ಅಮೆರಿಕನ್ ಪಾರ್ಟಿ ಹಾಸ್ಯಾಸ್ಪದ: ಟ್ರಂಪ್ ವ್ಯಂಗ್ಯ

ವಾಷಿಂಗ್ಟನ್, ಜು.೭- ಹೊಸ ರಾಜಕೀಯ ಪಕ್ಷ “ ಅಮೆರಿಕಾ ಪಾರ್ಟಿ” ಆರಂಭಿಸಿರುವುದು ಹಾಸ್ಯಾಸ್ಪದ ಎಂದು ಮಾಜಿ ಮಿತ್ರ ಹಾಗು ಉದ್ಯಮಿ ಎಲನ್ ಮಸ್ಕ್ ನಡೆಯನ್ನು ಅಮೆರಿಕಾ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಟೀಕಿಸಿ ಅಣಕವಾಗಿದ್ದಾರೆ

ಸರ್ಕಾರಿ ದಕ್ಷತೆ ಇಲಾಖೆಯನ್ನು ನಿಭಾಯಿಸಲು ಸಾಧ್ಯವಾಗದ ಮಂದಿ ಹೊಸ ರಾಜಕೀಯ ಪಕ್ಷ ಆರಂಭಿಸಿದ್ಧಾರೆ, ಇನ್ನು ರಾಜಕೀಯ ಪಕ್ಷ ಹೇಗೆ ನಡೆಸುತ್ತಾರೆ ಎಂದು ಅಪಹಾಸ್ಯ ಮಾಡಿದ್ದು ಬಿಲಿಯನೇರ್ ಉದ್ಯಮಿ ನಡೆ ಹಳಿ ತಪ್ಪಿದ ರೈಲಿನಂತಿದೆ ಎಂದಿದ್ದಾರೆ.

ನ್ಯೂಜೆರ್ಸಿ ಗಾಲ್ಫ್ ಕ್ಲಬ್‌ನಿಂದ ವಾಷಿಂಗ್ಟನ್‌ಗೆ ಹಿಂತಿರುಗುವಾಗ ಏರ್ ಪೋರ್ಸ್ ಒನ್ ಹತ್ತುವ ಮೊದಲು ವರದಿಗಾರರಿಗೆ ಈ ವಿಷಯ ತಿಳಿಸಿದ ಅವರು ಅಮೆರಿಕಾದ ರಾಜಕೀಯ ಇತಿಹಾಸದಲ್ಲಿ ಎರಡೇ ಪಕ್ಷ ಇರುವುದು, ಮೂರನೇ ಪಕ್ಷ ಆರಂಭ ಗೊಂದಲ ಸೃಷ್ಠಿಸುತ್ತದೆ. ಹೀಗಾಗಿಯೇ ಎರಡೇ ಪಕ್ಷಗಳು ಅಮೆರಿಕಾದಲ್ಲಿ ಇರುವುದು, ಮೂರನೇ ಪಕ್ಷಕ್ಕೆ ಮಾನ್ಯತೆಯೂ ಇಲ್ಲ ಜೊತೆಗೆ ಅವಕಾಶವೂ ಇಲ್ಲ ಎಂದಿದ್ದಾರೆ.

ಅಮೆರಿಕಾದ ರಾಜಕೀಯ ವ್ಯವಸ್ಥೆಯನ್ನು ಸರಿ ಮಾಡುವುದಾಗಿ ಹೇಳಿರುವ ಎಲನ್ ಮಸ್ಕ್ ನಡೆ ಹಾಸ್ಯಾಸ್ಪದ, ಅಮೇರಿಕಾದ ರಾಜಕೀಯ ವ್ಯವಸ್ಥೆ ಸರಿ ಮಾಡುವುದು ಹೊಸ ಉದ್ಯಮ ಆರಂಭಿಸಿದಷ್ಟು ಸುಲಭ ಅಲ್ಲ ಎಂದು ಹೇಳಿದ್ದಾರೆ

ಅಮೆರಿಕಾದಲ್ಲಿ ಇರುವುದು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಎರಡೇ ಪಕ್ಷ. ಹೀಗಿರುವಾಗ ಮೂರನೇ ಪಕ್ಷ ಅಮೇರಿಕನ್ ಪಾರ್ಟಿ ಆರಂಭಿಸಿರುವುದು ನಗೆಪಾಟಿಲಿನ ವಿಷಯ. ಇವೆಲ್ಲಾ ಕಾರ್ಯಗತವಾಗದ ವಿಷಯಗಳು ಎಂದು ಹರಿಹಾಯ್ದಿದ್ಧಾರೆ

ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಎಲನ್ ಮಸ್ಕ್ ಅವರು ಅಮೇರಿಕಾದ ಆಡಳಿತ ವ್ಯವಸ್ಥೆಯನ್ನು “ಏಕಪಕ್ಷ ವ್ಯವಸ್ಥೆ” ಎಂದು ಕರೆದಿದ್ದನ್ನು ಪ್ರಶ್ನಿಸಲು ಮತ್ತು ವ್ಯವಸ್ಥೆ ಸುಧಾರಣೆ ಮಾಡಲು “ಅಮೇರಿಕಾ ಪಕ್ಷ” ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ

ರಿಪಬ್ಲಿಕನ್ ಪಕ್ಷದ ಪರ ಅತಿದೊಡ್ಡ ಬೆಂಬಲಿಗರಾಗಿದ್ದ ಎಲನ್ ಮಸ್ಕ್ ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವುದು ಈಗ ಇಬ್ಬರು ಮಾಜಿ ಮಿತ್ರರ ನಡುವೆ ಆರೋಪ ಮತ್ತು ಪ್ರತ್ಯಾರೋಪಕ್ಕೆ ಕಾರಣವಾಗಿದೆ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೃಹತ್ ದೇಶೀಯ ಖರ್ಚು ಯೋಜನೆ ಅಮೇರಿಕಾದ ಸಾಲ ಮತ್ತಷ್ಟು ಹೆಚ್ಚಿಸುತ್ತದೆ. ಇದಕ್ಕೆ ಕಡಿವಾಣ ಹಾಕಲು ಅಮೇರಿಕಾದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವುದಾಗಿ ತಿಳಿಸಿದ್ದಾರೆ

ದೇಶವನ್ನು ತ್ಯಾಜ್ಯ ಮತ್ತು ಭ್ರಷ್ಟಾಚಾರದಿಂದ ದಿವಾಳಿ ಮಾಡುವ ವಿಷಯ ಬಂದಾಗ, ಪ್ರಜಾಪ್ರಭುತ್ವದಲ್ಲಿ ಅಲ್ಲ, ಏಕಪಕ್ಷೀಯ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದೇವೆ” ಅದನ್ನು ಸರಿ ಮಾಡಬೇಕಾಗಿದೆ ಎಂದು ಹೇಳಿದ್ದಾರೆ