
ಕೋಲಾರ,ಮೇ,೧೧-ತ್ರೈತ ಸಿದ್ಧಾಂತ ಪ್ರಬೋಧ ಸೇವಾ ಸಮಿತಿ ಹಾಗೂ ವಿ.ಕೋಟದ ಜ್ಞಾನವೇದಿಕೆ ಸಮಿತಿ ಆಶ್ರಯದಲ್ಲಿ ಮುಳಬಾಗಿಲು ತಾಲೂಕಿನ ಮದ್ದೇರಿ, ಅಚ್ಚಂಪಲ್ಲಿ, ಮತ್ತು ಮೋತುಕಪಲ್ಲಿ ಗ್ರಾಮಗಳಲ್ಲಿ ತ್ರೈತ ಸಿದ್ಧಾಂತ ಭಗವದ್ಗೀತೆ ಮತ್ತು ಸಂಬಂಧಿತ ತ್ರೈತ ಸಿದ್ಧಾಂತ ಜ್ಞಾನ ಗ್ರಂಥಗಳ ಪ್ರಚಾರ ನಡೆಸಲಾಯಿತು.
ಜ್ಞಾನ ವೇದಿಕೆ-ವಿ ಕೋಟ ಸಮಿತಿ ಅಧ್ಯಕ್ಷ ಕೆ.ಅಶೋಕ್ ಬಾಬು ಮಾತನಾಡಿ, ದೈವಿಕ ಜ್ಞಾನದ ಪ್ರಕಾರ ಜಾತಿಗಳು ಅತಾರ್ಕಿಕ ಮತ್ತು ಮಾತುಗಳು ನಿಷಿದ್ಧ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು, ಜಾತಿ ಎಂಬುದು ಹುರುಳಿಲ್ಲದ ಮತು ಎಂದು ಹೇಳಿ, ಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರ ಸ್ವಾಮಿಗಳು ಬರೆದ ಭಗವದ್ಗೀತೆ ಬಹಳ ಶ್ರೇಷ್ಠ ಗ್ರಂಥವಾಗಿದೆ ಎಂದರು.
ತ್ರೇತಾ ಸಿದ್ಧಾಂತ ಬಗವಧೀತ ಶ್ರೀಕೃಷ್ಣನ ನಿಜವಾದ ಜ್ಞಾನವನ್ನು ಬಹಿರಂಗಪಡಿಸುತ್ತದೆ. ಕರ್ಮಯೋಗದ ವಿಶಿಷ್ಟತೆ ಮತ್ತು ತ್ರಿಮೂರ್ತಿ ಸಿದ್ಧಾಂತದ ಜ್ಞಾನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂಬ ಮುಖ್ಯ ಉದ್ದೇಶದಿಂದ ನಾವು ಭಗವದ್ಗೀತೆಯನ್ನು ಪ್ರಚಾರ ಮಾಡುತ್ತಿದ್ದೇವೆ ಎಂದರು.
ತ್ರೇತಾ ಸಿದ್ಧಾಂತವೆಂದರೆ ಮೂರು ಆತ್ಮಗಳ ಬಗ್ಗೆ – ಜೀವಾತ್ಮ, ಆತ್ಮ, ಮತ್ತು ಪರಮಾತ್ಮ – ತಿಳಿದುಕೊಳ್ಳುವುದು – ದೇವರು ನಮ್ಮ ದೇಹದಲ್ಲಿ ಮೂರು ಆತ್ಮಗಳಾಗಿ ವಿಂಗಡಿಸಲ್ಪಟ್ಟಿದ್ದಾನೆ ಎಂದು ಅವರು ಹೇಳಿದರು. ಕರ್ಮಯೋಗ, ಬ್ರಹ್ಮಯೋಗ ಮತ್ತು ಭಕ್ತಿಯೋಗಗಳು ದೈವಿಕ ಧರ್ಮಗಳಾಗಿದ್ದು, ಅವುಗಳನ್ನು ಅನುಸರಿಸಿದರೆ, ಅವು ವ್ಯಕ್ತಿಯನ್ನು ಕರ್ಮದಿಂದ ಮುಕ್ತಗೊಳಿಸಿ ಅವನಿಗೆ ಮುಕ್ತಿಯನ್ನು ನೀಡುತ್ತವೆ ಎಂದು ಭಗವದ್ಗೀತೆ ಹೇಳುತ್ತದೆ ಎಂದರು.
