Home ಜಿಲ್ಲೆ ಬೆಂಗಳೂರು ನಿರಂತರ ಅಭ್ಯಾಸದಿಂದ ಕ್ರೀಡಾ ಚಟುವಟಿಕೆ ಬೆಳೆಸಿಕೊಳ್ಳಿ

ನಿರಂತರ ಅಭ್ಯಾಸದಿಂದ ಕ್ರೀಡಾ ಚಟುವಟಿಕೆ ಬೆಳೆಸಿಕೊಳ್ಳಿ

filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0008,0.0000; brp_del_sen:0.1300,0.0000; motionR: 0; delta:null; module: photo;hw-remosaic: false;touch: (0.3996826, 0.48171428);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 33;

ಶಿಡ್ಲಘಟ್ಟ.ಸೆ೨:ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡಾ ಮನೋಭಾವ ಬೆಳೆಸಿಕೊಂಡು ನಿರಂತರ ಅಭ್ಯಾಸ ಮಾಡುವ ಮೂಲಕ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ನಮ್ಮ ಕಾಲೇಜಿಗೆ ಹಾಗೂ ತಾಲ್ಲೂಕಿಗೆ ಹೆಮ್ಮೆ ತರುವಂತಹ ಕೆಲಸ ವಾಗಲಿ ಎಂದು ನಗರದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟಶಿವಾರೆಡ್ಡಿ ಯವರು ಅಭಿಪ್ರಾಯ ವ್ಯಕ್ತಪಡಿಸಿದರು.


ನಗರದ ನೆಹರೂ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಉಳಿಕೆ ಇದ್ದ ಮೂರು ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.


ಡಾಲ್ಫಿನ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ಮಾತನಾಡಿ ಜಿಲ್ಲಾ ಮಟ್ಟದ ಕ್ರೀಡಾ ಕೂಟಕ್ಕೆ ಅಂತಿಮವಾಗಿ ಉಳಿಕೆಯಲ್ಲಿರುವ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲಾಗಿದ್ದು ಅದರಲ್ಲಿ ಶಿಡ್ಲಘಟ್ಟ ನಗರದ ಡಾಲ್ಫಿನ್ ಪಿಯು ಕಾಲೇಜು, ಅಕ್ಷರ ಪಿಯು ಕಾಲೇಜು, ಬಿಜಿಎಸ್ ಕಾಲೇಜು, ಯೂನಿವರ್ಸಲ್ ಹಾಗೂ ಸ್ವಾಮಿ ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳಿಗೆ ಭಾಗವಹಿಸಿದ್ದು ಸೆಪ್ಟೆಂಬರ್ ೧೫ ರಿಂದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ನಮ್ಮ ತಾಲ್ಲೂಕಿನಿಂದ ೧೦೦ ಕ್ಕೂ ಹೆಚ್ಚು ಕ್ರೀಡಾ ಪಟುಗಳು ಭಾಗವಹಿಸಲಿದ್ದು ಹೆಚ್ಚಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಬರಲಿದ್ದಾರೆ ಎಂದು ಭರವಸೆ ಮೂಡಿಸಿದರು.


ಕ್ರೀಡಾ ಕೂಟದಲ್ಲಿ ಭಾಗವಹಿಸಿ ಉತ್ತಮ ಸ್ಪರ್ಧೆ ನೀಡಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಪದಕಗಳನ್ನು ಹಾಗೂ ಪ್ರಶಂಸನಾ ಪತ್ರಗಳನ್ನು ನೀಡಿದರು.


ಸಂದರ್ಭದಲ್ಲಿ ಉಪನ್ಯಾಸಕರಾದ ಲಕ್ಷ್ಮಯ್ಯ ಹಾಗೂ ನೆಹರೂ ಕ್ರೀಡಾಂಗಣದ ಕರಾಟೆ ಶ್ರೀನಿವಾಸ್ ಉಪಸ್ಥಿತರಿದ್ದರು.