
ತಾಳಿಕೋಟೆ:ಮೇ.8: ಪಟ್ಟಣದ ಕೆಲವು ಬಡಾವಣೆಗಳಲ್ಲಿ ಮಂಗಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದು ಬಿಸಿಲಿನ ತಾಪಕ್ಕೆ ಗಿಡಮರಗಳೆನ್ನದೇ ಮನೆಗಳೊಳಗೆ ಹಾಗೂ ಶಾಲಾ ಕಾಲೇಜುಗಳು ಪ್ರವೇಶಿಸಿ ಉಪಟಳ ಮುಂದುವರೆಸಿದ್ದರಿಂದ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬಿಸಿಲಿನ ತಾಪ ಹೆಚ್ಚುತ್ತಾ ಸಾಗಿದ್ದರಿಂದ ಮಂಗಗಳು ಅರಣ್ಯದಿಂದ ಪಟ್ಟಣದೊಳಗೆ ಪ್ರವೇಶ ಮಾಡುವದರ ಜೊತೆಗೆ ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡತೊಡಗಿವೆ ಕೆಲವು ಬಡಾವಣೆಗಳಲ್ಲಿಯ ದೊಡ್ಡ ಮರಗಳಲ್ಲಿ ಜಿಗಿದಾಟ ನಡೆಸುತ್ತಿದ್ದರೆ ಇನ್ನೂ ಕೆಲವು ಮಂಗಗಳು ಬಡಾವಣೆಯ ಮನೆಯ ಬಾಗಿಲು ತೆಗೆದಿದ್ದರೆ ಸಾಕು ಮನೆಯೊಳಗೆ ನುಗ್ಗುತ್ತಿವೆ ಅಲ್ಲೇ ಶಾಲಾ ಕಾಲೇಜುಗಳು ಪ್ರವೇಶಿಸಿ ತಮ್ಮ ಬಿದ್ದಿ ಪ್ರದರ್ಶಿಸುತ್ತಿವೆ, ಮಂಗಗಳನ್ನು ಬೇರೆಡೆ ಸಾಗಿಸುವ ಕುರಿತು ಸಾರ್ವಜನಿಕರು ಈಗಾಗಲೇ ಸಾಕಷ್ಟು ಭಾರಿ ಅರಣ್ಯ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಮೌಖಿಕವಾಗಿ ತಿಳಿಸಿದರೂ ಕೂಡಾ ಕ್ಯಾರೆ ಎನ್ನುತ್ತಿಲ್ಲಾ.
ಇನ್ನು ಕೆಲವು ಬಡಾವಣೆಗಳಲ್ಲಿ ಬೃಹತ್ ಆಕಾರದ ನೂರಾರು ವರ್ಷಗಳ ಹಳೆಯ ಮರಗಳು ಗಾಳಿಗೆ ಉರುಳಿ ಬಿದ್ದ ಪ್ರಸಂಗಗಳು ನಡೆದಿವೆ ಇವುಗಳನ್ನು ಕೂಡಲೇ ತೆರವುಗೊಳಿಸಿ ಹೊಸ ಗಿಡಗಳನ್ನು ನೆಡಬೇಕೆಂಬ ಯೋಚನೆಯೊಂದಿಗೆ ವಾಲಿರುವ ಮರಗಳ ತೆರವಿಗೆ ತಿಳಿಸಿದರೂ ಕೂಡಾ ಅವುಗಳನ್ನು ತೆರವುಗೊಳಿಸುವ ಗೋಜಿಗೆ ಹೋಗುತ್ತಿಲ್ಲಾ ಬೃಹತ್ ಮರಗಳ ಟೊಂಗೆಗಳು ಕೆಲವು ಬಡಾವಣೆಗಳ ಮನೆಗಳ ಮೇಲೆ ಬಿದ್ದು ಗೋಡೆಗಳು ಕುಸಿದಿವೆ ಅಲ್ಲದೇ ಕೆಲವು ಕಡೆ ವಿದ್ಯುತ್ ವಾಯರ್‍ಗಳ ಮೇಲೆ ಬಿದ್ದಿದ್ದರಿಂದ ವಾಯರ್‍ಗಳು ಕೂಡಾ ಹರಿದು ನೆಲಕ್ಕೆ ಬಿದ್ದಿವೆ ಆದರೆ ಈ ಘಟನಾವಳಿಯಲ್ಲಿ ಯಾವ ಜೀವಹಾನಿಯಾಗಿಲ್ಲಾವೆಂಬುದು ನೆಮ್ಮದಿ ಬಿಟ್ಟರೆ ಯಾವ ಹೊತ್ತಿನಲ್ಲಿ ಯಾರಬಲಿ ತೆಗೆದುಕೊಳ್ಳುತ್ತವೆ ಎಂಬ ಆತಂಕ ಜನರಲ್ಲಿ ಕಾಡತೊಡಗಿವೆ.
