
ಕಲಬುರಗಿ,ಜು.13- ಬೈಕ್ ಮೇಲೆ ಪಾಣೆಗಾಂವ ಗ್ರಾಮಕ್ಕೆ ಹೋಗುತ್ತಿದ್ದಾಗ ಬೈಕ್ ಸವಾರರು ಆಯ ತಪ್ಪಿ ಕಲ್ಲಿಗೆ ಡಿಕ್ಕಿ ಹೊಡೆದು ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಾಣೇಗಾಂವ ಹತ್ತಿರ ಇಂದು ಬೆಳಗಿನಜಾವ ನಡೆದಿದೆ.
ಮೃತರನ್ನು ಪಾಣೇಗಾಂವ ತಾಂಡಾದ ಸುಂದರ್ ಹರಿಶ್ಚಂದ್ರ ರಾಠೋಡ್ (36), ಧರ್ಮರಾಜ ರಾಜು ಚವ್ಹಾಣ್ (31) ಮತ್ತು ಅನಿಲ್ ಗೋಪಾಲ ಪವಾರ್ (35) ಎಂದು ಗುರುತಿಸಲಾಗಿದೆ.
ಈ ಮೂವರು ಬೈಕ್ ಮೇಲೆ ಪಾಣೇಗಾಂವ ತಾಂಡಾಕ್ಕೆ ಹೋಗುತ್ತಿದ್ದಾಗ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಡಿಸಿಪಿ ಶಾಲೂ, ಸಂಚಾರಿ ಪೊಲೀಸ್ ಠಾಣೆ ಪಿಐ ಶಕೀಲ್ ಅಂಗಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.






























