
ಕಾಳಗಿ: ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ-ತೀಡಿ ಸರಿದೂಗಿಸುವ ಕೆಲಸಗಳನ್ನು ಮಾಡುವಲ್ಲಿ ಮಾಧ್ಯಮಗಳ ಪಾತ್ರ ತುಂಬಾ ಪ್ರಮುಖವಾಗಿದೆ.
ಅದರಲ್ಲಿ ಸುದೀರ್ಘ ಕಾಲದಿಂದಲೂ ಕಾರ್ಯ ನಿರ್ವಹಿಸುತ್ತಾ ಬಂದಿರುವ ಸಂಜೆ ವಾಣಿ ಕನ್ನಡ ದಿನ ಪತ್ರಿಕೆ ಸತ್ಯದ ಸಂಕೇತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಾಮಾಜಿಕ ಕಳಕಳಿಯನ್ನು ತೊರ್ಪಡುತ್ತದೆ ಎಂದು ಕಾಳಗಿ ಗ್ರೇಡ್-1 ತಹಶಿಲ್ದಾರ ಪೃಥ್ವಿರಾಜ ಪಾಟೀಲ ತಮ್ಮ ಅನಿಸಿಕೆ ಯನ್ನು ವ್ಯಕ್ತಪಡಿಸಿದ್ದಾರೆ.
ಕಾಳಗಿಯಲ್ಲಿ ಶುಕ್ರವಾರ ಸಂಜೆ ವಾಣಿ ಹೊರತಂದ ದಿಪಾವಳಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ, ಮಾತನಾಡಿ ಸಮಾಜದಲ್ಲಿ ನಡೆಯುತ್ತಿರುವ ಜ್ವಲಂತ ಸಮಸ್ಯೆಗಳು, ನಾಡಿನ ಕಲೆ, ಸಾಂಸ್ಕøತಿ, ಸಾಹಿತ್ಯ, ಸಂಗೀತ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುವಂತಹ ನಿಟ್ಟಿನಲ್ಲಿ ಸಂಜೆವಾಣಿ ದೀಪಾವಳಿ ವಿಶೇಷ ಪುರವಣಿ ಹೊರತಂದಿರುವುದು ತುಂಬಾ ಸಂತೋಷ ತಂದಿದೆ ಎಂದರು.
ಪತ್ರಿಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟಗೊಳ್ಳುವ ಮೂಲಕ ಎತ್ತರ ಕ್ಕೇರಲಿ ಎಂದು ಹಾರೈಸಿ ಶುಭ ಕೋರಿದರು.
ಬಿಜೆಪಿ ಕಲಬುರಗಿ ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ಸುಂದರ ಡಿ ಸಾಗರ ಮಾತನಾಡಿ ಸಂಜೆವಾಣಿ ‘ದೀಪಾವಳಿ’ ವಿಶೇಷಾಂಕ ಹಲವು ವೈವಿಧ್ಯತೆಯಿಂದ ಕೂಡಿದೆ. ಕಥೆ, ಕವನ, ಪ್ರವಾಸ ಕಥನ, ಅಡುಗೆ, ಮಕ್ಕಳ ಕಥೆಗಳು, ಸ್ಪರ್ಧಾ ಕಥೆಗಳು ಓದುಗರನ್ನು ಸೆಳೆಯುತ್ತವೆ.ನಾನು ವಿದ್ಯಾರ್ಥಿ ಜೀವನದಲ್ಲಿ ಹಲವಾರು ಪುಸ್ತಕಗಳನ್ನು ಓದಿದ್ದೇನೆ. ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನಾರ್ಜನೆ ಸಿಗಲಿದೆ’ ಎಂದು ಅಭಿಪ್ರಾಯಪಟ್ಟರು.





















