
ಜಮಖಂಡಿ: ಏ.17:ತಾಲೂಕಿನ ಹುನ್ನೂರ ಹಾಗೂ ಹಿಪ್ಪರಗಿ ನಡುವಿನ ರಸ್ತೆಯಲ್ಲಿ ಸಂಭವಿಸಬಹುದಾಗಿದ್ದ ಭಾರಿ ಸರಣಿ ಅಪಘಾತ ಅದೃಷ್ಟವಶಾತ್ ತಪ್ಪಿದ ಘಟನೆ ಗುರುವಾರ ನಡೆದಿದೆ.
ಜಮಖಂಡಿಯಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದತ್ತ ಸಾಗುತ್ತಿದ್ದ ಸರ್ಕಾರಿ ಸಾರಿಗೆ ಬಸ್ ರಸ್ತೆ ಹಂಪ್ ದಾಟುವ ವೇಳೆ ಚಾಲಕ ವೇಗವನ್ನು ಕಡಿಮೆ ಮಾಡಿದಾಗ, ಹಿಂಬದಿಯಿಂದ ಅತಿವೇಗದಲ್ಲಿ ಬಂದ ಕಾರೊಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮ ಬಸ್ಸಿನ ಹಿಂದೆಯೇ ಬರುತ್ತಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರು ತೀವ್ರ ಅಪಾಯಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದ್ದರೂ, ಅವರು ಕ್ಷಣಾರ್ಧದಲ್ಲಿ ತಾವು ನಿಯಂತ್ರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಬೈಕ್ ಸವಾರರು, ಕಾರು ಚಾಲಕ ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂಬುದು ತಿಳಿದು ಬಂದಿದೆ.
ಕಾರು ಚಾಲಕನನ್ನು ಮುಧೋಳ ನಗರದ ಪ್ರಶಾಂತ ಘೋರಪಡೆ ಎಂದು ಗುರುತಿಸಲಾಗಿದೆ. ಇವರು ಮಹಾರಾಷ್ಟ್ರ ರಾಜ್ಯದ ಕೌಟೆ ಮುರಾಳ ಗ್ರಾಮದತ್ತ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸುದ್ದಿ ತಿಳಿದ ತಕ್ಷಣ 112 ಪೆÇಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಜಮಖಂಡಿ ಗ್ರಾಮೀಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.




