ಒಂದು ವಾರದ ಹಿಂದೆ ಪಟ್ಟಣದ ಪೊಲೀಸ್ ಸ್ಟೇಷನ್ ಹತ್ತಿದ ನಾಗಪ್ಪನಕಟ್ಟಿಯಬಳಿ ಬೃಹತ್ ಮರವು ಗಾಳಿಗೆ ರಸ್ತೆಗೆ ಉರುಳಿ ಬಿದ್ದಿತ್ತು ಎರಡುದಿನಗಳಾದರೂ ಇದನ್ನು ತೆರವುಗೊಳಿಸುವ ಗೋಜಿಗೆ ಅರಣ್ಯ ಅಧಿಕಾರಿಗಳು ಹೋಗದ ಕಾರಣ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಪುರಸಭೆ ಸಿಬ್ಬಂದಿಗಳ ಸಹಾಯದ ಮೂಲಕ ತೆರವುಗೊಳಿಸಿಕೊಂಡ ಘಟನೆ ನಡೆದಿದೆ.
ಇನ್ನೂ ತಾಳಿಕೋಟೆ ನಗರದ ಅಲ್ಲದೇ ಪ್ರಮುಖ ಮುಖ್ಯ ರಸ್ತೆಗಳ ಮಗ್ಗಲಿಗೆ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡಲಾಗಿದೆ ಅದರೆ ಅವುಗಳ ಪೋಷಿಸುವ ಕಾರ್ಯಮತ್ರವಾಗುತ್ತಿಲ್ಲಾ ರಸ್ತೆಪಕ್ಕ ಹಚ್ಚಿದ ಸಸಿಗಳಿಗೆ ನೀರುಣಿಸುವ ಕಾರ್ಯ ನಡೆಯದ್ದರಿಂದ ಅವುಗಳು ಒಣಗಿಹೋಗುತ್ತಿವೆ ಮೊದಲೇ ಬಿಸಿಲಿನ ತಾಪ ಹೆಚ್ಚುತ್ತಾ ಸಾಗಿದ್ದರಿಂದ ಭೂಮಿಯ ಪಾತಾಳದ ಮೇಲೆ ನಡೆಯುವದೇ ದುಸ್ಥರವೆಂಬ ಸಂದರ್ಬದಲ್ಲಿ ಸಸಿಗಳಿಗೆ ನೀರುಣಿಸದಿದ್ದರೆ ಅವುಗಳ ಇದ್ದ ಸ್ಥಳದಲ್ಲಿಯೇ ಒಣಗಿನಿಲ್ಲುತ್ತಿವೆ.
ಅರಣ್ಯ ಇಲಾಖೆಯಿಂದ ಕೇವಲ ಸಸಿಗಳನ್ನು ನೆಡುವ ಕಾರ್ಯ ಮಾತ್ರವಲ್ಲಾ ಅವುಗಳನ್ನು ಪೋಷಿಸುವ ಕಾರ್ಯವನ್ನೂ ಕೂಡಾ ಮಾಡಬೇಕು ಕೆಲವುಕಡೆಗಳಲ್ಲಿ ಮರಗಳ ಮಾರಣಹೋಮ ನಡೆಯುವದನ್ನು ತಡೆಗಟ್ಟಬೇಕು ಅಲ್ಲದೇ ಪ್ರಾಣಿ ಪಕ್ಷೀ ಸಂಕುಲಗಳನ್ನು ಸಂರಕ್ಷೀಸುವದರೊಂದಿಗೆ ಅವುಗಳಿಗೆ ವ್ಯವಸ್ಥೆ ಕಲ್ಪಿಸುವಂತಹ ಕೆಲಸ ಮಾಡಬೇಕು ಆದರೆ ಅರಣ್ಯ ಅಧಿಕಾರಿಗಳಿಂದ ಯಾವುದೇ ಕಾರ್ಯ ಕಂಡುಬರುತ್ತಿಲ್ಲಾ ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರಸ್ತೆಬದಿ ಹಚ್ಚಿದ ಸಸಿಗಳಿಗೆ ಅರಣ್ಯ ಅಧಿಕಾರಿಗಳೇ ಮರಣಶಾಸನ ಬರೆದಂತಿದೆ. ಕೆಲವು ನೂರಾರು ವರ್ಷಗಳ ಹಳೆಯ ಮರಗಳು ಗಾಳಿಗೆ ಉರುಳಿ ಬಿದ್ದು ಬಲಿಗಾಗಿ ಕಾಯ್ದಂತೆ ಎದ್ದು ಕಾಣುತ್ತಿವೆ.
