Home ಜಿಲ್ಲೆ ಕಲಬುರಗಿ ಏ. 21 ರಂದು ಆದಿಗುರು ಶಂಕರಾಚಾರ್ಯ ಜಯಂತಿ

ಏ. 21 ರಂದು ಆದಿಗುರು ಶಂಕರಾಚಾರ್ಯ ಜಯಂತಿ

ಜೇವರಗಿ,ಏ 17: ತಾಲ್ಲೂಕು ಆಡಳಿತದ ವತಿಯಿಂದ ಏಪ್ರಿಲ್ 21 ರಂದು ಆದಿ ಗುರು ಶಂಕರಾಚಾರ್ಯ ಜಯಂತಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲು ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರು ಅಧಿಕಾರಿಗಳಿಗೆ ಹಾಗೂ ಸಮಾಜದ ಮುಖಂಡರಿಗೆ ಕರೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂದು ಬೆಳಿಗ್ಗೆ 10 ಗಂಟೆಗೆ ತಾಲ್ಲೂಕು ಆಡಳಿತದ ವತಿಯಿಂದ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು, ಅಲ್ಲದೇ ತಾಲ್ಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳ ಕಛೇರಿಯಲ್ಲಿ ಆದಿ ಗುರು ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಮಾಡುವುದರ ಮೂಲಕ ಕಡ್ಡಾಯವಾಗಿ ಜಯಂತಿಯನ್ನು ಆಚರಿಸಬೇಕು ಎಂದು ತಹಶೀಲ್ದಾರರು ನಿರ್ದೇಶನ ನೀಡಿದರು. ಜಗದ್ಗುರುಗಳ ಸಂದೇಶ ಸಾರುವ ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸಮಸ್ತ ನಾಗರಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯತ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರವಿಚಂದ್ರ ಲಕ್ಕುಂಡಿ, ವಿಪ್ರ ಸಮಾಜದ ತಾಲೂಕ ಅಧ್ಯಕ್ಷ ರಮೇಶ ವಕೀಲ್, ಪಿ.ಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಹಳ್ಳೆಪ್ಪಚಾರ್ಯ ಜೋಶಿ, ಕಿಶನರಾವ ವಕೀಲ್ ಹೇಮನೂರ, ರವೀಂದ್ರ ವಕೀಲ, ಲಕ್ಷ್ಮೀಕಾಂತ ಕುಲಕರ್ಣಿ ಹೋತಿನಮಡು, ಅಪ್ಪಾರಾವ ಪಾಟೀಲ್, ಗುರುರಾಜ ಪೆÇದ್ದಾರ್, ಪಾಂಡುರಂಗ ಕುಲಕರ್ಣಿ, ಶ್ರೀನಿವಾಸ್ ಕುಲಕರ್ಣಿ, ನಾರಾಯಣ ನಿಲ್ಲೂರ, ಪುನೀತ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಅನಂತಕೃಷ್ಣ ವಕೀಲ, ಮನೋಜ ಕುಲಕರ್ಣಿ, ಮಲಶೆಟ್ಟೆಪ್ಪಗೌಡ ಹಿರೇಗೌಡ, ಮರೆಪ್ಪ ಪೂಜಾರಿ ಹಸನಾಪುರ, ಅಕ್ಬರ್ ಮುಲ್ಲಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.