
ಕೋಲಾರ,ಮಾ,೨೮- ದೇಶದಾದ್ಯಂತ ೨೦೨೭ರ ಸಾಲಿನ ಜನಗಣತಿಯ ಪೂರ್ವ ಭಾವಿಯಾಗಿ ಕೆಲಸ ಕಾರ್ಯಗಳ ಸಿದ್ದತೆಗಳು ನಡೆಯುತ್ತಿದೆ.ಮೊಟ್ಟ ಮೊದಲ ಬಾರಿಯಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ಕಾರ್ಯ ಮಾಡಲಾಗುವುದು. ಕಳೆದ ೨೦೨೦ ರಲ್ಲಿ ಕೋರೋನಾ ಕಾರಣದಿಂದಾಗಿ ಮಾಡಲಾಗದ ಕಾರಣ ೨೦೨೬ರಲ್ಲಿ ಜನಗಣತಿಯನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದರು.
ನಗರದ ಜಿಲ್ಲಾ ಆಡಳಿತಾಧಿಕಾರಿಗಳ ಕಚೇರಿಯ ನ್ಯಾಯಾಂಗದ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೊದಲ ಭಾಗವಾಗಿ ಮನೆಗಳ ಪಟ್ಟಿಯ ಮನೆ ಗಣತಿ ಕಾರ್ಯಕ್ರಮವನ್ನು ಏಪ್ರಿಲ್ ೧೬ ರಿಂದ ಪಾರಂಭಿಸಲಿದ್ದು ಒಂದು ತಿಂಗಳವರೆಗೆ ನಡೆಯಲಿದೆ ಎಂದು ಹೇಳಿದರು.
ಜನಗಣತಿಯ ಕಾರ್ಯಕ್ರಮ ನಿರ್ವಾಹಣೆಗೆ ೩೩೮೫ ಬ್ಲಾಕ್‌ಗಳನ್ನು ರಚಿಸಲಾಗಿದೆ. ೨೫೪೦ ಗ್ರಾಮೀಣ ಭಾಗವಾಗಿದೆ, ೧ ಬ್ಲಾಕ್‌ಗೆ ೧೫೦ ರಿಂದ ೧೮೦ ಮನೆಗಳಿರುತ್ತದೆ. ಅಂದಾಜು ೮೦೦ ಜನರನ್ನು ಅಂದಾಜಿಸಲಾಗಿದೆ. ೬ ರಿಂದ ೭ ಗಣತಿದಾರರಿಗೆ ೧ ಸೂಪರ್ ವೈಸರ್ ಇರುತ್ತಾರೆ. ನಗರದಲ್ಲಿ ೮೦೮ ಬ್ಲಾಕ್‌ಗಳು ಪಟ್ಟಣ ಪಂಚಾಯಿತಿ ೩೨ ಬ್ಲಾಕ್‌ಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ೨೮೬೧ ಗಣತಿದಾರರ ಸಿಬ್ಬಂದಿಗೆ ೪೭೬ ಮಂದಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದ್ದು ಒಬ್ಬರು ಮಾಸ್ಟರ್ ಟ್ರೈನರ್‌ನ್ನು ನೇಮಿಸಲಾಗುವುದು. ೬೨ ಮಂದಿ ಫೀಲ್ಡ್ ಟ್ರೈನೆರ್‍ಸ್ ನೇಮಿಸಲಾಗಿದೆ ಇವರು ೨೮೬೧ ಮಂದಿಗೆ ತರಭೇತಿಯನ್ನು ನೀಡಲಿದ್ದಾರೆ ಎಂದರು.
ಈಗಗಲೇ ಎಲ್ಲಾ ಸಿಬ್ಬಂದಿಗಳ ನೇಮಕಾತಿ ಈಗಾಗಲೇ ಮುಗಿದಿದೆ. ಏಪ್ರಿಲ್ ೭ ರಿಂದ ೧೨ರವರೆಗೆ ತರಭೇತಿ ಕಾರ್ಯಕ್ರಮವನ್ನು ಮುಗಿಸಲಿದೆ. ಜನಗಣತಿಗೆ ಶಿಕ್ಷಕರನ್ನು ನೇಮಿಸಲಾಗಿದೆ. ಕೆಲವಡೆ ಅಂಗನವಾಡಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ಬ್ಲಾಕ್‌ಗಳ ರಚನೆ ಸಿದ್ದತೆಯಾಗಿದೆ. ಜನಗಣತಿಯಲ್ಲಿ ಸಾರ್ವಜನಿಕರಿಗೆ ಸಹ ಸೆನ್ಸ್‌ಸ್ಸ್ ಮಾಡಲು ಅವಕಾಶ ಕಲ್ಪಿಸಿದೆ. ಈ ದತ್ತಾಂಶದ ಪಡೆದು ಕೊಂಡು ದೇಶದ ಅರ್ಥಿಕ ನೀತಿಯನ್ನು ರಚಿಸಲು ಬಳಿಸಿ ಕೊಳ್ಲಾಗುವುದು ನಿಮ್ಮ ಮನೆಯ ಸದಸ್ಯರ ಪಟ್ಟಿ ವಿವರ ಹಾಗೂ ಸಂಪೂರ್ಣ ವಿಳಾಸದ ವಿವರಗಳನ್ನು ವಿಶೇಷವಾಗಿ ನೀಡಲಾಗಿರುವ ಆಪ್‌ನಲ್ಲಿ ದಾಖಲಿಸಲು ದೇಶದಾದ್ಯಂತ ೧ ರಿಂದ ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ತಿಳಿಸಿದರು.
ಜನಗಣತಿಯಲ್ಲಿ ಸಾಮಾನ್ಯವಾಗಿ ೩೪ ರಿಂದ ೩೫ ಪ್ರಶ್ನೆಗಳಿರುವುದು ಅದನ್ನು ಸಮರ್ಪಕವಾಗಿ ಭರ್ತಿ ಮಾಡ ಬೇಕಾಗಿದೆ. ಇದರಲ್ಲಿ ಮನೆಯ ಮೂಲ ಭೂತ ಸೌಲಭ್ಯಗಳ ಮಾಹಿತಿಯನ್ನು ಕೇಳಲಾಗಿದೆ. ಓ.ಟಿ.ಪಿ. ಬರುವುದು ಜೂತೆಗೆ ನಿಮಗೆ ಐ.ಡಿ.ಯನ್ನು ನೀಡಲಾಗುವುದು ೧೬ ರಿಂದ ಪ್ರಾರಂಭವಾಗುವ ಜನ ಗಣತಿಯಲ್ಲಿ ಗಣತಿದಾರರಿಗೆ ವಿವರಗಳನ್ನು ನೀಡ ಬೇಕಾಗಿದೆ. ಇದನ್ನು ಸಾರ್ವಜನಿಕರು ಸ್ವಯಂ ಘೋಷಿತವಾಗಿ ಜನಗಣತಿಯನ್ನು ಆಪ್ ಮೂಲಕ ಆನ್ ಲೈನ್ ಸದ್ಬಳಿಸಿ ಕೊಳ್ಳ ಬಹುದಾಗಿದೆ ಎಂದರು.
ಇದರ ಉಸ್ತುವಾರಿಯನ್ನು ಜಿಲ್ಲಾಧಿಕಾರಿಗಳು ವಹಿಸಲಿದ್ದಾರೆ. ಸಹಾಯಕರಾಗಿ ಅಪರ ಜಿಲ್ಲಾಧಿಕಾರಿಗಳು ಇರುತ್ತಾರೆ. ತಹಸೀಲ್ದಾರ್ ಅವರುಗಳು ಕಾರ್ಯನಿರ್ವಾಹಣೆಯ ಜವಾಬ್ದಾರಿಯನ್ನು ವಹಿಸುವರು ಇವರಿಗೆ ಸಹಾಯಕರಾಗಿ ನಗರಸಭೆ ಮತ್ತು ಪುರಸಭೆ ಅಧಿಕಾರಿಗಲು ಕಾರ್ಯನಿರ್ವಹಿಸುವರು ವಂದು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಮಂಗಳಾ ಅವರು ಉಪಸ್ಥಿತರಿದ್ದರು.





















