Home ಜಿಲ್ಲೆ ಬೆಂಗಳೂರು ಬಹು ಜನ ಸಮಾಜ ಪಕ್ಷ ಈ ದೇಶಕ್ಕೆ ಅನಿವಾರ್ಯವಾಗಿದೆ

ಬಹು ಜನ ಸಮಾಜ ಪಕ್ಷ ಈ ದೇಶಕ್ಕೆ ಅನಿವಾರ್ಯವಾಗಿದೆ

ಆನೇಕಲ್. ಮಾ. ೦೮- ಬಹು ಜನ ಸಮಾಜ ಪಕ್ಷ ಈ ದೇಶಕ್ಕೆ ಅನಿವಾರ್ಯವಾಗಿದೆ ಎಂದು ಬಿಎಸ್ಪಿ ಪಕ್ಷದ ರಾಜ್ಯ ಸಂಯೋಜಕರಾದ ಕೆ.ಸಿ.ನಾಗರಾಜ್ ಹೇಳಿದರು.
ಅವರು ಆನೇಕಲ್ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆಗಳ ಸಂಧರ್ಭದಲ್ಲಿ ದೇಶದ ಜನರಿಗೆ ಸುಳ್ಳು ಹೇಳಿ.

ಆಮಿಷಗಳನ್ನು ಒಡ್ಡಿ ಮತ ಪಡೆದು ಅದಿಕಾರ ನಡೆಸುತ್ತಿರುವ ಕಾಂಗ್ರೆಸ್. ಬಿಜೆಪಿ ಪಕ್ಷಗಳಿಂದ ಈ ದೇಶಕ್ಕೆ ತಮ್ಮ ಕೊಡುಗೆ ಏನು. ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಸಹ ಇಂದಿಗೂ ಸಹ ದೇಶದಲ್ಲಿ ಬಡತನ. ಜಾತೀವ್ಯವಸ್ಥೆ. ನಿರುದ್ಯೋಗ ಸಮಸ್ಯೆ. ದಬ್ಬಾಳಿಕೆ. ದೌರ್ಜನ್ಯಗಳು ಬಡ ವರ್ಗದ ಮತ್ತು ಶೋಷಿತ ಜನರ ಮೇಲೆ ಇಂದಿಗೂ ನಿರಂತರವಾಗಿ ನಡೆಯುತ್ತಿವೆ ಇದೇನಾ ತಮ್ಮ ಕೊಡುಗೆ ಎಂದರು. ಈ ದೇಶದ ಎಲ್ಲಾ ವರ್ಗದವರಿಗೂ ಸಾಮಾಜಿಕವಾಗಿ ನ್ಯಾಯ ಸಿಗಬೇಕಾದರೆ ಬಿಎಸ್ಪಿ ಪಕ್ಷ ಅದಿಕಾರಕ್ಕೆ ಬಂದರೆ ಮಾತ್ರ ಸಾಧ್ಯ ಎಂದರು.


