Home ಜಿಲ್ಲೆ ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ…

ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ…

ಸೈದಾಪುರ:ಏ.೧೬:ಆಟಗಾರರು ಕ್ರೀಡಾ ನಿಯಮಗಳಿಗೆ ಬದ್ದರಾಗಬೇಕು. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡಾ ಸ್ಫೂರ್ತಿಯೊಂದಿಗೆ ಭಾಗವಹಿಸುವುದು ಅವಶ್ಯವಿದೆ ಎಂದು ರವಿಂದ್ರಗೌಡ ಕಾರಡ್ಡಿ ಮಲ್ಹಾರಅವರು ಸಲಹೆ ನೀಡಿದರು.
ಸಮೀಪದ ಮಲ್ಹಾರ ಗ್ರಾಮದಲ್ಲಿ ಆಯೋಜನೆ ಮಾಡಿದ ಮಲ್ಹಾರ ಪ್ರೀಮಿಯರ್ ಲೀಗ್ ಗೆ ಚಾಲನೆ ನೀಡಿ ಮಾತನಾಡಿದರು. ಆಟಗಾರರು ವಿನಾ ಕಾರಣ ಮನಸ್ತಾಪ ಮಾಡಿಕೊಳ್ಳದೆ ಸ್ನೇಹ ಸಹೋದರತ್ವ ಭಾವದೊಂದಿಗೆ ಆಟವಾಡಬೇಕು. ಇಂದಿನ ಸೋಲು ನಾಳೆಯ ಗೆಲುವಿಗೆ ಅಡಿಪಾಯವಾಗಬಹುದು ಎಂದರು. ಕ್ರೀಡೆಗಳಿಂದ ದೈಹಿಕ ಸದೃಢತೆಯ ಜತೆಗೆ ಮಾನಸಿಕ ಸಾಮಾರ್ಥ್ಯವೂ ವಿಕಾಸವಾಗುತ್ತದೆ ಎಂದು ಸಲಹೆ ನೀಡಿದರು.
ಮಲ್ಹಾರ ಪ್ರೀಮಿಯರ್ ಲೀಗ್ ನಲ್ಲಿ ಮಲ್ಹಾರ ಗ್ರಾಪಂ ವ್ಯಾಪ್ತಿಯ ಗ್ರಾಮ ಹಾಗೂ ತಾಂಡಗಳ ಆಟಗಾರರು ಭಾಗವಹಿಸಿದ್ದು. ಎಲ್ಲ ಆಟಗಾರರಿಗೆ ರವಿಂದ್ರಗೌಡಕಾರಡ್ಡಿ ಅವರು ಸುಮಾರು ೫೦ಸಾವಿರ ರೂ. ಖರ್ಚು ಮಾಡಿ ಟಿ ಶರ್ಟ್ ಮತ್ತು ಸ್ಪೋರ್ಟ್ಸ್ ಪ್ಯಾಂಟ್ ನೀಡಿದ್ದಾರೆ.
ಚಾಂಪಿಯನ್ ತಂಡಕ್ಕೆ ಪ್ರಥಮ ಬಹುಮಾನವನ್ನು ೨೫ ಸಾವಿರರೂ. ನಗದು ಹಾಗೂ ಕಪ್‌ನ್ನು ಶರಣಪ್ಪಗೌಡ ಕೌಳೂರು, ದ್ವಿತೀಯ ಬಹುಮಾನ ೨೦ಸಾವಿರ ನಗದು ಹಾಗೂ ಕಪ್ ನ್ನು ಬಸ್ಸುಗೌಡಕಾರಡ್ಡಿ ಹಾಗೂ ಮ್ಯಾನ್‌ಆಫ್ ದಿ ಮ್ಯಾಚ್‌ರೂ. ೫೦೦೧ ನಗದು ಹಾಗೂ ಕಪ್ ನ್ನು ಮಹದೇವಪ್ಪ ಬಾಗ್ಲಿ, ಬೆಸ್ಟ್ ಬ್ಯಾಟ್ಸ್ ಮನ್ ಗೆ ರೂ. ೨೫೦೦ ನಗದು ಹಣವನ್ನು ವಗ್ಗಯ್ಯ ವಗ್ಗಯ್ಯನೋರ್, ಮ್ಯಾನ್‌ಆಫ್ ದಿ ಸಿರೀಸ್ ರೂ. ೨೫೦೦ ನಗದು ಮತ್ತು ಕಪ್‌ನ್ನು ಮಲ್ಲಮ್ಮ ಕೋಮಾರ, ಅತ್ಯುತ್ತಮ ಬೌಲರ್ ಗೆ ರೂ. ೨೫೦೦ ನಗದು ಹಾಗೂ ಕಪ್ ನ್ನು ಸುರೇಶ ದೊಡ್ಡಮನಿ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದರು.