Home ಜಿಲ್ಲೆ ಬೆಂಗಳೂರು ಪಟಾಕಿ ಮಾರಾಟಕ್ಕೆ ಗ್ರಾಹಕರಿಗೆ ಆಕರ್ಷಕ ಕೊಡುಗೆ

ಪಟಾಕಿ ಮಾರಾಟಕ್ಕೆ ಗ್ರಾಹಕರಿಗೆ ಆಕರ್ಷಕ ಕೊಡುಗೆ

oplus_0

ಕೆಜಿಎಫ್, ನ. ೮- ದೀಪಾವಳಿ ಹಬ್ಬದ ಸಂಭ್ರಮಕ್ಕೆ ನಗರದ ಜನತೆಗೆ ವಿಶೇಷ ಕೊಡುಗೆಯಾಗಿ ಶೇ. ೮೦ರಷ್ಟು ರಿಯಾಯಿತಿ ದರದಲ್ಲಿ ವಿವಿಧ ಕಂಪನಿಗಳ ಬ್ರಾಂಡೆಡ್ ಪಟಾಕಿಗಳ ಬಾಕ್ಸ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇಂದು ನಗರದ ಮುನ್ಸಿಪಲ್ ಮೈದಾನದ ಆವರಣದಲ್ಲಿ ಪಟಾಕಿ ಮಾರಾಟಕ್ಕೆ ಚಾಲನೆ ನೀಡಲಾಗಿದ್ದು, ಗ್ರಾಹಕರು ತಮ್ಮ ಇಷ್ಟವಾದ ಬ್ರಾಂಡ್‌ಗಳ ಪಟಾಕಿಗಳನ್ನು ಆಯ್ಕೆ ಮಾಡಿಕೊಂಡು ಖರೀದಿಸಬಹುದು ಎಂದು ಪಟಾಕಿ ಅಂಗಡಿ ಮಾಲೀಕರಾದ ಮುರಳಿ ಮತ್ತು ಪಾಟ್ಸ್ ಸುರೇಶ್ ತಿಳಿಸಿದ್ದಾರೆ.


ನಗರದಲ್ಲಿ ಪಟಾಕಿ ಖರೀದಿಸಲು ಸಿದ್ಧತೆ ನಡೆಸುತ್ತಿರುವ ಗ್ರಾಹಕರಿಗೆ ಅನುಕೂಲವಾಗುವಂತೆ ವಿವಿಧ ಬಗೆಯ ಪಟಾಕಿಗಳನ್ನು ಒಂದೇ ಸ್ಥಳದಲ್ಲಿ ಲಭ್ಯವಾಗುವ ವ್ಯವಸ್ಥೆ ಮಾಡಲಾಗಿದೆ. ಕೇವಲ ೩೦೦ ರೂಪಾಯಿಯಿಂದ ಪಟಾಕಿ ಬಾಕ್ಸ್‌ಗಳ ಮಾರಾಟ ಆರಂಭವಾಗಿದ್ದು, ಗ್ರಾಹಕರ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ವಿವಿಧ ಬೆಲೆಯ ಪಟಾಕಿ ಪ್ಯಾಕೆಟ್‌ಗಳು ಹಾಗೂ ಬಾಕ್ಸ್‌ಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.


ಗ್ರಾಹಕರ ವಿಶ್ವಾಸವೇ ನಮ್ಮ ವ್ಯಾಪಾರದ ಬಂಡವಾಳ. ಇತ್ತೀಚಿನ ದಿನಗಳಲ್ಲಿ ಪಟಾಕಿ ಖರೀದಿಸುವ ಸಂದರ್ಭದಲ್ಲಿ ಗ್ರಾಹಕರು ಮೋಸ ಹೋಗುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ತಮಿಳುನಾಡಿನ ಹೋಸರ ನಗರದಲ್ಲಿ ಪಟಾಕಿ ಖರೀದಿಸಲು ತೆರಳುವ ಗ್ರಾಹಕರಿಗೆ ಕೆಲವು ವೇಳೆ ನಿರೀಕ್ಷಿತ ಗುಣಮಟ್ಟ ಹಾಗೂ ಬೆಲೆಯಲ್ಲಿ ವ್ಯತ್ಯಾಸ ಸಂಭವಿಸುವ ಸಾಧ್ಯತೆಗಳ ಬಗ್ಗೆ ದೂರಗಳು ಕೇಳಿಬರುತ್ತಿವೆ. ಆದರೆ ನಮ್ಮಲ್ಲಿ ಅಂತಹ ಯಾವುದೇ ರೀತಿಯ ಮೋಸ ಅಥವಾ ವಂಚನೆಗೆ ಅವಕಾಶವಿಲ್ಲ. ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬರದಂತೆ ವ್ಯಾಪಾರ ನಡೆಸುತ್ತೇವೆ ಎಂದು ಮುರಳಿ ಹಾಗೂ ಪಾಟ್ಸ್ ಸುರೇಶ್ ಸ್ಪಷ್ಟಪಡಿಸಿದ್ದಾರೆ.


ಗ್ರಾಹಕರು ತಮ್ಮಗೆ ಬೇಕಾದ ಕಂಪನಿಯಾ ಹಾಗೂ ಬ್ರಾಂಡ್‌ನ ಪಟಾಕಿಗಳನ್ನು ಪರಿಶೀಲಿಸಿ, ಆಯ್ಕೆ ಮಾಡಿಕೊಂಡು ಖರೀದಿಸಬಹುದು. ಕಡಿಮೆ ಬೆಲೆಗೆ ಗುಣಮಟ್ಟದ ಪಟಾಕಿಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಹಬ್ಬದ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಬಂದು ಖರೀದಿ ಮಾಡುವಂತೆ ಅವರು ಸಾರ್ವಜನಿಕರಿಗೆ ಆಹ್ವಾನ ನೀಡಿದ್ದಾರೆ. ಮುನ್ಸಿಪಲ್ ಮೈದಾನದಲ್ಲಿ ಖರೀದಿಗೆ ಅವಕಾಶ ಇಂದಿನಿಂದ ಮುನ್ಸಿಪಲ್ ಮೈದಾನದ ಆವರಣದಲ್ಲಿ ಪಟಾಕಿ ಮಾರಾಟ ಆರಂಭವಾಗಿದ್ದು, ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು. ಶೇ. ೮೦ರಷ್ಟು ರಿಯಾಯಿತಿ ಹಾಗೂ ೩೦೦ ರೂಪಾಯಿಯಿಂದ ಆರಂಭವಾಗುವ ವಿವಿಧ ಪಟಾಕಿ ಬಾಕ್ಸ್‌ಗಳ ಮಾರಾಟ ಗ್ರಾಹಕರ ಗಮನ ಸೆಳೆಯುವ ನಿರೀಕ್ಷೆಯಿದೆ.