Home ಜಿಲ್ಲೆ ಕರಿಯರ್ ಗೈಡನ್ಸ್ ಇನ್ ಜಾಬ್ ಅಪಾರಚ್ಯೂನಿಟಿ

ಕರಿಯರ್ ಗೈಡನ್ಸ್ ಇನ್ ಜಾಬ್ ಅಪಾರಚ್ಯೂನಿಟಿ

ಬೀದರ :ಏ.12: ಗೌರವಾನ್ವಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸದಸ್ಯರು ಹಾಗೂ ಬಿ.ವಿ.ಬಿ. ಶಾಲಾ ಕಾಲೇಜು ಆವರಣದ ಸಂಚಾಲಕರಾದ ಡಾ. ರಜನೀಶ್ ಎಸ್. ವಾಲಿಯವರ ಮಾರ್ಗದರ್ಶನದಲ್ಲಿ ಹಾಗೂ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೀಪಾ ರಾಗ ನೇತೃತ್ವದಲ್ಲಿ ಹಾಗೂ ಮುಖ್ಯ ಅತಿಥಿಯಾಗಿ ಆಗಮಿಸಿದ ಡಿವಿಜನ್ ಲೀಡ್ ದೇಶಪಾಂಡೆ ಸ್ಕೀಲಿಂಗ್ ಫೌಂಡೇಷನ್ ಶ್ರೀ ಅಜೀತ ಕುಲಕರ್ಣಿಯವರು ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳ ತಾವು ಶಿಕ್ಷಣ ಪಡೆದ ನಂತರ ಹುದ್ದೆ ಪಡೆದುಕೊಳ್ಳಲು ಯಾವ ದಾರಿ ಬೇಕೆಂದು ಹುಡುಕುತ್ತಾ ಕುಡದೆ ನಮ್ಮ ಫೌಂಡೇಷನಿಗೆ ತಾವು ಸೇರಿದಾಗ ಸುಮಾರು 3 ತಿಂಗಳು ತರಬೇತಿಯ ಜೊತೆಗೆ ಉದ್ಯೋಗದ ಅವಕಾಶ ಮಾಡಿಕೊಡುತ್ತೇವೆ ಇದರ ಲಾಭವನ್ನು ನಮ್ಮ ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಅವರು ಕರೆಕೊಟ್ಟರು ಅಷ್ಟೆ ಅಲ್ಲದೆ ತಾವುಗಳು ನಿರಾಶರಾಗದೆ ತಾವು ಸದಾ ಹಸನ್ಮುಖರಾಗಿ ತಾವು ಶೃದ್ಧೆಯಿಂದ ಅಧ್ಯಯನ ಮಾಡಿದಾಗ ತಮಗೆ ಉತ್ತಮ ದಾರಿ ದೊರೆಯುತ್ತದೆ ಹಾಗೂ ಶಿಬಿರಾರ್ಥಿಗಳು ಉತ್ತಮ ಅಧ್ಯಯನದ ಜೊತೆಗೆ ಗುರು ಹಿರಿಯ ಆಶೀರ್ವಾದ ಪಡೆದು ತಾವು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕೆಂದು ಹಿತನುಡಿ ಹೇಳಿದರು.
ಈ ಕಾರ್ಯಕ್ರಮದ ಸ್ವಾಗತವನ್ನು ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ಶ್ರೀಮತಿ ಮೀನಾಕ್ಷಿ ಕಮಠಾಣೆ ಮಾಡಿದರೆ, ಸಂಚಾಲನೆಯನ್ನು ಇಂಗ್ಲೀಷ ವಿಭಾಗದ ಮುಖ್ಯಸ್ಥರಾದ ಶ್ರೀ ವೀರೇಂದ್ರ ಜಿಂದೆ ನಡೆಸಿಕೊಟ್ಟರೆ ಹಿಂದಿ ವಿಭಾಗದ ಉಪನ್ಯಾಸಕರಾದ ಶ್ರೀ ನೆಹರು ಪವಾರ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ‘ಅ’ ಘಟಕದ ಅಧಿಕಾರಿಗಳಾದ ಡಾ. ಲಕ್ಷ್ಮೀ ವಿಶ್ವನಾಥ ಹಾಗೂ ‘ಬ’ ಘಟಕದ ಅಧಿಕಾರಿಯಾದ ಶ್ರೀ ಬಸವರಾಜ ಎಸ್. ಬಿರಾದಾರ ಉಪಸ್ಥಿತರಿದ್ದರು
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎನ್.ಎಸ್.ಎಸ್. ವಿದ್ಯಾರ್ಥಿಗಳು, ಎನ್.ಸಿ.ಸಿ. ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯ ಬೋಧಕ, ಬೋಧಕೇತರರ ಸಿಬ್ಬಂದಿಗಳು ಹಾಜರಿದ್ದರು