ಕಲಾ ಕೃತಿಯಿಂದ ಬಸವ ತತ್ವ ಸರಳವಾಗಿ ಅರ್ಥೈಸಿಕೊಳ್ಳಲು ಸಾಧ್ಯ: ಈಶ್ವರ ಖಂಡ್ರೆ

ಬೀದರ: ಜು.೭:ಬಸವಣ್ಣನವರ ಜನ್ಮದಿಂದ ಹಿಡಿದು ಲಿಂಗೈಕ್ಯದವರೆಗೆ ಮಾಹಿತಿಯನ್ನು ತನ್ನ ಕುಂಚದಲ್ಲಿ ಸೆರೆಹಿಡಿದು ಇಂದು ಆರ್ಟ್ ಗ್ಯಾಲರಿ ತನ್ನ ಸ್ವಂತ ಖರ್ಚಿನಿಂದ ಲೋಕಾರ್ಪಣೆ ಮಾಡುತ್ತಿರುವ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ನುಡಿದರು.
ಬಸವ ನಗರದ ಸಿ.ಬಿ ಸೋಮಶೆಟ್ಟಿ ಕಲಾ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಚನ ಸಮೂಹ ಸಂಸ್ಥೆ ಆಯೋಜಿಸಿರುವ ಸಿ.ಬಿ ಸೋಮಶೆಟ್ಟಿ ಆರ್ಟ್ ಗ್ಯಾಲರಿ ಹಾಗೂ ಶ್ರೀಗುರುಬಸವ ಚಿತ್ರಚರಿತ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನ ಸಮಾರಂಭವನ್ನು ಇಂದು ಆಯೋಜಿಸಲಾಗಿತ್ತು.
ಸಿ.ಬಿ ಸೋಮಶೆಟ್ಟಿ ಕಲಾ ಪ್ರತಿಷ್ಠಾನ, ಉದ್ಘಾಟನೆ ಗೊಳಿಸಿದ ಅರಣ್ಯ ಮತ್ತು ಪರಿಸರ ಜೀವ ಶಾಸ್ತç ಸಚಿವರಾದ ಈಶ್ವರ ಖಂಡ್ರೆ ಮಾತನಾಡುತ್ತ ಸೋಮಶೆಟ್ಟಿ ಸರ್ ಅವರ ಬಸವ ಚರಿತ ಕಲಾ ಕೃತಿ ನೋಡಿ ಮನಸ್ಸಿಗೆ ಮುದ ನೀಡಿದೆ. ೭೮ ಇಳಿ ವಯಸ್ಸಿನಲ್ಲಿ ತಮ್ಮ ಆರ್ಥಿಕ ಸಂಕಷ್ಟಗಳನ್ನು ಬದಿಗೊತ್ತಿ ಸಮಾಜಕ್ಕೆ ಕೊಡುಗೈ ದಾನಿಗಳಾಗಿ ಪರಿಶ್ರಮ ಮಾಡಿರುವದು ಶ್ಲಾಘನಿಯ ಕಾರ್ಯ. ಇವರಿಗೆ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಮಾನ್ಯ ಮುಖ್ಯ ಮಂತ್ರಿಗಳಿಗೆ ಶಿಫಾರಸ್ಸು ಮಾಡುತ್ತೇನೆ ಎಂದು ನುಡಿದರು. ಇಂದಿನ ಮಕ್ಕಳು ಓದುವುದು ಅರ್ಥೈಹಿಸಿ ಕೊಳ್ಳುವುದು ಕಷ್ಟವಾಗುವ ಸಂಧರ್ಭದಲ್ಲಿ ಕಲಾ ಕೃತಿ ಗಮನಿಸಿ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಇದು ಅತ್ಯಂತ ಪುರಕವಾದ ಮಾಹಿತಿವಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿಷ್ಕಲ ಮಂಟಪ ಬೈಲೂರಿನ ಪೂಜ್ಯ ಶ್ರೀ ನಿಜಗುಣಾನಂದ ಪ್ರಭು ತೋಂಟದಾರ್ಯ ಮಹಾ ಸ್ವಾಮಿಗಳು ಮಾತನಾಡುತ್ತ ಇತಿಹಾಸ ಗುರುತಿಸಲು ಕಲೆ ಮಾಹಿತಿ ಒದಗಿಸುತ್ತದೆ. ಇಂದು ಸೋಮಶೆಟ್ಟಿ ಅನುಭಾವದೆಡೆಗೆ ಹೆಜ್ಜೆ ಇಟ್ಟು ಇತಿಹಾಸ ಸೃಷ್ಟಿಸಿದ್ದಾರೆ. ಘನತರವಾದ ಚಿತ್ರಕ್ಕೆ ಬಸವಣ್ಣ ನವರ ಪ್ರಾಣದ ಕಲ್ಪನೆ ಮೂಡಿಸಿದ್ದಾರೆ. ಬಸವಣ್ಣ ನವರ ಸಮಗ್ರವಾದ ಬದುಕು ಇದರಿಂದ ಅರಿತುಕೊಳ್ಳಲು ಸಾಧ್ಯ. ಅವರ ತನು ಮನ ಭಾವ ಬಸವ ತತ್ವಕ್ಕೆ ಮೀಸಲಾಗಿದೆ. ಅವರ ಸಮಗ್ರ ಚಿತ್ರ ಕಲೆಯನ್ನು ಪ್ರೋತ್ಸಾಹಿಸಲು ಈ ವರ್ಷದ ಲಿಂಗಾನAದ ಪ್ರಶಸ್ತಿ ಜೊತೆಗೆ ೫೧ ಸಾವಿರ ರೂ. ಕೊಟ್ಟು ಗೌರವಿಸಲಾಗುವುದೆಂದು ಹೇಳಿದರು. ಪ್ರತಿ ಯೊಬ್ಬರು ಬಸವಚರಿತ ಗ್ರಂಥ ತೆಗೆದುಕೊಂಡು ಮನೆಯಲ್ಲಿ ಇರಿಸಿ ಅನುಭಾವ ಪಡೆದುಕೊಳ್ಳಲು ಹೇಳಿದರು.
ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಕಾರ್ಯಕ್ರಮದಲ್ಲಿ ಸಸಿಗೆ ನಿರೇರೆದು ಉದ್ಘಾಟಿಸಿ ಸೋಮಶೆಟ್ಟಿ ಸರ್ ನನ್ನ ಪೂಜ್ಯ ಗುರುಗಳು ಬ್ರಶ್ ಹಾಗೂ ಪೇಂಟ್ ಸಂಗಾತಿಯೊAದಿಗೆ ಜೀವನ ಮಾಡಿ ಇಂದು ಇತಿಹಾಸ ಸೃಷ್ಟಿಸಿದ್ದಾರೆ. ಬಸವಣ್ಣ ನವರ ಕಾಯಕ ಸಿದ್ಧಾಂತ ಅಳವಡಿಸಿ ಕೊಂಡು ತಮ್ಮ ಇಡಿ ಜೀವನ ಬಸವಮಯವಾಗಿಸಿ ಕೊಂಡಿದ್ದಾರೆ. ಸರ್ ಅವರ ತನು ಮನ ಒಂದಾಗಿದೆ. ಬೀದರ ಪಾರಂಪರಿಕ ಇತಿಹಾಸದಲ್ಲಿ ಚ.ಬಿ ಸೋಮಶೆಟ್ಟಿ ಚಿತ್ರಾಲಯ ಸೇರ್ಪಡೆ ಮಾಡಲು ಶ್ರಮಿಸುವುದಾಗಿ ಹೇಳಿದರು. ಅವರ ಶಾಂತ ಸ್ವಭಾವ ಬಸವ ನಿಷ್ಟೆ ನಮ್ಮನ್ನು ಸಂಸ್ಕೃತಿಕವಾಗಿ ಬದುಕಲು ಪ್ರೇರಣೆ ನೀಡಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಡಾ. ಶಿವಾನಂದ ಮಹಾಸ್ವಾಮಿಗಳು ಹುಲಸೂರ, ಭಾಲ್ಕಿಯ ಗುರು ಬಸವ ಪಟ್ಟದ್ದೇವರು, ಡಾ. ಗಂಗಾAಬಿಕೆ ಅಕ್ಕ, ಗ್ರಂಥ ಲೇಖಕರಾದ ಗಾಯತ್ರಿ ತಾಯಿ ಗಂಗಾಧರ ದೇವರು ಸಹ ತಮ್ಮ ವಿಚಾರ ಮಂಡಿಸಿದರು.
