Home ಜಿಲ್ಲೆ ಕಲಬುರಗಿ ಸಕ್ಕರೆ ಕಾರ್ಖಾನೆ ಎದುರು ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

ಸಕ್ಕರೆ ಕಾರ್ಖಾನೆ ಎದುರು ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

ಆಳಂದ: ಭೂಸನೂರ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್‍ಗೆ ಕನಿಷ್ಠ 3,600 ಬೆಲೆ ನಿಗದಿಪಡಿಸಬೇಕು, ರಾಜ್ಯ ಸರ್ಕಾರ SಂP (ರಾಜ್ಯ ಸಲಹಾ ಬೆಲೆ) ಜಾರಿಗೊಳಿಸಬೇಕು ಹಾಗೂ ಕಬ್ಬು ಖರೀದಿ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಳಂದ ಬಿಜೆಪಿ ಮಂಡಲದ ರೈತ ಮೋರ್ಚಾ ವತಿಯಿಂದ ಭಾನುವಾರ ಕಾರ್ಖಾನೆ ಎದುರು ಭಾನುವಾರ ದೀಪಾವಳಿ ಆಚರಣೆ ಕೈ ಬಿಟ್ಟು ರೈತರ ದೃಷ್ಟಿಯಿಂದ ಪ್ರತಿಭಟನೆ ನಡೆಯಿತು.
ತಾಲ್ಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ ಶೇಗಜಿ ಹಾಗೂ ದೇವಂತಿಗಿ ಶರಣಗೌಡ ಪಾಟೀಲ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸುಭಾμï ಗುತ್ತೇದಾರ ಬೆಂಬಲಿಸಿ ಮಾತನಾಡಿ, ಕಬ್ಬು ಬೆಳೆಗಾರರು ವರ್ಷದಿಂದ ವರ್ಷಕ್ಕೆ ಕೃಷಿ ವೆಚ್ಚದ ಹೆಚ್ಚಳ, ಕೂಲಿ, ನೀರಾವರಿ, ರಸಗೊಬ್ಬರ, ಕಟಾವು ಮತ್ತು ಸಾಗಾಣಿಕೆ ವೆಚ್ಚಗಳಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಪರಿಶ್ರಮಕ್ಕೆ ತಕ್ಕ ನ್ಯಾಯಯುತ ಬೆಲೆ ದೊರೆಯಬೇಕು. ಕಾರ್ಖಾನೆ ಆಡಳಿತ ಮಂಡಳಿ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ಬೆಲೆ ಘೋಷಿಸಬೇಕು. ಅಲ್ಲದೆ, ಜಿಲ್ಲಾಧಿಕಾರಿಗಳು ಎರಡು ದಿನದಲ್ಲಿ ಕರೆಯುವ ಸಭೆಯಲ್ಲಿ ರೈತರು ಕೇಳುವ ಬೆಲೆಯನ್ನು ಘೋಷಿಸಬೇಕು ಈ ನಡುವೆ ತಕ್ಷಣವೇ ಕಾರ್ಖಾನೆ ಆರಂಭಿಸಿ ಕಟಾವಿಗೆ ಸಿದ್ಧವಾಗಿರುವ ಕಬ್ಬನ್ನು ಅರೆಯುವ ಕಾರ್ಯ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಕಬ್ಬು ಖರೀದಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಬೆಳಗಾವಿ ಜಿಲ್ಲೆಯ ಮಾದರಿಯಲ್ಲಿ ರೈತರೊಂದಿಗೆ ಲಿಖಿತ ಒಪ್ಪಂದ ಮಾಡಿಕೊಳ್ಳಬೇಕು. ಕಬ್ಬಿನ ತೂಕ ಮತ್ತು ರಿಕವರಿ ಪ್ರಮಾಣವನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು. ರೈತರು ಡಿಜಿಟಲ್ ವ್ಯವಸ್ಥೆಯ ಮೂಲಕ ತಮ್ಮ ಕಬ್ಬಿನ ತೂಕವನ್ನು ಪರಿಶೀಲಿಸುವ ಅವಕಾಶ ಕಲ್ಪಿಸಬೇಕು. ಕಟಾವು ಹಾಗೂ ಸಾಗಾಣಿಕೆ ವೆಚ್ಚದ ವಿವರಗಳನ್ನು ಮುಂಚಿತವಾಗಿಯೇ ತಿಳಿಸಿ ಒಪ್ಪಂದದಲ್ಲಿ ನಮೂದಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯಾದ್ಯಂತ ಕಬ್ಬಿಗೆ ಏಕರೂಪದ ಬೆಲೆ ನಿಗದಿಪಡಿಸಬೇಕು. ಕಬ್ಬು ಪೂರೈಕೆಯಾದ ನಂತರ ಕಾನೂನುಬದ್ಧ ಅವಧಿಯೊಳಗೆ ಹಣ ಪಾವತಿಸಬೇಕು. ಕಟಾವಿನ ವೇಳಾಪಟ್ಟಿಯನ್ನು ಪಾರದರ್ಶಕವಾಗಿ ಪ್ರಕಟಿಸಬೇಕು. ಸಕ್ಕರೆ ಉತ್ಪಾದನೆಯ ಜೊತೆಗೆ ಮೊಲಾಸಿಸ್, ಎಥನಾಲ್, ವಿದ್ಯುತ್ ಸೇರಿದಂತೆ ಉಪ ಉತ್ಪನ್ನಗಳಿಂದ ಕಾರ್ಖಾನೆ ಗಳಿಸುವ ಆದಾಯದ ವಿವರಗಳನ್ನು ಬಹಿರಂಗಪಡಿಸಬೇಕು ಹಾಗೂ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕುಂದುಕೊರತೆ ಸಮಿತಿ ರಚಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು.
ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಅರುಣಕುಮಾರ್ ಹಾಗೂ ಕಾರ್ಖಾನೆಯ ಉಪಾಧ್ಯಕ್ಷ ಪುರುμÉೂೀತ್ತಮ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿ, ರೈತರ ಬೇಡಿಕೆಗಳನ್ನು ಸರ್ಕಾರ ಮತ್ತು ಕಾರ್ಖಾನೆ ಆಡಳಿತ ಮಂಡಳಿಯ ಗಮನಕ್ಕೆ ತಂದು ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದೇವಂತಿಗೆ ಮಠದ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು, ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕ ಅಶೋಕ್ ಗುತ್ತೇದಾರ, ನಿಜಲಿಂಗಪ್ಪ ಕೊರಳಿ, ಕಲ್ಯಾಣರಾವ್ ಪಾಟೀಲ, ಭೂಸನೂರಿನ ಹಿರಿಯರಾದ ವೀರಣ್ಣ ಮಂಗಣಿ, ಅಣ್ಣಾರಾವ್ ಕವಲಗಾ, ಕಲ್ಯಾಣಿ ಜಮಾದಾರ್, ಆನಂದ ಪಾಟೀಲ ಕೊರಳಿ, ಸಂತೋಷ ಹಾದಿಮನಿ, ಶ್ರೀಶೈಲ ಪಾಟೀಲ, ಮಂಜುನಾಥ ಬುಕ್ಕೆ, ಸೀತಾರಾಮ ಜಮಾದಾರ್ ಸೇರಿದಂತೆ ಹಲವು ಕಬ್ಬು ಬೆಳೆಗಾರರು ಭಾಗವಹಿಸಿದ್ದರು.
ಮೊದಲು ಬೇಡಿಕೆಯಂತೆ ದರಘೋಷಿಸಿ ಕಾರ್ಖಾನೆ ಆರಂಭಿಸಬೇಕು ಎಂದು ಕೆಲ ರೈತರು ಪಟ್ಟು ಹೊಡೆದಿದ್ದರಾದರೂ ಕೊನೆಗಳಿಗೆ ಒಣಗುತ್ತಿರುವ ಕಬ್ಬು ಮೊದಲು ಕಾರ್ಖಾನೆ ಕಾರ್ಖಾನೆ ಆರಂಭಿಸಿ ನುರಿಸೋಣಾ ತಕ್ಷಣವೇ ಕಾರ್ಖಾನೆ ಆರಂಭಿಸಿ ಎಂದು 3600 ಬೆಲೆಗೆ ನಿರಂತರ ಹೋರಾಟ ಮುಂದುವರಿಸೋಣಾ ಎಂದು ಗುತ್ತೇದಾರ್ ಅವರು ಘೋಷಿಸಿದರು.
ಮನವಿ ಸ್ವೀಕರಿಸಿದ ಎನ್ ಎಸ್ ಎಲ್ ಕಾರ್ಖಾನೆ ಉಪಾಧ್ಯಕ್ಷ ಪುರುμÉೂೀತ್ತಮ ಅವರು ಅನುಮತಿ ಕೊಟ್ಟರೆ ತಕ್ಷಣದಿಂದಲೇ ಕಾರ್ಖಾನೆ ಕಬ್ಬುನುರಿಸಲು ಆರಂಭಿಸಲಾಗುವುದು ದರ ಕುರಿತು ಜಿಲ್ಲಾಧಿಕಾರಿಗಳು ಪುನರಸಭೆ ಕರೆದಿದ್ದು ಕಾರ್ಖಾನೆ ಒಕ್ಕೂಟದಿಂದ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿ ಬೆಲೆ ನೀಡಲಾಗುವುದು ಎಂದು ಭರವಸೆ ನೀಡಿದರು.
ತಹಸಿಲ್ದಾರ್ ಪರ ಆಗಮಿಸಿದ ಉಪ ತಹಸಿಲ್ದಾರ್ ಅರುಣ್ ಕುಮಾರ್ ಅವರು ಮನವಿ ಸ್ವೀಕರಿಸಿ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಮನವಿ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.