Home ಜಿಲ್ಲೆ ಶಿವಮೊಗ್ಗ ಆನೆ ಮರಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಹೆಸರು

ಆನೆ ಮರಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಹೆಸರು

ಶಿವಮೊಗ್ಗ,ಮಾ.23- ಬನ್ನೇರುಘಟ್ಟದಲ್ಲಿ ಜನಿಸಿದ ಆನೆಮರಿಗೆ ಇಲ್ಲಿನ ಮೃಗಾಲಯದಲ್ಲಿ ನಿರಾನೆ ದಾಳಿಯಿಂದ ಮೃತಪಟ್ಟ ತರಬೇತಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಹೆಸರಿಡಲಾಗುವುದು ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯಾ ರಂಗಸ್ವಾಮಿ ಹೇಳಿದ್ದಾರೆ.


ಶಿವಮೊಗ್ಗ ಮೃಗಾಲಯಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದಾರೆ. ಇದಲ್ಲದೆ, ಡಾ. ಸಮೀಕ್ಷಾ ರೆಡ್ಡಿ ಅವರಿಗೆ ಹುತಾತ್ಮ ಸ್ಥಾನಮಾನ ನೀಡುವ ವಿಷಯದ ಬಗ್ಗೆಯೂ ಸರ್ಕಾರ ಚರ್ಚಿಸಲಿದೆ. ಡಾ. ಸಮೀಕ್ಷಾ ರೆಡ್ಡಿ ಅವರ ಸಾವು ದೊಡ್ಡ ಆಘಾತವನ್ನುಂಟು ಮಾಡಿದೆ. ಇಂತಹ ಘಟನೆ ಸಂಭವಿಸಬಾರದಿತ್ತು, ಆದರೆ ಅದು ಸಂಭವಿಸಿದೆ. ಪೊಲೀಸರು ಮತ್ತು ಅರಣ್ಯ ಇಲಾಖೆ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ವರದಿ ಬಂದ ನಂತರ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.


ಈ ನಿರಾನೆ ಎರಡು ಬಾರಿ ತನ್ನ ಮರಿಯನ್ನು ಕಳೆದುಕೊಂಡಿದೆ. ಈ ಬಾರಿಯೂ ಸಹ, ಮರಿಯನ್ನು ಉಳಿಸಲು ವಿಶೇಷ ಕಾಳಜಿ ವಹಿಸಿ ಸಮೀಕ್ಷಾ ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.