Home ಜಿಲ್ಲೆ ಬೆಂಗಳೂರು ಅಪಘಾತಗಳಲ್ಲಿ ಪ್ರಾಣಿಗಳ ಸಾವು:ತನಿಖೆಗೆ ಆಗ್ರಹ

ಅಪಘಾತಗಳಲ್ಲಿ ಪ್ರಾಣಿಗಳ ಸಾವು:ತನಿಖೆಗೆ ಆಗ್ರಹ

ಕೋಲಾರ.ಮೇ, ೧೧- ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಮನುಷ್ಯರಂತೆ ಪ್ರಾಣಿಗಳು ಸಹ ಬಲಿಯಾಗುತ್ತಿರುವುದು ಸಹಜವಾದರೂ ಇವುಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸ ಬೇಕು. ಅಪಘಾತಕ್ಕೆ ಕಾರಣವಾದ ವಾಹನಗಳ ವಿರುದ್ಧ ಕ್ರಮ ಜರುಗಿಸ ಬೇಕೆಂದು ಪ್ರಾಣಿ ದಯಾ ಸಂಘದ ಮನವಿಯಾಗಿದೆ.


ಪ್ರಾಣಿ ದಯ ಸಂಘವು ಪತ್ರಿಕಾ ಹೇಳಿಕೆ ನೀಡಿ ರಸ್ತೆ ಅಪಘಾತಗಳಲ್ಲಿ ಪ್ರಾಣಿಗಳ ಸಾವಿನಲ್ಲಿ ಬಹುತೇಕ ಶ್ವಾನಗಳೇ ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತದೆ. ಸಾಮಾನ್ಯವಾಗಿ ನಗರ ಮತ್ತು ಪಟ್ಟಣದ ಒಳಗೆ ಸಾವಿನಂತಹ ಅಪಘಾಡಗಳು ಸಂಭವಿಸದಿದ್ದರೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.


ಅದರೆ ಅಪಘಾತ ಮಾಡಿದ ವಾಹನಗಳ ವಿರುದ್ದ ದೂರುಗಳು ದಾಖಲಾಗುವುದಿಲ್ಲ. ಬಹುತೇಕ ವಾಹನಗಳು ಶ್ವಾನಗಳಿಗೆ, ಶ್ವಾನಗಳ ಮರಿಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತವೆ. ಸಾರ್ವಜನಿಕರು ಸಹ ಈ ಅಪಘಾತವನ್ನು ಕಂಡು ಕನಿಕರ ವ್ಯಕ್ತ ಪಡೆಸುತ್ತಾರೆ ಹೊರತು ಶ್ವಾನಗಳ ಸಾವುಗಳನ್ನು ಗಂಭೀರವಾಗಿ ಪರಿಗಣಿಸಿ ವಾಹನದ ವಿರುದ್ದ ಕ್ರಮ ಜರುಗಿಸಲು ಒತ್ತಾಯಿಸುವುದಿಲ್ಲ. ಸಾಕು ಶ್ವಾನಗಳಿಗೆ ಈ ಅಪಘಾತವಾದರೆ ಮಾತ್ರ ಅವುಗಳ ಮಾಲೀಕರು ದೂರು ನೀಡುತ್ತಾರೆ ಅದರೆ ಬೀದಿ ಬದಿಯ ನಾಯಿಗಳಿಗೆ ದೂರು ನೀಡುವವರು ಯಾರೂ. ಅರೈಕೆ ಮಾಡುವವರು ಯಾರೂ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ನಾಯಿಗಳ ಮೇಲೆ ವಾಹನ ಹತ್ತಿಸುವ ಮೂಲಕ ಕೆಲವು ಅನಾಗರೀಕರು ವಿಕೃತಿ ಮೆರೆಯುವರು ಇದರಿಂದ ಗಾಯಗೊಂಡ ನಾಯಿಗಳು ವಾಹನಗಳನ್ನು ಕಂಡರೆ ಅಟ್ಟಾಡಿಸುವುದು, ಬೊಗಳುವುದು ,ಕಚ್ಚಲು ಮುಂದಾಗುತ್ತವೆ, ಅದರೆ ಯಾರೂ ಮಾಡಿದ್ದು ಇನ್ಯಾರೂ ಅನುಭವಿಸ ಬೇಕಾಗುವುದು.


ನಗರಸಭೆ ಮತ್ತು ಪುರಸಭೆಗಳಿಗೆ ನಾಯಿಗಳ ಅರೈಕೆ ಬಗ್ಗೆ ದೊಡ್ಡ ಜವಾಬ್ದಾರಿಯೇ ಇದ್ದರೂ ಸಹ ಅವುಗಳನ್ನು ಪಾಲನೆ ಮಾಡುವುದಿಲ್ಲ. ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತ ಗೊಳಿಸಿದೆ ನಾಯಿಗಳ ಸಂತನಹರಣಕ್ಕೆ, ನಾಯಿಗಳಿಗೆ ಆಹಾರ ಪೂರೈಕೆಗೆ, ನಾಯಿಗಳ ವ್ಯಾಕ್ಸಿನ್ ಸೇರಿದಂತೆ ಹಲವಾರು ಯೋಜನೆಗಳು ಸರ್ಕಾರ ಮಾಡಿದೆಯಾದರೂ ಅವುಗಳನ್ನು ಬಿಡದಂತೆ ಸಂಬಂಧ ಪಟ್ಟ ಇಲಾಖೆಗಳು ಭ್ರಷ್ಟಚಾರದಲ್ಲಿ ತೊಡಗಿಸಿ ಕೊಂಡು ಲಕ್ಷಾಂತರ ರೂಪಾಯಿ ಗುಳಂ ಮಾಡುತ್ತೀವೆ. ಅದರೆ ಈ ಕುರಿತು ಪ್ರಶ್ನಿಸುವವರೇ ಇಲ್ಲದಂತಾಗಿದೆ.


