Home ಜಿಲ್ಲೆ ಘಟಿಕೋತ್ಸವದಲ್ಲಿ ಬಸವಣ್ಣನವರ ಧ್ವಜ:೧೦ ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ

ಘಟಿಕೋತ್ಸವದಲ್ಲಿ ಬಸವಣ್ಣನವರ ಧ್ವಜ:೧೦ ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ

ಬೀದರ್, ಮೇ ೧೨: ಬೆಂಗಳೂರಿನ ಜೈನ ವಿಶ್ವ ವಿದ್ಯಾಲಯದಲ್ಲಿ ನಡೆದ ಪದವಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಪತ್ರ ಪಡೆಯುವ ಸಂಧರ್ಭದಲ್ಲಿ ಬೀದರ ನಿವಾಸಿ ಸಾಗರ ದೇವಪ್ಪಾ ಅವರು ವಿಶ್ವಗುರು ಬಸವಣ್ಣನವರ ಧ್ವಜ ಹಾರಿಸಿ ಇಡಿ ವೀಕ್ಷಕರ ಗಮನ ಸೆಳೆದರು
ಜೈನ ಸಮುದಾಯಕ್ಕೆ ಸೇರಿದ ಈ ವಿಶ್ವ ವಿದ್ಯಾಲಯದಲ್ಲಿ ಬಸವಣ್ಣನವರ ಧ್ವಜ ಹಾರಾಟ ಮಾಡಿದ್ದು ಸಾಮಾಜಿಕ ಜಾಲತಾಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು ಕೇವಲ ೪ದಿನಗಳಲ್ಲಿ ೧೩ ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದು ೧ಲಕ್ಷ ಜನ ಲೈಕ್ ಮಾಡಿದ್ದು ಸಾವಿರಾರು ಜನ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ
ಬಸವಣ್ಣ ನವರ ನಾಡಿನಿಂದ ಜೈನ ವಿಶ್ವ ವಿದ್ಯಾಲಯದಲ್ಲಿ ಪದವಿ ಮುಗಿಸಿ ಬಸವಣ್ಣ ನವರ ಧ್ವಜ ಹಾರಿಸಿ ಬಸವಣ್ಣ ನವರ ಭಕ್ತಿಗೆ ಪಾತ್ರರಾಗಿ ಇಂದಿನ ನವ ಪೀಳಿಗೆಗೆ ಮಾದರಿ ಯಾಗಿ ಬಸವಣ್ಣ ನವರ ಬಗ್ಗೆ ಜಾಗ್ರತಿ ಯನ್ನು ಮೂಡಿಸಿದ್ದಾರೆ