
ಶಹಾಪುರ,ಏ.17-ಶಹಾಪುರದ ಕಾಯಕ ದಾಸೋಹಿ ಚರಬಸವ ಶರಣರ ಬಗೆಗಿನ ಕೃತಿಯನ್ನು ಇತ್ತೀಚೆಗೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಕನ್ನಡ ಸಂಸ್ಕøತಿ ಸಚಿವರಾದ ಮಾನ್ಯ ಶಿವರಾಜ್ ತಂಗಡಗಿ ಮುಂತಾದ ಗಣ್ಯರು ಲೋಕಾರ್ಪಣೆ ಮಾಡಿದರು.
ಗಿರಿನಾಡಿನ ಲೇಖಕ ಸಿದ್ಧರಾಮ ಹೊನ್ಕಲ್ ಅವರು ರಚಿಸಿದ “ಕಾಯಕಯೋಗಿ ಚರಬಸವ” ಕೃತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ “ಸಾಮರಸ್ಯದ ನೆಲೆಗಳು” ಮಾಲಿಕೆಯ ಮೂಲಕ ಪ್ರಕಟಗೊಂಡ ನಾಡಿನ 41 ಕೃತಿಗಳಲ್ಲಿ ಒಂದಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆಯವರು, ಕಾರ್ಯದರ್ಶಿ ಡಾ.ಸಂತೋಷ ಹಾನಗಲ್, ನಾಡೋಜ ಬರಗೂರು ರಾಮಚಂದ್ರಪ್ಪ, ಶಾಸಕರಾದ ರಿಜ್ವಾನ್ ಅರ್ಷದ್ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳು ಈ ಸಾಮರಸ್ಯದ ಮಾಲಿಕೆ ಕೃತಿಗಳು ತುಂಬಾ ಮಹತ್ವದ ಆಶಯ ಹೊಂದಿದ್ದು ಮುಂದಿನ ಪೀಳಿಗೆಯವರು ಇನ್ನೂ ಹೆಚ್ಚಿನ ಸಾಮರಸ್ಯದ ಮೂಲಕ ಬದುಕುವ ಸಂದೇಶ ನೀಡುತ್ತವೆ. ಸಾಮರಸ್ಯ ಕಲಕುವ ಮನಸುಗಳಿಗೆ ಇವು ಉತ್ತರವಾಗಲಿವೆ ಎಂದು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಈ ಕೃತಿಗಳನ್ನು ಪ್ರಕಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಭಿನಂದನೆಗಳು ಹೇಳಿದರು.ಎಲ್ಲಾ ಲೇಖಕರಿಗೂ ವೇದಿಕೆಯಲ್ಲಿ ಗೌರವಿಸಿ ಔದಾರ್ಯ ಮೆರೆದರು.




















