
ಬೀದರ, ಮೇ.೧೧:ಶೀಘ್ರದಲ್ಲೇ ಬೀದರದಲ್ಲಿ ಅಗ್ನಿವೀರ್ ನೇಮಕಾತಿ ರ್ಯಾಲಿ ನಡೆಯಲಿದ್ದು, ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸುಮಾರು ೧,೦೦೦ ಅಭ್ಯರ್ಥಿಗಳು ಈಗಾಗಲೇ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ.
ನೋAದಾಯಿತ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಅಇಖಿ) ಕುರಿತು ಪರಿಣಾಮಕಾರಿ ತಯಾರಿ ಮಾಡಲು ಸಹಾಯವಾಗುವ ಉದ್ದೇಶದಿಂದ, ಮೇ ೧೪ರಂದು ಸಂಜೆ ೪ ಗಂಟೆಗೆ ಬೀದರ ನಗರದ ಫೋರ್ಟ್ ರಸ್ತೆ, ಅಗ್ನಿಶಾಮಕ ಕೇಂದ್ರದ ಸಮೀಪದಲ್ಲಿರುವ ೩ ಏಂಖ ಂiಡಿ Squಚಿಜಡಿoಟಿ ಓಅಅ ಘಟಕದಲ್ಲಿ ಪರಿಚಯಾತ್ಮಕ ಮಾರ್ಗದರ್ಶನ ಮತ್ತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಯ ಮಾದರಿ, ತಯಾರಿ ತಂತ್ರಗಳು ಹಾಗೂ ದೈಹಿಕ ಮತ್ತು ಲಿಖಿತ ಪರೀಕ್ಷೆಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು. ಅನುಭವ ಹೊಂದಿದ ಮಾಜಿ ಸೈನಿಕರು ಹಾಗೂ ತಜ್ಞರು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಎಲ್ಲಾ ನೋಂದಾಯಿತ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಈ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಬೀದರ ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ರಾಜಕುಮಾರ ಲದ್ದೆ ತಿಳಿಸಿದ್ದಾರೆ.























