಳ ವರದಿಯಲ್ಲಿ ನಕಲಿ ಸಹಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧವಾಗಿ ತನಿಖೆ ಹಂತದಲ್ಲಿದೆ ಎಂದರು.


ಈ ಸಂದರ್ಭದಲ್ಲಿ ಸಮಾಜಕ ಕಾರ್ಯಕರ್ತರಾದ ಚಿನ್ನಪ್ಪ ಮತ್ತು ಪ್ರಕಾಶ್ ಉಪಸ್ಥಿತರಿದ್ದರು.