Home ಜಿಲ್ಲೆ ಬೆಂಗಳೂರು ಉರಿಗಾಂ ಮೇಲ್ಸುತುವೆ ಪರಿಶೀಲನೆ ನಡೆಸಿದ ಎಸಿ ಮಾಹಿತಿ ಕೊರೆತೆ ;ದಂಗಾದ ಅಧಿಕಾರಿಗಳು

ಉರಿಗಾಂ ಮೇಲ್ಸುತುವೆ ಪರಿಶೀಲನೆ ನಡೆಸಿದ ಎಸಿ ಮಾಹಿತಿ ಕೊರೆತೆ ;ದಂಗಾದ ಅಧಿಕಾರಿಗಳು

ಕೆಜಿಎಫ್:ಸೆ:2: ಉರಿಗಾಂ ರೈಲ್ವೇ ಗೇಟ್ ಬಳಿ ಮೇಲ್ಸುತುವೆ ನಿರ್ಮೀಸುವ ಕಾಮಗಾರಿಯು ಕಳೆದ ೧೫ ವರ್ಷಗಳಿಂದ ಅಧಿಕಾರಿಗಳು ಬರುವುದು ಸ್ಥಳ ಪರಿಶೀಲನೆ ನಡೆಸುವುದು ನಂತರ ನಾನಾ ಕಾರಣಗಳಿಂದ ೬ ತಿಂಗಳು ೧ ವರ್ಷ ಎಂಬಂತೆ ಮುಂದಕ್ಕೆ ಹೊಗುವುದು ನಡೆಯುತ್ತಲ್ಲೇ ಇದ್ದು ಮರಳಿ ಕೋಲಾರ ಉಪವಿಭಾಗಧಿಕಾರಿ ರೇಣುಕಾಪ್ರಸಾದ ಜಂಬರಿಗಿ ರೈಲ್ವೆ ಇಲಾಖೆ ಲೋಕೋಪಯೋಗಿ ಇಲಾಖೆ ಬಿಜಿಎಂಎಲ್ ಅಧಿಕಾರಿಗಳೊಂದಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿರುವುದರಿಂದ ಕಾಮಗಾರಿಗೆ ಚಾಲನೆ ದೊರಕಲಿದೆಯೇ ಎಂಬುದರ ನಿರೀಕ್ಷೆಯಲ್ಲಿ ಜನರು ಇದ್ದಾರೆ.


ಉರಿಗಾಂ ರೈಲ್ವೆ ನಿಲ್ದಾಣದಲ್ಲಿ ರೈಲು ಬಂದರೆ ರೈಲ್ವೆ ಗೇಟ್ ಬಂದ್ ಮಾಡಲಾಗುತ್ತದೆ ಆಗ ವಾಹನಗಳು ಸೇರಿದಂತೆ ಅಂಬ್ಯುಲೆನ್ಸ್ ಸಹ ನಿಲ್ಲಬೇಕಾದ ಪರಿಸ್ಥಿತಿ ಇದ್ದು ಉರಿಗಾಂ ರೈಲ್ವೆ ಗೇಟ್ ಬಳಿ ಮೇಲ್ಸುತುವೆ ನಿರ್ಮೀಸುವಂತೆ ದಶಕಗಳಿಂದ ಸಾರ್ವಜನಿಕರಿಂದ ಒತ್ತಾಯಗಳು ಕೇಳಿ ಬರುತ್ತಿತ್ತು ಮತ್ತು ಅಂದಿನ ಕೇಂದ್ರ ಸಚಿವರಾಗಿದ್ದ ಕೆ.ಹೆಚ್.ಮುನಿಯಪ್ಪ ಬಳಿ ಮನವಿ ಪತ್ರಗಳನ್ನು ಸಾರ್ವಜನಿಕರು ಸಲ್ಲಿಸಿದ್ದರು ಸಚಿವರು ಸಹ ಕಾಮಗಾರಿಗೆ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು ಮತ್ತು ಕೆಹೆಚ್.ಮುನಿಯಪ್ಪ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ೮ ಮನೆಗಳ ಮಾಲಿಕರಿಗೆ ಪರಿಹಾರವನ್ನು ನೀಡಿ ತೆರವುಗೊಳಿಸಬೇಕು ಎಂದು ಆದೇಶ ನೀಡಿದ್ದರು ಇಂದಿಗೂ ಕಾಮಗಾರಿ ಪ್ರಾರಂಭವಾಗಿಲ್ಲ ಸಮಸ್ಯೆ ಮಾತ್ರ ಸಮಸ್ಯೆಯಾಗಿ ನಾಗರೀಕರನ್ನು ಕಾಡುತ್ತಿದೆ .


ಕೋಲಾರ ಉಪವಿಭಾಗಧಿಕಾರಿ ರೇಣುಕಾಪ್ರಸಾದ ಜಂಬರಿಗಿ ಬೇಟಿ ಸಂದರ್ಭದಲ್ಲೂ ಸಹ ಬಿಜಿಎಂಎಲ್ ಅಧಿಕಾರಿಗಳುಸರ್ಮಪಕವಾದ ಮಾಹಿತಿಯನ್ನು ನೀಡಲು ವಿಫಲರಾಗಿ ದೆಹಲಿಯಯ ಬೋರ್ಡ್‌ಗೆ ಮಾಹಿತಿಯನ್ನು ನೀಡಲಾಗುವುದು ಅವರು ಸ್ಪಷ್ಠಿಕರಣ ನೀಡಿದರು ಮತ್ತು ಹಿಂದೆ ಕೇವಲ ೮ ಮನೆಗಳ ತೆರವಿಗೆ ಗುರುತು ಮಾಡಲಾಗಿತ್ತು ಆದರೆ ಇಧೀಗ ೨೦ ಮನೆಗಳನ್ನು ತೆರವುಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಅಧಿಕಾರಿಗಳು ಹೇಗೆ ಮುಂದುವರೆಯಲಿದ್ದಾರೆ ಕಾದು ನೋಡಬೇಕಿದೆ.


ಈ ವೇಳೆ ಪಿಡ್ಲ್ಯೂಡಿ ಎಇಇ ರಾಜಶೇಖರ್, ರೈಲ್ವೆ ಇಂಜಿನೀಯರ್ ಮುರಳಿ ಹಾಗೂ ಬಿಜಿಎಂಎಲ್ ಅಧಿಕಾರಿಗಳು ಹಾಜರಿದ್ದರು.