
ಜಮಖಂಡಿ : ಮೇ 8:ತಾಲೂಕಿನಲ್ಲಿ ಬೆಚ್ಚಿಬೀಳಿಸಿದ್ದ ತುಂಗಳ ಜನತಾ ಪ್ಲಾಟ್ನ ಜೋಡಿ ಕೊಲೆ ಪ್ರಕರಣಕ್ಕೆ ಭಾರೀ ತಿರುವು ಸಿಕ್ಕಿದ್ದು, ಕೊಲೆಗೈದ ದಂಪತಿಯನ್ನು ಸಾವಳಗಿ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಪಿಐ ಮಲ್ಲಪ್ಪ ಮಡ್ಡಿ ಹಾಗೂ ಪಿಎಸೈ ಅಪ್ಪು ಐಗಳಿ ನೇತೃತ್ವದಲ್ಲಿ ನಡೆದ ಸೂಕ್ಷ್ಮ ತನಿಖೆಯಿಂದ ಪ್ರಕರಣವನ್ನು ಬಿಚ್ಚಿಟ್ಟ ಪೆÇಲೀಸರು, ಸಾಕ್ಷಿ ನಾಶ ಮಾಡಲು ಯತ್ನಿಸಿದರೂ ಆರೋಪಿಗಳನ್ನು ಹೆಡೆಮೂರಿ ಕಟ್ಟಿದ್ದಾರೆ.
ಅಶೋಕ ಲಗಮಪ್ಪ ಕೋಳಿ (34) ಹಾಗೂ ಉತ್ತಮ ಹರೀಬಾ ಶಿಂಧೆ (50) ಮೇಲೆ ನಡೆದಿದ್ದ ಕ್ರೂರ ಹತ್ಯೆ ಪ್ರಕರಣ ಆರಂಭದಲ್ಲಿ ಅಪರಿಚಿತರ ಕೃತ್ಯ ಎಂದು ಭಾವಿಸಲಾಗಿತ್ತು. ಆದರೆ ತನಿಖೆ ಗಟ್ಟಿಯಾಗುತ್ತಿದ್ದಂತೆ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ.
ಘಟನಾ ಸ್ಥಳದ ಪಕ್ಕದ ಮನೆಯವರಾದ ಅಬ್ದುಲರಜಾಕ ಮುಲ್ಲಾ ಹಾಗೂ ಅವರ ಪತ್ನಿ ಬಿಸ್ಮಿಲ್ಲಾ ಮುಲ್ಲಾ ಈ ಕೊಲೆ ಪ್ರಕರಣದ ಹಿಂದಿರುವುದು ಪೆÇಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಮೃತ ಅಶೋಕ ಆರೋಪಿಗಳ ಮಗಳ ಜೊತೆ ಸಲುಗೆಯಿಂದ ಮಾತನಾಡುತ್ತಿದ್ದ ಹಿನ್ನೆಲೆ, ಕೋಪಗೊಂಡ ದಂಪತಿ ಕ್ರೂರ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಘಟನೆ ದಿನ ರಾತ್ರಿ ರಸ್ತೆ ಪಕ್ಕದಲ್ಲಿ ಮಲಗಿದ್ದ ಅಶೋಕನ ಮೇಲೆ ದೊಡ್ಡ ಕಲ್ಲು ಎತ್ತಿ ಹಾಕಿ, ಬಳಿಕ ಕುರುಪಿಯಿಂದ ನಿರ್ದಯವಾಗಿ ಹೊಡೆದು ಸ್ಥಳದಲ್ಲೇ ಕೊಲೆ ಮಾಡಲಾಗಿದೆ. ಸಪ್ಪಳ ಕೇಳಿ ಎದ್ದ ಉತ್ತಮ ಶಿಂಧೆ ಮೇಲೂ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೊಲೆ ಮಾಡಿದ ನಂತರ ಸಾಕ್ಷಿಗಳನ್ನು ನಾಶಪಡಿಸಲು ಯತ್ನಿಸಿದ ಆರೋಪಿಗಳು ಪೆÇಲೀಸರ ಕಣ್ಣಿಗೆ ತಪ್ಪಿಸಲಿಲ್ಲ. ಚಾಕಚಕ್ಯ ತನಿಖೆಯಿಂದ ಎಲ್ಲಾ ಸತ್ಯಾಂಶಗಳು ಬಹಿರಂಗಗೊಂಡಿದ್ದು, ಇಬ್ಬರನ್ನು ಬಂಧಿಸಿ ಮುಂದಿನ ತನಿಖೆ ಮುಂದುವರೆಸಲಾಗಿದೆ






