ಬಹುಜನ ನಾಯಕರಾದ ಮಾನ್ಯ ಕಾನ್ಶಿರಾಮ್ ರವರ ಜಯಂತಿಯನ್ನು ಮಾರ್ಚ್ ೧೫ ರಂದು ದೇವನಹಳ್ಳಿಯಲ್ಲಿ ಹಾಗೂ ಮಾರ್ಚ್ ೨೯ ರಂದು ಆನೇಕಲ್‌ನ ಕಾವಲಹೊಸಹಳ್ಳಿ ಅಂಬೇಡ್ಕರ್ ಭವನದ ಆವರಣದಲ್ಲಿ ಆಚರಿಸಲಾಗುತ್ತಿದ್ದು. ಆ ದಿನ ಕೇವಲ ಜಯಂತಿ ಕಾರ್ಯಕ್ರಮ ಮಾತ್ರವಲ್ಲ, ಬಹುಜನ ಸಮಾಜವನ್ನು ಸಂಘಟಿಸುವ ಮತ್ತು ರಾಜಕೀಯ ಶಕ್ತಿಯನ್ನು ಬಲಪಡಿಸುವ ಸಂಕಲ್ಪದ ದಿನವೂ ಆಗಿದೆ ಎಂದರು. ಕಾನ್ಶಿರಾಮ್ ರವರು ಹೇಳಿದಂತೆ “ರಾಜಕೀಯ ಶಕ್ತಿ ಇಲ್ಲದೆ ಸಮಾಜಕ್ಕೆ ನ್ಯಾಯ ಸಿಗುವುದಿಲ್ಲ ಎಂಬ ತತ್ವದ ಮೇಲೆ ಬಹು ಜನ ಸಮಾಜ ಪಾರ್ಟಿ ನಡೆಯುತ್ತಿದೆ. ಅದಕ್ಕಾಗಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷವು ರಾಜ್ಯದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ ಎಂದರು. ಕಾನ್ಶಿರಾಮ್ ರವರ ಆದರ್ಶಗಳಂತೆ ಎಸ್ಸಿ, ಎಸ್ಟಿ, ಓಬಿಸಿ, ಅಲ್ಪಸಂಖ್ಯಾತರು ಮತ್ತು ಎಲ್ಲಾ ಶೋಷಿತ ಸಮುದಾಯಗಳನ್ನು ಒಗ್ಗೂಡಿಸಿ ನಿಜವಾದ ಜನಪರ ಆಡಳಿತವನ್ನು ಸ್ಥಾಪಿಸುವುದು ನಮ್ಮ ಗುರಿಯಾಗಿದೆ ಎಂದರು.


ಆನೇಕಲ್ ತಾಲೂಕಿನಲ್ಲಿ ಭ್ರಷ್ಟಾಚಾರವು ಅತಿಯಾದ ಮಟ್ಟಕ್ಕೆ ತಲುಪಿದೆ. ತಾಲೂಕಿನ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಂತಾಗಿದೆ. ಈ ಕಾರಣದಿಂದ ಬಹುಜನ ಸಮಾಜ ಪಾರ್ಟಿ ಜನರ ಧ್ವನಿಯಾಗಿ ಈ ಭ್ರಷ್ಟಾಚಾರ ವಿರುದ್ಧ ಹೋರಾಡಲಿದ್ದು ಮುಂಬರುವ ಚುನಾವಣೆಯಲ್ಲಿ ಜನರು ಪರ್ಯಾಯ ರಾಜಕೀಯ ಶಕ್ತಿಯಾಗಿ ಬಿಎಸ್ಪಿಯನ್ನು ಬೆಂಬಲಿಸುವಂತೆ ಕೆಸಿ ನಾಗರಾಜ್ ರವರು ಮನವಿ ಮಾಡಿದರು.


ಪತ್ರಿಕಾ ಗೋಷ್ಠಿಯಲ್ಲಿ ಬಿಎಸ್ಪಿ ಪಕ್ಷದ ಸಿಕೆ ರಾಮು. ಹೆಚ್ ಸಿ ಶ್ರೀನಿವಾಸ್, ರಾಜು, ವಿನ್ಸೆಂಟ್, ನಾರಾಯಣಸ್ವಾಮಿ. ಚಂದಾಪುರ ಮುನಿರಾಜು, ಶೇಕ್ ಬಾಬು, ಚೆಂಬೇನೆಹಳ್ಳಿ ಯಲ್ಲಪ್ಪ, ಚಿಕ್ಕಹಾಗಡೆ ಯಲ್ಲಪ್ಪ, ಗಣೇಶ್, ಗೊಟ್ಟಿಗೆರೆ ನಾಗರಾಜು , ಮಹೇಶ್, ಕೃಷ್ಣಪ್ಪ, ವೆಂಕಟಸ್ವಾಮಿ, ವೆಂಕಟೇಶ್, ಒಣಕನಹಳ್ಳಿ ಯಲ್ಲಪ್ಪ, ಶಬೀರ್ ಖಾನ್, ಮಲವೀರಯ್ಯ ಹಾಜರಿದ್ದರು.