Home ಮುಖಪುಟ ಸುದ್ದಿ ಭಯೋತ್ಪಾದನೆಗೆ ಕುಮ್ಮಕ್ಕು: ಪಾಕ್ ವಿರುದ್ಧ ಮೋದಿ ಪರೋಕ್ಷ ಗುಡುಗು

ಭಯೋತ್ಪಾದನೆಗೆ ಕುಮ್ಮಕ್ಕು: ಪಾಕ್ ವಿರುದ್ಧ ಮೋದಿ ಪರೋಕ್ಷ ಗುಡುಗು

ಕಿರ್ಗಿಸ್ತಾನ್, ಸೆ. ೧- ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಗುಡುಗಿರುವ ಪ್ರಧಾನಿ ನರೇಂದ್ರ ಮೋದಿ, ಉಗ್ರರಿಗೆ ಆಶ್ರಯ ನೀಡುವ ದೇಶಗಳ ದ್ವಿಮುಖ ನೀತಿಗೆ ಅವಕಾಶವಿಲ್ಲ ಎಂದು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಸಮ್ಮುಖದಲ್ಲೇ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಭಯೋತ್ಪಾದನೆಯನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ದೇಶಗಳ ವಿರುದ್ಧ ಜಾಗತಿಕ ವೇದಿಕೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಿರ್ಗಿಸ್ತಾನ್ ದೇಶದ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ೨೬ನೇ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಭಯೋತ್ಪಾದನೆ ನಿಯಂತ್ರಣ, ಜಾಗತಿಕ ಶಾಂತಿ ಹಾಗೂ ಪ್ರಾದೇಶಿಕ ಭದ್ರತೆಯ ಕುರಿತು ಪ್ರಮುಖ ನಿಲುವುಗಳನ್ನು ಬಹಿರಂಗಪಡಿಸಿದ್ದಾರೆ ಭಯೋತ್ಪಾದನೆಯ ವಿಚಾರದಲ್ಲಿ ಕೆಲವು ರಾಷ್ಟ್ರಗಳು ತಳೆಯುವ ದ್ವಿಮುಖ ನೀತಿಯನ್ನು ಸಂಪೂರ್ಣವಾಗಿ ತಡೆಹಿಡಿಯಬೇಕು ಎಂದು ಕರೆ ನೀಡಿದ್ದಾರೆ.

ಶೃಂಗಸಭೆಯ ಮುಖ್ಯ ಹಂತದ ಚರ್ಚೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಸದಸ್ಯ ರಾಷ್ಟ್ರಗಳ ಪ್ರಮುಖ ನಾಯಕರು ಸಮ್ಮಖದಲ್ಲಿ ಪ್ರಧಾನಿ ಮೋದಿ ಭಯೋತ್ಪದನೆ ವಿರುದ್ಧ ಭಾರತದ ನೀಲುವನ್ನು ಸ್ಪಷ್ಟಪಡಿಸಿದ್ದಾರೆ.
ಭಯೋತ್ಪಾದನೆಯ ವಿಚಾರದಲ್ಲಿ ಕೆಲವು ರಾಷ್ಟ್ರಗಳು ತಳೆಯುವ ದ್ವಿಮುಖ ನೀತಿಯನ್ನು ಸಂಪೂರ್ಣವಾಗಿ ತಡೆಹಿಡಿಯಬೇಕು. ಭಯೋತ್ಪಾದನೆಗೆ ದೊರೆಯುವ ಹಣಕಾಸು ನೆರವು , ಯುವಕರನ್ನು ಭರ್ತಿ ಮಾಡಿಕೊಳ್ಳುವುದು , ಮೂಲಭೂತವಾದದ ಪ್ರಸಾರ ಮತ್ತು ಉಗ್ರರಿಗೆ ನೀಡಲಾಗುವ ಸುರಕ್ಷಿತ ತಾಣಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕು “ಭಯೋತ್ಪಾದನೆಯು ಯಾವುದೇ ದೇಶಕ್ಕೂ ಒಂದು ತಂತ್ರಜ್ಞಾನದ ಅಥವಾ ಯುದ್ಧತಂತ್ರದ ಆಸ್ತಿಯಾಗಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟ ಸಂದೇಶ ನೀಡಿದರು.

