(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.24: ನಲ್ಲಚೆರುವು ಪ್ರದೇಶದ ಕಸ ಸಂಗ್ರಹ ಘಟಕದ ಆವರಣದಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ. ಪಾಲಿಕೆಯಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ 23 ಹೊಸ ವಾಹನಗಳಿಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಲೋಕಾರ್ಪಣೆ ಮಾಡಿದರು.
ಈ ವೇಳೆ ಮೇಯರ್ ಮುಲ್ಲಂಗಿ ನಂದೀಶ್, ಸದಸ್ಯರುಗಳಾದ ಪ್ರಭಂಜನಕುಮಾರ್, ಪಿ.ಗಾದೆಪ್ಪ, ಕುಬೇರಾ, ಮಿಂಚು ಸೀನಾ ಮೊದಲಾದವರು ಇದ್ದರು.
ವಿವಿಧ ಕಾಮಗಾರಿಗಳಿಗೆ ಚಾಲನೆ:
ಬಂಡಿಮೋಟ್ ಮಸೀದಿ ಹಿಂಭಾಗ ಅಂದಾಜು ವೆಚ್ಚ 63 ಲಕ್ಷ 50 ಸಾವಿರ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಯ ನಿರ್ಮಾಣ ಕಾಮಗಾರಿಗೆ , ಮಿಲ್ಲರ್ ಪೇಟೆಯಲ್ಲಿ 50 ಲಕ್ಷ ರೂ.ಗಳ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ವಿಶಾಲ ನಗರ – ಹನುಮಾನ ನಗರದಲ್ಲಿ 31 ಲಕ್ಷ 83 ಸಾವಿರ ರೂ.ಗಳ ವೆಚ್ಚದ ಕಾಮಗಾರಿಗೆ, ಅಂಜಿನಪ್ಪ ನಗರ ಹಾಗೂ ಬಿ.ಗೋನಾಳ್ ಗ್ರಾಮದ ಅಂಗನವಾಡಿ ನಿರ್ಮಾಣ ಕಾಮಗಾರಿಗಳಿಗೆ (ಅನುಕ್ರಮವಾಗಿ ಅಂದಾಜು 40 ಲಕ್ಷ ರೂ.ಗಳು, 20 ಲಕ್ಷ ರೂ.ಗಳ ವೆಚ್ಚ) ಚಾಲನೆ ನೀಡಲಾಯಿತು. ಈ ಸಂದರ್ಭ ಪಾಲಿಕೆಯ ಸದಸ್ಯ ಎಂ.ಪ್ರಭಂಜನಕುಮಾರ್, ಕಾಂಗ್ರೆಸ್ ಮುಖಂಡ ಹೊನ್ನಪ್ಪ ಮೊದಲಾದವರು ಇದ್ದರು.
ನಲ್ಲಚೆರುವು ಪ್ರದೇಶದ ಕಸ ಸಂಗ್ರಹ ಘಟಕದ ಆವರಣದಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ. ಪಾಲಿಕೆಯಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ 23 ಹೊಸ ವಾಹನಗಳಿಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಲೋಕಾರ್ಪಣೆ ಮಾಡಿದರು.