
ಬೀದರ್, ಏ 30:ಬೀದರ್ ನಗರದ ಗುಮ್ಮೆ ಕಾಲೋನಿಯ ಜೈ ಹನುಮಾನ ಮಂದಿರದಲ್ಲಿ ಕಳಸಾರೋಹಣದ ದ್ವಿತೀಯ ವಾರ್ಷಿಕೋತ್ಸವ ನಿಮಿತ್ತ ಅಖಂಡ ಶಿವನಾಮ ಸಪ್ತಾಹ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು.
ದಿನಾಂಕ 24 ಏಪ್ರಿಲ್ 2026ರಂದು ಬೆಳಿಗ್ಗೆ 7 ಗಂಟೆಗೆ ಅಲಿಯಂಬರ್ ವೀರನಾಥ ಮಂದಿರದ ಶ್ರೀ ಬಾಬು ಮಹಾರಾಜರು ಪೂಜೆ ನೆರವೇರಿಸಿ ಶಿವನಾಮ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಜೆ 7 ಗಂಟೆಗೆ ಹೆಡಗಾಪೂರದ ಶಿವಲಿಂಗೇಶ್ವರ ಸಂಸ್ಥಾನ ಹೀರೇಮಠದ ಪೂಜ್ಯ ಶ್ರೀ ಷ.ಬ್ರ. ದಾರುಕಲಿಂಗ ಶಿವಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭೂಮಿಯ ಮೇಲೆ ಮನುಷ್ಯ ಸಂಪತ್ತು, ಕಾಮಿನಿ, ಪ್ರತಿಷ್ಠೆ ಹಾಗೂ ಅಧಿಕಾರ ಗಳಿಸಿದರೂ ಅವೆಲ್ಲವೂ ನಶ್ವರವಾದವು. ಆದರೆ ಸಂತರೂ ಶರಣರೂ ನೀಡಿದ ಸುಜ್ಞಾನ, ಧರ್ಮ ಮತ್ತು ಸತ್ಕಾರ್ಯಗಳು ಶಾಶ್ವತವಾಗಿವೆ. ಆದ್ದರಿಂದ ಪ್ರತಿಯೊಬ್ಬರೂ ನಿಸ್ವಾರ್ಥದಿಂದ ಶಿವನಾಮ ಸ್ಮರಣೆ ಮಾಡಿ ಜೀವನವನ್ನು ಪರಿಶುದ್ಧಗೊಳಿಸಿ ಸಾರ್ಥಕ ಬದುಕು ನಡೆಸಬೇಕು ಎಂದು ತಿಳಿಸಿದರು.
ಓಂ ಶಿವಶಕ್ತಿ ಸತ್ಸಂಗ ಬಳಗದ ಅಧ್ಯಕ್ಷ ಸಿದ್ಧರಾಮಯ್ಯ ಹೀರೇಮಠ ಅವರು ಮಾತನಾಡಿ, ನಿರಂತರವಾಗಿ ಉಸಿರಿನೊಡನೆ ಶಿವನಾಮ ಸ್ಮರಣೆ ಮಾಡಿಕೊಂಡು ಸಂಸಾರದ ಜಂಜಾಟದಿಂದ ಹೊರಬಂದು ಶಿವನ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗಮೇಶ ಬಿರಾದಾರ ಅವರು ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ವಕೀಲ ಎಸ್.ಕೆ. ಸಾಥಿ ಭಾಗವಹಿಸಿದ್ದರು. ಸಮಾಜ ಸೇವಕಿ ಶ್ರೀಮತಿ ರೇಣುಕಾ ಅವರು ಗೌರವ ಉಪಸ್ಥಿತಿ ವಹಿಸಿದ್ದರು.
ಡೊಂಗರಗಿ ಗ್ರಾಮದ ಅಕ್ಕಮಹಾದೇವಿ ಮಹಿಳಾ ಭಜನೆ ಮತ್ತು ಸಾಂಸ್ಕøತಿಕ ಸಂಘದ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟು ಭಕ್ತರನ್ನು ಭಕ್ತಿರಸದಲ್ಲಿ ತೇಲಿಸಿದರು.
ಕಾರ್ಯಕ್ರಮದ ಸಂಘಟಕರಾದ ಶಿವಶರಣಪ್ಪ ಕಮಠಾಣ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆÇ್ರ. ಉಮಾಕಾಂತ ಮೀಸೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಗಣಪತಿ ಪಾಟೀಲ್, ಗುರುನಾಥ ಬಿರಾದಾರ, ಮಹಾದೇವಪ್ಪ ಬಿರಾದಾರ, ಸುಭಾಷ ಬಿರಾದಾರ, ಚಂದ್ರಕಾಂತ ನೇಮತಾಬಾದ, ಗೀತಾ ಪಾಟೀಲ್, ಬಸವರಾಜ ದಾನಿ, ಕೋಕಿಲಾ ಬಿರಾದಾರ, ಸರೋಜನಿ ಸ್ವಾಮಿ, ನಿರ್ಮಲಾ ಸ್ವಾಮಿ, ಮಾಣಿಕೇಶ ಪಾಟೀಲ್, ರವಿ ಹಾಗೂ ಸಂತೋಷ ಬಿರಾದಾರ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.






