ತ್ರೈತಸಿದ್ದಾಂತ ಎಂದರೆ ಭಗವದ್ಗೀತೆಯ ಪುರುಷೋತ್ತಮ ಪ್ರಾಪ್ತಿಯೋಗದಲ್ಲಿ ಕ್ಷರ, ಅಕ್ಷರ, ಪುರುಷೋತ್ತಮರೆಂದು ಉಲ್ಲೇಖಿಸಿರುತ್ತಾರೆ. ಇದನ್ನೆ ಮೂರು ಆತ್ಮಗಳ ಸಿದ್ಧಾಂತವನ್ನು ಪ್ರತಿಪಾದಿಸಿ, ಆಚಾರ್ಯ ಪ್ರಬೋಧಾನಂದ ಯೋಗೀಶ್ವರರು ಎಂಬ ಗುರುವು ಮತಾತೀತವಾಗಿ, ಹೇತುಬದ್ದವಾಗಿ, ವಿಜ್ಞಾನಸಹಿತವಾಗಿ ವಿವರಿಸಿ ಗ್ರಂಥಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಇಂದಿನ ಮನುಷ್ಯನು ಪ್ರತಿ ನಿತ್ಯ ಎಷ್ಟೋ ಬಾಧೆಗಳನ್ನು ಅನುಭವಿಸುತ್ತಿದ್ದಾನೆ. ಹಾಗು ಅರ್ಥವಲ್ಲದ ಆಚಾರಗಳು, ಆತ್ಮ ಸಾರವಿಲ್ಲದ ಬೋಧನೆಗಳಿಂದ ನಿಜವಾದ ಆಧ್ಯಾತ್ಮಿಕತೆಯನ್ನು ತಿಳಿಯದೇ ವ್ಯರ್ಥವಾದ ಜೀವನ ನಡೆಸುತ್ತಿದ್ದಾನೆ ಎಂದರು.
ಮನುಷ್ಯನು ಮಾಯೆಯಲ್ಲಿಯೇ ಹುಟ್ಟಿ, ಮಾಯೆಯಲ್ಲಿಯೇ ಬೆಳೆದು, ಮಾಯೆಯಲ್ಲಿ ಮರಣಿಸುತ್ತಿದ್ದಾನೆ. ಅಂತಹವನ ಜನ್ಮ ಹುತ್ತದಲ್ಲಿನ ಗೆದ್ದಲೊಂದಿಗೆ ಸಮಾನ ಎಂದು ನುಡಿದು ಈ ಗ್ರಂಥಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ತ್ರೈತಸಿದ್ಧಾಂತ-ಪ್ರಬೋಧ ಸೇವಾ ಸಮಿತಿ ಇಂದು ಜ್ಞಾನ ವೇದಿಕೆ-ವಿ ಕೋಟ ಸಮಿತಿ ಸದಸ್ಯರುಗಳಾದ ಕೆ.ಅಶೋಕ್ ಬಾಬು, ರವಿ, ಗೌತಮ್ ಕೃಷ್ಣ, ವಿಜಯ್ ಝಾನ್ಸಿ, ಸಂತೋಷ್, ಹೇಮತೇಜಸ್ವಿ, ಚರಣ್, ಸರಸ್ವತಿ, ಅನಸೂಯಮ್ಮ, ಅನ್ನಪೂರ್ಣ, ಸಾತ್ವಿಕ್, ರಾವಣ, ಪ್ರಬೋಧ, ಮತ್ತು ಅದ್ವಿ ಭಾಗವಹಿಸಿದ್ದರು.


























