
ಕೆಜಿಎಫ್:ಏ:೧೬: ದೇಶದಲ್ಲಿ ವಿದೇಶಗಳಲ್ಲಿ ತಲೆ ದೋರುವ ವಿಫತ್ತುಗಳ ಸಂದರ್ಭದಲ್ಲಿ ಜನರ ನೆರವಿಗೆ ಧಾಮಿಸಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ತನ್ನದೆ ಆದ ಛಾಪು ಮೂಡಿಸಿ ದೇಶ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿರುವ ಸಾಮಾಜಿಕ ಕಳಿಕಳಿಯುಳ್ಳ ಒಂದು ಸಂಸ್ಥೆ ಅಂದರೆ ಆದು ಎಬಿವಿಪಿ ಎಂದು ಕೋಲಾರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್‌ನಾರಾಯಣಕುಟ್ಟಿ ಹೇಳಿದರು.
೧೩೫ ನೇ ಅಂಬೇಡ್ಕರ್ ಜನ್ಮ ದಿನಾಚರಣೆ ಪ್ರಯುಕ್ತ ರಾಜ್ಯ ಎಬಿವಿಪಿ ರಾಜ್ಯಾಧ್ಯಂತ ಅಂಬೇಡ್ಕರ್ ಟ್ರೋಫಿ ಅಯೋಜಿಸುವಂತೆ ಸಲಹೆ ಮೇರೆಗೆ ತಾಲ್ಲೂಕು ಎಬಿವಿಪಿ ಘಟಕದವತಿಯಿಂದ ಅಂಬೇಡ್ಕರ್ ಟ್ರೋಫಿ ಕ್ರಿಕೇಟ್ ಪಂಧ್ಯಾವಳಿಯನ್ನು ಅಯೋಜಿಸಲಾಗಿತ್ತು.
ಟೂರ್ನಮೆಂಟ್‌ನ ಪೈನಲ್ಸ್ ನಲ್ಲಿ ವಿಜೇತ ಕ್ರಿಕೇಟ್ ತಂಡಗಳಿಗೆ ಬಹುಮಾನವನ್ನು ವಿತರಿಸಿದ ಕೋಲಾರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್‌ನಾರಾಯಣಕುಟ್ಟಿ ಮಾತನಾಡಿ ಯುವಕರೇ ನಮ್ಮ ದೇಶದ ಆಸ್ತಿಗಳಾಗಿರುವುದರಿಂದ ಅವರು ಹಾದಿ ತಪ್ಪಬಾರದು ಯುವಕರು ಸನ್ಮರ್ಗದಲ್ಲಿ ಮುಂದುವರೆಯಬೇಕು ಮತ್ತು ಸಾಮಾಜಿಕ ಕಳಿ ಕಳಿಯನ್ನು ಹೊಂದಿರುವವರಾಗಿರಬೇಕು ಎಂಬ ದೃಷ್ಟಿಯಿಂದ ಎಬಿವಿಪಿ ಸಂಸ್ಥೆಯು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ದೇಶಧ್ಯಾಂತ ಹಮ್ಮಿಕೊಳ್ಳುತ್ತ ಬರುತ್ತಿದೆ ಅದರಲ್ಲೂ ಅಂಬೇಡ್ಕರ್ ರವರ ೧೩೫ ನೇ ಜನ್ಮ ದಿನಾಚರಣೆ ಪ್ರಯುಕ್ತವಾಗಿ ಕ್ರಿಕೇಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿತ್ತು
ಎಂದು ಹೇಳಿದರು. ಕೋಲಾರ ಜಿಲ್ಲೆ ಅದರಲ್ಲೂ ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಕ್ರೀಡೆಗೆ ತನ್ನದೆ ಆದ ಇತಿಹಾಸ ಹೊಂದಿದ್ದು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಕ್ರೀಡಾಪಟುಗಳು ಹಲವು ಮಂದಿ ಇದ್ದಾರೆ ನಗರದ ಯಾವುದೇ ಭಾಗಕ್ಕೆ ಹೊದರು ಸಹ ಆ ಭಾಗದಲ್ಲಿ ಯುವಕರು ಕ್ರಿಕೇಟ್ ಪುಟ್‌ಬಾಲ್ ಸೇರಿದಂತೆ ನಾನಾ ರೀತಿಯ ಕ್ರೀಡೆಗಳ ಅಭ್ಯಾಸದಲ್ಲಿ ತೊಡಗಿರುವುದನ್ನು ನಾವು ಕಾಣಬಹುದು ಎಂದು ಹೇಳಿದರು.
ಟೂರ್ನಮೆಂಟ್‌ನಲ್ಲಿ ಬೆಸ್ಟ್ ಆಟಗಾರ ಪ್ರಶಸ್ತಿಯನ್ನು ವಿತರಿಸಿದ ರಾಜ್ಯ ಎಬಿವಿಪಿ ಕಾರ್ಯಕಾರಿ ಸಮಿತಿ ಸದಸ್ಯ ಅಜಯ್ ಮಾತನಾಡಿ ಯುವಕರು ಈ ದೇಶದ ಆಸ್ತಿ ಮತ್ತು ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುವವರು ವಿಧ್ಯಾರ್ಥಿ ಜೀವನದಲ್ಲಿ ಕೆಲವು ದುಷ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡರೆ ನಿಮ್ಮನ್ನೆ ನಂಬಿರುವ ಕುಟುಂಬ ಬೀದಿಗೆ ಬೀಳಬೇಕಾದ ನೋವು ಒಂದು ಕಡೆಯಾದರೆ ಪೋಷಕರು ಸಮಾಜದಲ್ಲಿ ತಲೆ ಎತ್ತಿ ತಿರುಗಾಟ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಉದ್ಬವಿಸಲಿದೆ ಆದ್ದರಿಂದ ಯುವಕರು ಜೀವನದಲ್ಲಿ ಉತ್ತಮವಾದ ವಿಧ್ಯಾಭ್ಯಾಸವನ್ನು ಮಾಡಬೇಕು ಅದರೊಂದಿಗೆ ಕ್ರೀಡೆಗಳಲ್ಲೂ ಭಾಗವಹಿಸಉವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಬೇಕು ಎಂಬ ಆಶಯದೊಂದಿಗೆ ಎಬಿವಿಪಿ ಸಮಾಜ ಸೇವೆಯೊಂದಿಗೆ ವಿಧ್ಯಾರ್ಥಿಗಳು ಹಾದಿ ತಪ್ಪಬಾರದು ಎಂಬ ದೂರದೃಷ್ಠಿಯನ್ನು ಇಟ್ಟುಕೊಂಡು ಕ್ರೀಡೆಗಳನ್ನು ದೇಶದಲ್ಲಿ ಅಯೋಜಿಸುತ್ತಿದೆ ಯುವಕರು ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಬಾಬಿಸುರೇಶ್ ಹಾಗೂ ನಗರದ ಹಲವು ಕ್ರೀಡಾಪಟುಗಳು ಹಾಜರಿದ್ದರು.




