ಬಡಾವಣೆಗಳಲ್ಲಿ ಮಂಗಗಳು ಮಹಿಳೆಯರು ಮತ್ತು ಮಕ್ಕಳ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗಿವೆ ಮಂಗಗಳನ್ನು ಕಾಡಿಗೆ ಅಟ್ಟುವಲ್ಲಿ ಅಥವಾ ಪುನರ್ವಸತಿ ಕಲ್ಪಿಸುವಲ್ಲಿ ಅರಣ್ಯ ಇಲಾಖೆಯು ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಭಲವಾಗಿ ಕೇಳಿಬರುತ್ತಿದೆ.
ಮಂಗಗಳನ್ನು ಹಿಡಿದು ಕಾಡಿನಲ್ಲಿ ಬಿಡುವ ಕಾರ್ಯಚರಣೆಯನ್ನು ಅಧಿಕಾರಿಗಳು ತೀವ್ರಗೊಳಿಸಬೇಕು. ಜನವಸತಿ ಪ್ರದೇಶಗಳಿಗೆ ಬರದಂತೆ ತಡೆಯಲು ಅರಣ್ಯದ ಅಂಚಿನಲ್ಲಿ ಆಹಾರ ಮತ್ತು ನೀರು ಒದಗಿಸಬೇಕು. ರಸ್ತೆಪಕ್ಕ ಹಚ್ಚಿದ ಸಸಿಗಳಿಗೆ ನೀರುಣಿಸುವ ಕಾರ್ಯಕ್ಕೆ ಕೂಡಲೇ ಮುಂದಾಗಿ ಸಸಿಗಳನ್ನು ಸಂರಕ್ಷೀಸುವ ಕಾರ್ಯಕ್ಕೆ ಮುಂದಾಗಬೇಕೆಂಬುದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
—- ————————
ಸಸಿಗಳನ್ನು ನೆಡುವದರ ಜೊತೆಗೆ ಪೋಷಿಸುವಂತಹ ಕಾರ್ಯ ಅರಣ್ಯ ಅಧಿಕಾರಿಗಳು ಮಾಡಬೇಕು ಆದರೆ ಹಚ್ಚಿದ ಸಸಿಗಳಿಗೆ ನೀರುಣಿಸದೇ ಅವುಗಳಿಗೆ ಅಧಿಕಾರಿಗಳೇ ಮರಣಶಾಸನ ಬರೆಯುತ್ತಿರುವದು ದುರದೃಷ್ಠಕರ, ಮಂಗಗಳು ಬಡಾವಣೆಯಲ್ಲಿಯ ಮನೆಗಳಿಗೆ ಅಲ್ಲದೇ ಶಾಲಾ ಕಾಲೇಜುಗಳಿಗೆ ನುಗ್ಗಿ ಕಿರಿಕಿರಿ ಮಾಡುತ್ತಿವೆ ಅವುಗಳನ್ನು ಅರಣ್ಯಕ್ಕೆ ರವಾನಿಸುವ ಕಾರ್ಯವಾಗುತ್ತಿಲ್ಲಾ ನೂರಾರು ವರ್ಷಗಳ ಗಿಡ ಮರಗಳ ಟೊಂಗೆಗಳು ಗಾಳಿಗೆ ಮುರಿದು ಬಿದ್ದಿವೆ ಅಂತವುಗಳನ್ನು ತೆರವುಗೊಳಿಸಿ ಹೊಸ ಸಸಿಗಳನ್ನು ನೆಡುವ ಕಾರ್ಯ ಮಾಡಬೇಕು ಇಲ್ಲದಿದ್ದರೆ ಕರವೇ ಸಂಘಟನೆಯಿಂದ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ.