ಜಾನಪದ ಅಕಾಡೆಮಿ ಬೆಂಗಳೂರಿನ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಕಾಶ ಜಾನಪದ ಗೀತೆ ಹಾಡಿ ಮನರಂಜಿಸಿದರು. ಬುಡಾ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ. ಸಂತೋಷ ಹಾನಗಲ ಚಿತ್ರ ಕಲಾ ಅಧ್ಯಕ್ಷರಾದ ವಿಷ್ಣುಸಿಂಗ್ ಠಾಕೂರ್, ಅರೂಣ ಕುಮಾರ ಹೊತಪೇಟೆ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದರು.
ಕಾರ್ಯಕ್ರಮದಲ್ಲಿ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಡಾ. ಎ.ಎಸ್. ಪಾಟೀಲ ಅಭಿನಂದನ ನುಡಿ ನುಡಿದರು. ಸುರೇಶ ಚನ್ನಶೆಟ್ಟಿ ಸ್ವಾಗತಿಸಿದರೆ, ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರೆ, ಲಿಂಗಾರತಿ ನಾವದಗೇರೆ ವಂದಿಸಿದರು. ವೇದಿಕೆ ಮೇಲೆ ಶಿವಲಿಂಗ ಎರ್‌ಗಲ ಹಾಗೂ ಚನ್ನಬಸಪ್ಪ ನೌಬಾದೆ ಸಂಗೀತ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶರಣಪ್ಪ ಮಿಠಾರೆ, ಬಸವರಾಜ ಧನ್ನೂರ, ಜೈರಾಜ ಖಂಡ್ರೆ, ರೇವಣಪ್ಪ ಮೂಲಗೆ, ಅಲ್ಲಮಪ್ರಭು ನಾವದಗೇರೆ, ಆರತಿ ಲಕ್ಕಶೆಟ್ಟಿ ವಿಶೇಷ ಆಹ್ವಾನಿತರಾಗಿ ಆಗಮಿಸಿದರು.
ವಿಜಯಕುಮಾರ ಸೋನಾರೆ, ವಿನಯ ಮಾಳಗೆ, ಸುನೀಲ ಪಾಟೀಲ ಗಾದಗಿ, ಉಮೇಶ ಅಷ್ಟೂರೆ, ಬಸವರಾಜ ಅನಗವಾಡಿ, ಕಂಟೆಪ್ಪ ಗಂದಿಗುಡಿ, ರತ್ನ ಪ್ರಭಾ ಪಾಟೀಲ, ಜಗನ್ನಾಥ ಕಮಲಾಪುರೆ, ಸಂತೋಷಿ ಹೊತಪೇಟ್, ಸಿದ್ದರಾಜ ಪಾಟೀಲ, ಭದ್ರಪ್ಪ ಮಿರ್‌ಕಲ್, ಓಂಕಾರ ಕುಂಚಗೆ, ಶಿವಕುಮಾರ ಸಾಲಿ, ರೇವಣಸಿದ್ದಪ್ಪ ಜಲಾದೆ, ಪ್ರತಿಭಾ ಜಿರ್ಗೆ, ರೇಖಾ ನಿಂಗದಳಿ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸೋಮಶೆಟ್ಟಿ ದಂಪತಿಗಳಿಗೆ ಜಿಲ್ಲೆಯ ಎಲ್ಲಾ ಪೂಜ್ಯರು, ಸಚಿವರು, ಶಾಸಕರು ಹತ್ತಾರು ಸಂಘ ಸಂಸ್ಥೆಗಳ ಪ್ರತಿ ನಿಧಿಗಳು ಸನ್ಮಾನಿಸಿದರು.