ರಷ್ಯಾ-ಉಕ್ರೇನ್ ಹಾಗೂ ಜಾಗತಿಕ ಸಂಘರ್ಷಗಳ ಕುರಿತು ಪುಟಿನ್ ಜೊತೆ ಚರ್ಚೆ
ಶೃಂಗಸಭೆಯ ಹೊರತಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮೋದಿ ನಡೆಸಿದ ದ್ವಿಪಕ್ಷೀಯ ಮಾತುಕತೆಯು ಜಾಗತಿಕ ಗಮನ ಸೆಳೆಯಿತು. ನಾಲ್ಕು ವರ್ಷಗಳಿಂದ ಮುಂದುವರಿದಿರುವ ರಷ್ಯಾ-ಉಕ್ರೇನ್ ಸಂಘರ್ಷ ಹಾಗೂ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ಉದ್ವಿಗ್ನತೆಯ ಕುರಿತು ಮೋದಿ ಮಾತನಾಡಿದರು:
“ಯಾವುದೇ ಸಮಸ್ಯೆಗೆ ಯುದ್ಧದ ಭೂಮಿಯಲ್ಲಿ ಪರಿಹಾರ ಸಿಗುವುದಿಲ್ಲ. ಪ್ರತಿಯೊಂದು ಸಂಘರ್ಷವೂ ಕೇವಲ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲವೇ ಬಗೆಹರಿಯಬೇಕು” ಎಂದರು.
ಯುದ್ಧದ ಪ್ರತಿಯೊಂದು ದಿನವೂ ಮಾನವಕುಲವನ್ನು ಹಿನ್ನಡೆಗೆ ತಳ್ಳುತ್ತದೆ. “ಶಾಂತಿಯ ಹಾದಿಯೇ ಏಕೈಕ ಮಾರ್ಗ” ಎಂದು ಗಾಂಧಿ ಮತ್ತು ಬುದ್ಧನ ನಾಡಿನ ಸಂದೇಶವನ್ನು ಪುಟಿನ್‌ಗೆ ರವಾನಿಸಿದರು.

ಶೀಘ್ರದಲ್ಲೇ ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಪುಟಿನ್ ಅವರನ್ನು ಪ್ರಧಾನಿ ಮೋದಿ ಅಧಿಕೃತವಾಗಿ ಆಹ್ವಾನಿಸಿದರು.

ಶಾಂಘೈ ಸಹಕಾರ ಸಂಸ್ಥೆ ಸ್ಥಾಪನೆ
೨೦೦೧ (ಚೀನಾ, ರಷ್ಯಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್)ಭಾರತ ಮತ್ತು ಪಾಕಿಸ್ತಾನ ಸೇರ್ಪಡೆ ೨೦೧೭ಇತ್ತೀಚೆಗೆ ಸೇರಿದ ಸದಸ್ಯರುಇರಾನ್ (೨೦೨೩), ಬೆಲಾರಸ್ (೨೦೨೪) ವೀಕ್ಷಕ ದೇಶಗಳು ಅಫ್ಘಾನಿಸ್ತಾನ್, ಮಂಗೋಲಿಯಾ ಸಂವಾದ ಭಾಗಿದಾರರು ಟರ್ಕಿ, ಅಜೆರ್ಬೈಜಾನ್, ಸೌದಿ ಅರೇಬಿಯಾ ಸೇರಿದಂತೆ ೧೫ ದೇಶಗಳು
ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಇಂಧನ ಮಾರುಕಟ್ಟೆಯಲ್ಲಿ ತಂಟೆಯಾಗಿರುವ ಈ ಸಂದರ್ಭದಲ್ಲಿ, ಬಿಷ್ಕೆಕ್‌ನಲ್ಲಿ ನಡೆದ ಈ ೨೬ನೇ ಶೃಂಗಸಭೆಯು ಪ್ರಾದೇಶಿಕ ಭದ್ರತೆ ಮತ್ತು ವ್ಯಾಪಾರ ಸಂಪರ್ಕದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.