Home ಜಿಲ್ಲೆ ದೇಶದ ಯೋಜನೆಗಳಿಗೆ ಜನಗಣತಿ ಆಧಾರ: ಪ.ಪಂ ಮುಖ್ಯಾಧಿಕಾರಿ ವೀರೇಶ ಹಟ್ಟಿ

ದೇಶದ ಯೋಜನೆಗಳಿಗೆ ಜನಗಣತಿ ಆಧಾರ: ಪ.ಪಂ ಮುಖ್ಯಾಧಿಕಾರಿ ವೀರೇಶ ಹಟ್ಟಿ

ಕೊಲ್ಹಾರ: ಏ.12:ಭಾರತದ ಜನಗಣತಿ 2027 ಡಿಜಿಟಿಲೀಕರಣವಾಗಿದ್ದು. ಅದನ್ನು ಮೊಬೈಲ್ ಮೂಲಕ ಬಹಳ ಸರಳವಾಗಿ ಮಾಡಬಹುದು . ಅದನ್ನು ಯಾರು ಗೊಂದಲ ಮಾಡಿಕೊಳ್ಳದೆ 2026ರ ಮೊದಲನೆ ಹಂತದ ಮನೆಪಟ್ಟಿ ಹಾಗೂ ಮನೆ ಗಣತಿಯನ್ನು ಯಶಸ್ವಿಗೊಳಿಸಬೇಕೆಂದು ತಹಸೀಲ್ದಾರ ಸಂತೋಷ ಮ್ಯಾಗೇರಿ ಹೇಳಿದರು.

ಪಟ್ಟಣದ ಸರ್ಕಾರಿ ಪಾಲ್ ಟೆಕ್ನಿಕ್ ಕಾಲೇಜಿನಲ್ಲಿ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತಿ ಸಹಯೋಗದಲ್ಲಿ ಹಮ್ಮಿಕೊಂಡ ಗಣತಿದಾರರು ಹಾಗೂ ಗಣತಿದಾರರ ಮೇಲ್ವಿಚಾರಕರ 3 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
2021ರಲ್ಲಿ ಆಗಬೇಕಾದ ರಾಷ್ಟ್ರೀಯ ಜನಗಣತಿ ಕೋವಿಡ್ ಕಾರಣದಿಂದ ತೊಂದರೆಯಾಗಿ ಈ ವರ್ಷದಿಂದ ಮತ್ತೆ ಗಣತಿ ಪ್ರಾರಂಭವಾಗಿದೆ. ಗಣತಿಯು ಎ 16 ರಿಂದ ಮೇ 15 ರವರೆಗೆ ನಡೆಯುತ್ತದೆ. ಈ ವೇಳೆ ಯಾರು ಗಣತಿ ಬಗ್ಗೆ ಭಯ ಪಡದೆ ಎಲ್ಲರೂ ಹುರುಪಿನಿಂದ ಗಣತಿ ಮಾಡಿ ಮನೆ ಪಟ್ಟಿ ಹಾಗೂ ಏರಿಯಾ ಮ್ಯಾಪ್ ನ್ನು ಸಿದ್ಧಪಡಿಸಿಕೊಳ್ಳಬೇಕು. ಇಡೀ ಜಿಲ್ಲೆಯಲ್ಲಿ ಕೊಲ್ಹಾರ ತಾಲೂಕಿನ ಗಣತಿ ಕಾರ್ಯ ಮೊದಲು ಬೇಗ ಮುಗಿಬೇಕು ಅದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ವಿನಂತಿಸಿದರು.
ಗಣತಿದಾರರಿಗೆ ಗಣತಿ ಸಂದರ್ಭದಲ್ಲಿ ಏನಾದರೂ ಸಮಸ್ಯೆ, ತೊಂದರೆಗಳಾದರೆ ಗಣತಿ ಮೇಲ್ವಿಚಾರಕರಿಗೆ, ಚಾರ್ಜ್ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೀರೇಶ ಹಟ್ಟಿ ಮಾತನಾಡಿದರು, ಜನಗಣತಿ 2027 ಸರ್ಕಾರಿ ಕಾರ್ಯಕ್ರಮವಾಗಿದ್ದು ಇದರ ಮೂಲಕ ದೇಶದಲ್ಲಿ ಯೋಜನೆಗಳು, ಸೌಲಭ್ಯಗಳು ಹಾಗೂ ಜನಸಂಖ್ಯೆ ಆಧಾರದ ಮೇಲೆ ವಿಧಾನ ಸಭೆ, ಲೋಕಸಭೆ ಕ್ಷೇತ್ರಗಳು ಮರುವಿಂಗಡಣೆಯಾಗಲಿವೆ ಕಾರಣ ಎಲ್ಲ ಗಣತಿದಾರರು ಮನೆ ಮನೆಗೆ ತೆರಳಿ ನಿಖರವಾಗಿ ಮನೆ ಪಟ್ಟಿ ಮಾಡಿ ಸರಿಯಾದ ಮಾಹಿತಿಯನ್ನು ಕೊಡಬೇಕು ಎಂದರು.
ಈ ವೇಳೆ ಸರ್ಕಾರಿ ಪಾಲ್ ಟೆಕ್ನಿಕ್ ಕಾಲೇಜಿನ ಪ್ರಿನ್ಸಿಪಾಲ್ ಎಂ ಬಿ ಗರಸಂಗಿ ಅತಿಥಿಯಾಗಿ ಭಾಗವಹಿಸಿದ್ದರು.
ಮಾಸ್ಟರ್ ಟ್ರೈನರ್ ಶಿಕ್ಷಕ ಸಂಗಮೇಶ ಕಮತಗಿ ಹಾಗೂ ಕಂಠಿ ಯವರು ಗಣತಿ ತರಬೇತಿಯನ್ನು ನೀಡಿದರು. ಕೊಲ್ಹಾರ ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಗಣತಿದಾರ ಹಾಗೂ ಮೇಲ್ವಿಚಾರಕರ ತರಬೇತಿಗಳು ಸರ್ಕಾರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಪಾಲ್ ಟೆಕ್ನಿಕ್ ಕಾಲೇಜಿನಲ್ಲಿ ಜರುಗಿದವು.