ನಿಸಾರ ಬೇಪಾರಿ
ಕರವೇ ಸಂಘಟನೆಯ ತಾಲೂಕಾ ಅಧ್ಯಕ್ಷ
ಮಂಗಗಳ ಉಪಟಳ ಬಗ್ಗೆ ದೂರು ಬಂದಿತ್ತು ಮಂಗಗಳ ಹಿಡಿಯಲು ತರಬೇತಿ ಹೊಂದಿದವರನ್ನು ಕರೆಸಲು ಖರ್ಚು ತಗಲುತ್ತದೆ ಈ ಕುರಿತು ಖರ್ಚು ಬರಿಸುವ ಕುರಿತು ಪುರಸಭೆಗೆ ಲೇಟರ್ ಬರೆದಿದ್ದೇವೆ ಮತ್ತು ರಸ್ತೆಬದಿಗೆ ನಮ್ಮ ಇಲಾಖೆಯಿಂದ ಹಚ್ಚಲಾದ ಸಸಿಗಳಿಗೆ ಎರಡು ಭಾರಿ ನೀರುಣಿಸಲು ಅವಕಾಶವಿದೆ ಸಸಿಗಳು ಒಣಗುತ್ತಿರುವ ಬಗ್ಗೆ ಮಾಹಿತಿ ಇಲ್ಲಾ ಪರಿಶೀಲಿಸುತ್ತೇನೆ ನೂರಾರು ವರ್ಷಗಳ ಬೃಹತ್ ಮರಗಳಲ್ಲಿ ಪುರಾತನ ನಂಬಿಕೆ ಜನರದ್ದು ಇರುತ್ತದೆ ಇದರಿಂದ ತೆರವುಗೊಳಿಸಿಲ್ಲಾ ತೆರವುಗೊಳಿಸುವ ಕುರಿತು ಯಾರಾದರೂ ತಿಳಿಸಿದರೆ ಅಂತವುಗಳನ್ನು ತೆರವುಗೊಳಿಸುತ್ತೇವೆ.
ಬಿ.ಆಯ್.ಬಿರಾದಾರ ಪ್ರಾದೇಶಿಕ ಅರಣ್ಯ ಅಧಿಕಾರಿ.
ಮಂಗಗಳ ಹಿಡಿಯಲು ತರಬೇತಿ ಹೊಂದಿದವರನ್ನು ಕರೆಸಲು ಖರ್ಚು ಬರಿಸಲು ಪುರಸಭೆಯಿಂದ ಸಿದ್ದರಿದ್ದೇವೆ ಅರಣ್ಯ ಇಲಾಖೆಯಿಂದ ತರಬೇತಿದಾರರನ್ನು ಕರೆಸುವ ಮತ್ತು ಅದಕ್ಕೆ ತಗಲುವ ವೆಚ್ಚದ ಬಗ್ಗೆ ಯಾವುದೇ ಲೇಟರ್ ನಮಗೆ ಬರೆದಿಲ್ಲಾ ಹಾಗೇನಾದರೂ ಅರಣ್ಯ ಇಲಾಖೆಯಿಂದ ಖರ್ಚು ಭರಿಸುವ ಕುರಿತು ಲೇಟರ್ ಬಂದರೆ ಖರ್ಚು ಭರಿಸಲು ಸಿದ್ದರಿದ್ದೇವೆ. ನೂರಾರು ವರ್ಷಗಳ ಹಳೆಯ ಮರಗಳು ಕೆಲವೆಡೆ ರಸ್ತೆಗೆ ಉರುಳಿ ಬಿದ್ದಿದ್ದವು ಅವುಗಳನ್ನು ನಮ್ಮ ಪುರಸಭೆಯ ಸಿಬ್ಬಂದಿಗಳ ಮೂಲಕ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ.
ವಸಂತ ಪವಾರ ಪುರಸಭೆ ಮುಖ್ಯಾಧಿಕಾರಿ ತಾಳಿಕೋಟೆ






















