
ಸಂಜೆವಾಣಿ ವಾರ್ತೆ
ಕೆಂಬಾವಿ:ಏ.೧೬:ಸಮಾಜದಲ್ಲಿ ಸ್ವಾತಂತ್ರö್ಯ, ಸಮಾನತೆ ಮತ್ತು ಸೋದರತ್ವ ತತ್ವಗಳ ಆಧಾರದ ಮೇಲೆ ಶೋಷಿತ ಸಮುದಾಯಗಳ ಪರವಾಗಿ ಸತತವಾಗಿ ಹೋರಾಡಿದವರು ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರು ಎಂದು ಸರಕಾರಿ ಪದವಿ ಪೂರ್ವ ಕಾಲೇಜ್ ಪ್ರಾಶುಂಪಾಲ ಅಶೋಕ ತಳಕೇರಿ ಹೇಳಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದ ಹತ್ತಿರ ಮಹಾನಾಯಕ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ ನೆ ಜಯಂತೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ಜನರನ್ನೇ ಕೇಂದ್ರಬಿAದುವಾಗಿಸಿಕೊAಡು ಅವರ ಆಲೋಚನ ಕ್ರಮವನ್ನು ಅನುಸರಣೆ ಮಾಡಿಕೊಂಡು ಹೋರಾಟದ ಹೆಜ್ಜೆಯಿಟ್ಟಿದ್ದರು. ಎಲ್ಲಾ ಧರ್ಮ, ಜಾತಿ-ಜನಾಂಗದವರಿಗೆ ಸಮಾನವಾಗಿ ಉದ್ಯೋಗ, ಹಕ್ಕುಗಳು ಸೇರಿದಂತೆ ಮೀಸಲಾತಿ ಸೌಲಭ್ಯಗಳನ್ನು ಸಂವಿಧಾನದಲ್ಲಿ ನೀಡಿದ್ದಾರೆ. ಇದು ಕೇವಲ ಒಂದು ಧರ್ಮಕ್ಕೆ, ಒಂದು ಜಾತಿಗೆ ಅಥವಾ ಒಂದು ವ್ಯಕ್ತಿಗೆ ಸೀಮಿತವಾದ ಸಂವಿಧಾನವಲ್ಲ. ಕಟ್ಟಕಡೆಯ ವ್ಯಕ್ತಿಗೆ ಸ್ವಾತಂತ್ರವನ್ನು ಕೊಟ್ಟಂತಹ ನಮ್ಮ ಭಾರತ ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು ಜೈ ಭೀಮ್ ನಗರದಿಂದ ಮಹಾನಾಯಕ ವೃತ್ತದವರೆಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮರಾಯ ಮಾಳಳ್ಳಿಕರ್ ವಹಿಸಿದ್ದರು. ಮುಖಂಡರಾದ ಆದಿತ್ಯಗೌಡ ಪೊಲೀಸಪಾಟೀಲ, ರವಿಶಂಕರ್ ಸೊನ್ನದ, ಭೀಮನಗೌಡ ಮಲ್ಕಾಪುರ, ಬಸನಗೌಡ, ಶಿವಾನಂದ ನಾಡಕಛೇರಿ, ಯೋಗಪ್ಪ ಮಾಳಳ್ಳಿಕರ್, ಮಡಿವಾಳಪ್ಪ ಬಳಬಟ್ಟಿ, ಜೆಟ್ಟೆಪ್ಪ ಬಸರಿಗಿಡ, ಭೀಮರಾಯ ಯಮನೂರ, ಧರ್ಮಣ್ಣ ಬಡಿಗೇರ, ಅಯ್ಯಣ್ಣ ಮಾಳಳ್ಳಿಕರ್, ಶಂಕರ್ ಕಟ್ಟಿಮನಿ, ಜುಮ್ಮಾಣ್ಣ ಕಟ್ಟಿಮನಿ, ಲಕ್ಷö್ಮಣ ಬಾವಿಮನಿ, ಪರಶುರಾಮ ಮಾಳಳ್ಳಿಕರ್, ರಾಯಪ್ಪ ಬಡಿಗೇರ, ಸುರೇಶ ಮಾಳಳ್ಳಿಕರ್, ಭೀಮಾಶಂಕರ ಸೋಮನಾಳಕರ ಸೇರಿದಂತೆ ಮಹಿಳೆಯರಿದ್ದರು.
ಶಿಕ್ಷಕಿ ನೀಲಮ್ಮ ಮಲ್ಲೆ ನಿರೂಪಿಸಿದರು. ಬಸವಣ್ಣೆಪ್ಪ ಮಾಳಳ್ಳಿಕರ ಸ್ವಾಗತಿಸಿದರು. ಮಲ್ಲಿಕಾರ್ಜುನ ಕಟ್ಟಿಮನಿ ವಂದಿಸಿದರು.






















