
ಬೀದರ್: ಮಾ.1:ಜಿಲ್ಲೆಯನ್ನು ನಶೆ, ಭಿಕ್ಷಾಟನೆ ಹಾಗೂ ದ್ವೇಶ ಮುಕ್ತಗೊಳಿಸಲು ಬೀದರ್ ನಾಗರಿಕ
ಸನ್ರ‍್ಗ ಸಮಿತಿ ಸಂಕಲ್ಪ ತೊಟ್ಟಿದೆ ಎಂದು ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್
ಹೇಳಿದರು.
ಸಮಿತಿ ವತಿಯಿಂದ ನಗರದ ಜಿಲ್ಲಾ ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ
ದುಶ್ಚಟಗಳ ನಿಯಂತ್ರಣ ಕುರಿತ ಸಂಘ ಸಂಸ್ಥೆಗಳು ಹಾಗೂ ಸಮಾಜದ ಗಣ್ಯರ ಸಮಾಲೋಚನಾ
ಸಭೆಯಲ್ಲಿ ಅವರು ಮಾತನಾಡಿದರು.
ಈ ನಿಟ್ಟಿನಲ್ಲಿ ಹಿರಿಯರ ರ‍್ಗರ‍್ಶನದಲ್ಲಿ ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಯುವಕರ
ಸಮಿತಿ ರಚಿಸಲು ರ‍್ಧರಿಸಲಾಗಿದೆ ಎಂದು ತಿಳಿಸಿದರು.
ಗುಟ್ಕಾ, ಸಿಗರೇಟ್, ಸಾರಾಯಿ ಸೇವನೆ, ಅತಿಯಾದ ಮೊಬೈಲ್ ಬಳಕೆ ಚಟ, ಭಿಕ್ಷಾಟನೆ
ಸಾಮಾಜಿಕ ಪಿಡುಗು ಆಗಿವೆ ಎಂದು ಹೇಳಿದರು.
ಯುವಕರೇ ದೇಶದ ಸಂಪತ್ತು ಆಗಿದ್ದಾರೆ. ಆದರೆ, ಮಾದಕ ವಸ್ತುಗಳು, ಮೊಬೈಲ್ ವ್ಯಸನದಿಂದಾಗಿ
25 ರಿಂದ 30 ರ‍್ಷದ ಒಳಗಿನ ಯುವಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹಣ ಖರ‍್ಚು ಮಾಡಿ, ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕುಟುಂಬಕ್ಕೆ
ಭಾರವಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಯುವಕರು ರೋಗ ಪೀಡಿತರಾದರೆ ದೇಶ ಬಲಹೀನ ಆಗುತ್ತದೆ. ಹೀಗಾಗಿ ಯುವಕರನ್ನು ದುಶ್ಚಟಗಳಿಂದ
ಮುಕ್ತಗೊಳಿಸಿ ದೇಶವನ್ನು ಶಕ್ತಿಶಾಲಿ ಆಗಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು
ತಿಳಿಸಿದರು.
ಸಮಾಜದಲ್ಲಿ ಕೆಟ್ಟದ್ದನ್ನು ನಿಲ್ಲಿಸಿ ಒಳ್ಳೆಯದನ್ನು ಹರಡುವುದು, ಪ್ರೀತಿ, ವಿಶ್ವಾಸ,
ಸಹೋದರತ್ವದ ವಾತಾವರಣ ರ‍್ಮಿಸುವುದು ಸಮಿತಿಯ ಉದ್ದೇಶವಾಗಿದೆ ಎಂದು ಹೇಳಿದರು.
ಸಮಿತಿ ದುಶ್ಟಟಗಳ ವಿರುದ್ಧ ಜಿಲ್ಲೆಯಲ್ಲಿ ಜನ ಜಾಗೃತಿ ಅಭಿಯಾನ ನಡೆಸುತ್ತಿದೆ.
ಎಲ್ಲರೂ ಕೈಜೋಡಿಸಿದರೆ ಬೀದರ್ ಬರುವ ದಿನಗಳಲ್ಲಿ ನಶೆ ಹಾಗೂ ಭಿಕ್ಷಾಟನೆ
ಮುಕ್ತವಾಗಲಿದೆ ಎಂದು ಹಿಂದುಳಿದ ರ‍್ಗಗಳ ಒಕ್ಕೂಟದ ಗೌರವಾಧ್ಯಕ್ಷ ಬಸವರಾಜ ಮಾಳಗೆ
ತಿಳಿಸಿದರು.
ದುಶ್ಚಟಗಳು ವ್ಯಕ್ತಿ ಹಾಗೂ ಸಮಾಜದ ಪ್ರಗತಿಗೆ ಮಾರಕವಾಗಿವೆ. ಕಾರಣ, ಅವುಗಳನ್ನು
ನಿಯಂತ್ರಿಸುವುದು ಅವಶ್ಯಕವಾಗಿದೆ ಎಂದು ಬೀದರ್ ನಾಗರಿಕ ಸನ್ರ‍್ಗ ಸಮಿತಿಯ
ರ‍್ಯರ‍್ಶಿ ಅಶೋಕ ವಡಗಾವೆ ಹೇಳಿದರು.
ಆರೋಗ್ಯರ‍್ಣ ಸಮಾಜ ರ‍್ಮಾಣಕ್ಕೆ ಸಮಿತಿ ಅಭಿಯಾನ ಹಮ್ಮಿಕೊಂಡಿರುವುದು ಉತ್ತಮ
ಬೆಳವಣಿಗೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ
ಚನಶೆಟ್ಟಿ ಎಂದು ನುಡಿದರು.
ವ್ಯಸನಗಳಿಂದ ಆಗುವ ದುಷ್ಪರಿಣಾಮಗಳ ಜಾಗೃತಿಗೆ ಕರ ಪತ್ರ ವಿತರಿಸಬೇಕು. ಮನೆ, ಮನೆಗೆ
ಭೇಟಿ ಕೊಡಬೇಕು ಎಂಬಿತ್ಯಾದಿ ಸಲಹೆಗಳನ್ನು ಅನೇಕರು ನೀಡಿದರು.
ಹಿಂದುಳಿದ ರ‍್ಗಗಳ ಒಕ್ಕೂಟದ ಅಧ್ಯಕ್ಷ ಡಾ. ರಾಜಶೇಖರ ಸೇಡಂಕರ್, ಪ್ರಮುಖರಾದ ಅಬ್ದುಲ್
ಮನ್ನಾನ್ ಸೇಠ್, ಹಾವಶೆಟ್ಟಿ ಪಾಟೀಲ, ಶರಣಪ್ಪ ಮಿಠಾರೆ ಮತ್ತಿತರರು ಇದ್ದರು.