ನಾಯಿಗಳಿಗೆ ಸಂಬಂಧಿಸಿದಂತೆ ಹತ್ಯೆ ಮಾಡಿದರೆ , ಹಲ್ಲೆ ಮಾಡಿದರೆ, ಡಿಕ್ಕಿ ಹೊಡೆದು ಸಾವನ್ನಾಪ್ಪಿದರೆ, ಇವುಗಳ ವಿರುದ್ದ ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸ ಬಹುದಾಗಿದೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿ ಕೊಂಡು ಕಾನೂನು ಕ್ರಮ ಜರುಗಿಸ ಬೇಕಾಗಿದೆ. ಹತ್ಯೆ ಮಾಡಿರುವ ಆರೋಪಗಳಲ್ಲಿ ನಾಯಿಗಳಿಗೂ ಮರಣೋತ್ತರ ಪರೀಕ್ಷೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸ ಬೇಕೆಂಬ ಕಾನೂನು ಇದೆ ಅದರೆ ಅನುಷ್ಟನಕ್ಕೆ ಮಾತ್ರ ಬರುತ್ತಿಲ್ಲ.


ಶ್ವಾನಗಳು ಕಾಣೆಯಾದರೂ ಸಹ ದೂರು ದಾಖಲಿಸಿ ಕೊಂಡು ತನಿಖೆ ನಡೆಸುವ ಜವಾಬ್ದಾರಿಯು ಪೊಲೀಸರ ಮೇಲೆ ಇದೆ ಈ ಬಗ್ಗೆ ಪ್ರಕರಣಗಳು ದೊಡ್ಡ ನಗರಗಳಲ್ಲಿ ಹೊರತು ಪಡೆಸಿದರೆ ಸಣ್ಣ ಪುಟ್ಟ ನಗರಗಳಲ್ಲಿ ನಾಯಿಗಳ ಕಾನೂನುಗಳ ಬಗ್ಗೆ ಬಹುತೇಕ ಪೊಲೀಸರಿಗೇನೆ ಅರಿವು ಇರುವುದಿಲ್ಲ.


ಜಿಲ್ಲೆಯಲ್ಲಿ ಕೆಲವು ರಸ್ತೆಗಳು ಅರಣ್ಯದ ನಡುವೆ ಇರುವುದರಿಂದ ಜಿಂಕೆಗಳು. ಮೂಲಗಳು, ಕಾಡು ಹಂದಿಗಳು, ನವೀಲುಗಳು, ಸೇರಿದಂತೆ ಕೆಲವು ಪ್ರಾಣಿಗಳು ಅಗಾಗ್ಗೆ ವಾಹನಗಳಿಗೆ ಸಿಲುಕಿ ಬಲಿಯಾಗುವುದು ಮಾದ್ಯಮಗಳಲ್ಲಿ ವರದಿಯಾಗಿರುವುದನ್ನು ನೆನಪಿಸಿ ಕೊಳ್ಳ ಬಹುದು, ಇವುಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿ ಕೊಂಡು ಕಾನೂನು ಕ್ರಮ ಕೈಗೊಳ್ಳುವರು ಅದರೆ ಶ್ವಾನಗಳ ಬಗ್ಗೆ ಪೊಲೀಸ್ ಇಲಾಖೆಯು ಗಂಭೀರವಗಿ ಪರಿಗಣಿಸುತ್ತಿಲ್ಲ ಎಂಬುವುದು ಪ್ರಾಣಿದಯಾ ಸಂಘದ ಆರೋಪವಾಗಿದೆ


ಅದರೆ ಪೊಲೀಸ್ ಇಲಾಖೆಯಲ್ಲೂ ಪತ್ತೆ ಕಾರ್ಯಕ್ಕೆ ಅನುವುಂಟಾಗುವಂತೆ ನಾಯಿಗಳನ್ನು ಸಾಕಿ ಕೊಂಡು ಅವುಗಳಿಗೆ ತರಭೇತಿ ನೀಡಿ ಅವುಗಳ ವೇತನವನ್ನು ಮಾಲೀಕನಿಗೆ ನೀಡಲಾಗುತ್ತದೆ. ಆವುಗಳ ಆಹಾರ, ಆರೋಗ್ಯ, ಇತರೆಗಳನ್ನು ಪೊಲೀಸ್ ಇಲಾಖೆಯೇ ವಹಿಸಿ ಕೊಂಡು, ಇಲಾಖೆಯಲ್ಲಿ ಅವುಗಳಿಗೂ ಉನ್ನತ ಸ್ಥಾನ ಮಾನಗಳಿವೆ ಎಂಬುವುದರ ಬಗ್ಗೆ ಹಲವು ಚಲನ ಚಿತ್ರಗಳಲ್ಲಿ ನಾಯಿಗಳ ವಿಶ್ವಾಸ, ಪ್ರೀತಿ, ಪ್ರಮಾಣಿಕತೆ,ನಿಷ್ಟೆಗಳನ್ನು ಪ್ರದರ್ಶಿಸಿರುವುದನ್ನು ನೆನಪಿಸಿ ಕೊಳ್ಳ ಬಹುದಾಗಿದೆ ಎಂದು ಪ್ರಾಣಿ ದಯಾ ಸಂಘವು ತಿಳಿಸಿದೆ